Advertisement

ಬಾಲಕನಿಗೆ ನೆರವಾದ ಫೇಸ್‌ಬುಕ್‌ ಸಂದೇಶ

01:37 AM Jun 07, 2019 | Sriram |

ನರಗುಂದ: ಸರ್ಕಾರಿ ಶಾಲೆಯಲ್ಲಿ ಆರನೇ ತರಗತಿ ಓದುತ್ತಿರುವ ಆ ಬಾಲಕ ಪ್ರತಿಭಾವಂತ. ಅಲ್ಲದೇ ತಂದೆ-ತಾಯಿಗೆ ನೆರವಾಗಲು ಶಾಲೆ ಅವಧಿ  ಬಳಿಕ ಬುಟ್ಟಿಯಲ್ಲಿ ಹಣ್ಣು ಹೊತ್ತು ಮಾರುತ್ತ ನೆರವಾಗುತ್ತಿದ್ದವನಿಗೆ ಈಗ ಫೇಸ್‌ಬುಕ್‌ ಸಂದೇಶ ವಿದ್ಯಾಭ್ಯಾಸದ ನೆರವು ಕಲ್ಪಿಸಿದೆ.

Advertisement

ಮೂಲತಃ ಬೈಲಹೊಂಗಲ ತಾಲೂಕು ಸವಟಗಿ ಗ್ರಾಮದ ಬಾಲಕ ಈರಣ್ಣ ಯಡಹಳ್ಳಿ ಸದ್ಯ ಪಟ್ಟಣದ ನಂ.1 ಶಾಸಕರ ಸರ್ಕಾರಿ ಮಾದರಿ ಕೇಂದ್ರ ಶಾಲೆಯಲ್ಲಿ 6ನೇ ತರಗತಿಯಲ್ಲಿ ಓದುತ್ತಿದ್ದಾನೆ. ತಂದೆ ಹೋಟೆಲ್‌ ವೊಂದರಲ್ಲಿ ಕೆಲಸ ಮಾಡುತ್ತಿದ್ದು, ತಾಯಿ ಹಣ್ಣು ಮಾರಿ ಜೀವನ ಸಾಗಿಸುತ್ತಿದ್ದಾರೆ.

ದಿನದ ಈತನ ಕಾಯಕ ನೋಡಿದ ಪಟ್ಟಣದ ಮಂಜುನಾಥ ಗುಗ್ಗರಿ ಎಂಬುವರು ಈತನನ್ನು ಮಾತನಾಡಿಸಿದಾಗ, “ಅಪ್ಪ, ಅವ್ವ ಬಾಳ ಕೆಲ್ಸಾ ಮಾಡ್ತಾರಿ.ಅದಕ್ಕ ನಾನೂ ಅವರಿಗೆ ಒಂದಿಷ್ಟು ಸಹಾಯ ಮಾಡ್ತಿದ್ದೀನಿ’ ಎಂದು ತಿಳಿಸಿದಾಗ ಮೆಚ್ಚಿಕೊಂಡ ಮಂಜುನಾಥ ಗುಗ್ಗರಿ ಅವರು ಚಿತ್ರಸಹಿತ ಬಾಲಕನ ಕುರಿತು ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದರು. ಇದನ್ನು ಗಮನಿಸಿದ ಶಾಸಕ ಸಿ.ಸಿ.ಪಾಟೀಲ ಅವರ ಪುತ್ರ ಉಮೇಶಗೌಡ ಪಾಟೀಲ ಮಂಜುನಾಥ ಗುಗ್ಗರಿ ಮೂಲಕ ಈರಣ್ಣ ಯಡಹಳ್ಳಿ ಬಾಲಕನನ್ನು ಕರೆಯಿಸಿ ಆತನಿಗೆ 2 ವರ್ಷಕ್ಕಾಗುವಷ್ಟು ನೋಟ್‌ಬುಕ್‌, ಪುಸ್ತಕ ಮುಂತಾದ ಸಾಮಗ್ರಿ ನೀಡಿದ್ದಲ್ಲದೇ, ಆತನ ಆಸಕ್ತಿ ಗಮನಿಸಿ 10ನೇ ವರ್ಗದವರೆಗೆ ಆತನ ವಿದ್ಯಾಭ್ಯಾಸಕ್ಕೆನೆರವಾಗುವ ಭರವಸೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next