Advertisement
ಆದರೆ ಪ್ರತಿನಿತ್ಯ ನೂತನ ಪ್ರಯೋಗಗಳಿಂದ ಅಪಾರ ಬಳಕೆದಾರರನ್ನು ಹೊಂದಿರುವ ಫೇಸ್‌ಬುಕ್ ಎಂದಿಗೂ ನನ್ನನ್ನು ಕೆಟ್ಟ ಉದ್ದೇಶಗಳಿಗೆ ಬಳಸಿ ಎಂದು ಹೇಳಿಲ್ಲ. ಸಾಮಾಜಿಕ ತಾಣವಾಗಿ ಹುಟ್ಟಿಕೊಂಡ ಈ ವೇದಿಕೆ ಇಂದು ಹಲವಾರು ವಿಷಯಗಳನ್ನು ಹಂಚಿಕೊಳ್ಳುವಲ್ಲಿ ಕಾರ್ಯನಿರತವಾಗಿದೆ.
Related Articles
Advertisement
ಆತ್ಮಹತ್ಯೆ ತಡೆ ಕುರಿತು ಅರಿವು ಮೂಡಿಸಲು ಮುಂದಾಗಿರುವ ಫೇಸ್ ಬುಕ್, ಆತ್ಮಹತ್ಯೆಗೆ ಕಾರಣಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಶೈಕ್ಷಣಿಕ ಸಂಶೋಧನೆಯನ್ನು ನಡೆಸುವ ಯೋಜನೆ ಹಾಕಿಕೊಂಡಿದೆ. ಜತೆಗೆ ಈ ವರದಿಯನ್ನು ದಿನಪತ್ರಿಕೆ ಹಾಗೂ ಚಾನೆಲ್‌ಗಳೊಂದಿಗೆ ಹಂಚಿಕೊಳ್ಳುವ ಮೂಲಕ ಆತ್ಮಹತ್ಯೆ ಕೃತ್ಯಗಳ ಕುರಿತು ಅರಿವು ಮೂಡಿಸಲಿದೆ.
ಮನೋಸ್ಥರ್ಯದ ಬೆಂಬಲ
ಹಿಂದಿನ ವರದಿಗಳಲ್ಲಿ ಮಾನಸಿಕ ಒತ್ತಡಗಳಿಂದ ಹೆಚ್ಚು ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಾಬೀತಾಗಿದ್ದು, ಈ ಸಮಸ್ಯೆಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಆರೋಗ್ಯ ತಜ್ಞರನ್ನು ನಿಯೋಜಿಸಿಕೊಳ್ಳುತ್ತಿದ್ದು, ಒತ್ತಡದಂತಹ ಸಮಸ್ಯೆಗಳಿಗೆ ಪರಿಹಾರ ನೀಡುವ ಮೂಲಕ ಮನೋ ಬೆಂಬಲವನ್ನು ನೀಡುವ ಅಭಿಲಾಷೆ ಫೇಸ್ ಬುಕ್ ಇಟ್ಟಿಕೊಂಡಿದೆ.
ಸಾಫ್ಟ್ ವೇರ್ ಅಳವಡಿಕೆ
ಸ್ವಯಂ ಹಾನಿಗೆ ಅಥವಾ ಆತ್ಮಹತ್ಯೆ ಸಂಬಂಧಿತ ಪೋಸ್ಟ್‌ಗಳನ್ನು ಹುಡುಕಲು ಫೇಸ್ ಬುಕ್ ನೂತನ ಸಾಫ್ಟ್ ವೇರ್ ಅನ್ನು ಕಂಡು ಹಿಡಿದಿದ್ದು, ಆತ್ಮಹತ್ಯೆ ಅನ್ನು ತಡೆಗಟ್ಟುವುದರೊಂದಿಗೆ ಭಯೋತ್ಪಾದನೆ ಅಶ್ಲೀಲತೆಯನ್ನು ಉತ್ತೇಜಿಸುವ ಪೋಸ್ಟ್‌ಗಳನ್ನು ಇದು ಪತ್ತೆ ಹಚ್ಚಲಿದೆ.
1.5 ಮಿಲಿಯನ್ ಪ್ರಕರಣಗಳು ಪತ್ತೆ
ಏಪ್ರಿಲ್ ಮತ್ತು ಜೂನ್ ನಡುವೆ ಸುಮಾರು 1.5 ಮಿಲಿಯನ್‌ಗಿಂತಲೂ ಹೆಚ್ಚು ಆತ್ಮಹತ್ಯೆ ಹಾಗೂ ಸ್ವಯಂ ಹಾನಿ ಮಾಡಿಕೊಳ್ಳುವಂತಹ ಪ್ರಕರಣಗಳು ದಾಖಲಾಗಿದ್ದು, ಶೇ 95 ರಷ್ಟು ಇದಕ್ಕೂ ಮುನ್ನ ಚಿತ್ರಣಗಳನ್ನು ಫೇಸ್‌ಬುಕ್‌ನಿಂದ ಡಿಲಿಟ್ ಮಾಡಲಾಗಿದೆ. ಇದರೊಂದಿಗೆ ಇನ್ ಸ್ಟಾಗ್ರಾಮ್ ನಲ್ಲಿಯೂ 800,000 ಕ್ಕೂ ಹೆಚ್ಚು ಈ ಸಂಬಂಧಿ ವಿಷಯಗಳನ್ನು ಪತ್ತೆ ಹಚ್ಚಲಾಗಿದೆ.
ವಿಡಿಯೋ ಕಂಡರೆ ಸೂಕ್ತ ಕ್ರಮ
ಫೇಸ್‌ಬುಕ್ ಬಳಕೆ ಮಾಡಿಕೊಂಡು ಲೈವ್ ಆಗಿ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ ಇತ್ತೀಚೆಗೆ ಜಾಸ್ತಿಯಾಗಿದೆ. ಸೆಲ್ಫಿà ವಿಡಿಯೋ ಮಾಡುವ ಮೂಲಕ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದವರನ್ನು ಕೂಡಲೇ ಪತ್ತೆ ಹಚ್ಚಿ ಆತ್ಮಹತ್ಯೆ ಮಾಡಿಕೊಳ್ಳದಂತೆ ತಡೆಯಲಾಗುತ್ತಿದೆ. ಜತೆಗೆ ಇಂತಹ ವಿಡಿಯೋಗಳನ್ನು ವೈರಲ್ ಮಾಡದಂತೆ ಸೂಕ್ತ ಕ್ರಮಗಳನ್ನು ತೆಗೆದು ಕೊಳ್ಳಲಾಗಿದೆ.