ಬೆಂಗಳೂರು: ವಿಶ್ವದಾದ್ಯಂತ ಈಗೇನಿದ್ದರೂ ಕೋವಿಡ್ 19 ವೈರಸ್ ಹಾವಳಿಯಾಗಿಬಿಟ್ಟಿದೆ. ಹೀಗಾಗಿ
ಫೇಸ್‌ಬುಕ್ ತನ್ನ ಉದ್ಯೋಗಿಗಳಿಗೆ ಸಹಾಯ ಆಗಲಿ ಎಂದು ಹಣದ ಸಹಾಯಕ್ಕೆ ಮುಂದಾಗಿದ್ದು ತನ್ನ 45,000 ಉದ್ಯೋಗಿಗಳಿಗೆ ತಲಾ 75,000 ರುಪಾಯಿ ಬೋನಸ್ ನೀಡಲಿದೆ. ಫೇಸ್‌ಬುಕ್ ಸಂಸ್ಥಾಪಕ ಹಾಗೂ ಸಿಇಒ
ಮಾರ್ಕ್ ಜುಕರ್‌ಬರ್ಗ್ ಈ ಘೋಷಣೆ ಮಾಡಿದ್ದು ತನ್ನ ಎಲ್ಲಾ ಉದ್ಯೋಗಿಗಳಿಗೆ ಕಳೆದ ಆರು ತಿಂಗಳ ಖರ್ಚಿಗಾಗಿ ಬೋನಸ್ ಪಡೆಯಲಿದ್ದಾರೆ. ಫೇಸ್‌ಬುಕ್ ತನ್ನ 16 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿ ಇಂತಹ ಘೋಷಣೆ ಮಾಡುತ್ತಿದೆ.
ಇನ್ನು ಫೇಸ್‌ಬುಕ್ ತನ್ನ ನೌಕರರಿಗೆ ಬೋನಸ್ ರೂಪದಲ್ಲಿ ಹಣ ನೀಡುತ್ತಿದ್ದರೆ, ಅತ್ತ ಒಂದು ಕಡೆ ಸಂಪತ್ತು ಕಡಿಮೆಯಾಗಿದೆ. ಕೋವಿಡ್ 19 ವೈರಾಣು ಎಬ್ಬಿಸಿರುವ ಆತಂಕಕ್ಕೆ ವಿಶ್ವದ ಸಂಪತ್ತು ಕರ್ಪೂರದಂತೆ ಕರಗುತ್ತಿದೆ. ವಿಶ್ವದ ಅತ್ಯಂತ ಶ್ರೀಮಂತರು 200 ಬಿಲಿಯನ್ ಸಂಪತ್ತು ಕಳೆದುಕೊಂಡಿದ್ದಾರೆ.
ಇನ್ನೂರು ಬಿಲಿಯನ್ ಅಂದರೆ, 20 ಸಾವಿರ ಕೋಟಿ ಅಮೆರಿಕನ್ ಡಾಲರ್. (1 ಬಿಲಿಯನ್ ಅಂದರೆ ನೂರು ಕೋಟಿ, 1 ಮಿಲಿಯನ್ ಅಂದರೆ ಹತ್ತು ಲಕ್ಷ)
– ಜೆಫ್ ಬೆಜೋಸ್: 5 ಬಿಲಿಯನ್ ಅಮೆರಿಕನ್ ಡಾಲರ್
– ಬಿಲ್ ಗೇಟ್ಸ್: 2 ಬಿಲಿಯನ್
– ಮುಕೇಶ್ ಅಂಬಾನಿ: 900 ಮಿಲಿಯನ್
– ಮಾರ್ಕ್ ಝುರ್ಕ ಬರ್ಗ್: 3 ಬಿಲಿಯನ್
– ಬರ್ನಾರ್ಡ್ ಅರ್ನಾಲ್ಟ…: 5 ಬಿಲಿಯನ್
– ಅಮಾನ್ಸಿಯೋ ಒರ್ಟೆಗಾ: 4 ಬಿಲಿಯನ್