Advertisement
ಕೇವಲ್ ಫೇಸ್ಬುಕ್ ಮಾತ್ರವಲ್ಲದೇ ತನ್ನದೇ ಪೋಟೋ ಹಂಚಿಕೆ ತಾಣವಾದ ಇನ್ಸ್ಟಾಗ್ರಾಂನಲ್ಲೂ ಇದೇ ತಾಂತ್ರಿಕ ಲೋಪ ಕಂಡು ಬಂದಿದೆ. ಕೆಲವು ರಾಷ್ಟ್ರಗಳಲ್ಲಿ ವಾಟ್ಸಾಪ್ ಗಳು ಕೆಲಸ ಮಾಡುತ್ತಿಲ್ಲ.
ಫೇಸ್ಬುಕ್, ಇನ್ಸ್ಟಾಗ್ರಾಂ ಹಾಗೂ ಕೆಲವು ರಾಷ್ಟ್ರಗಳಲ್ಲಿ ವಾಟ್ಸಾಪ್ ಸರಿಯಾಗಿ ಕೆಲಸ ನಿರ್ವಹಿಸದ ಹಿನ್ನಲೆಯಲ್ಲಿ ಬಳಕೆದಾರರು ಸಂಸ್ಥೆಯ ವಿರುದ್ಧ ಆಕ್ರೋಶಗೊಂಡಿದ್ದಾರೆ. ಟ್ವೀಟರ್ನಲ್ಲಿ ಈ ಸಂಬಂಧ ಹ್ಯಾಶ್ಟ್ಯಾಗ್ ಮೂಲ ಅಭಿಯಾನವೂ ನಡೆಯುತ್ತಿದೆ. ಅತೀ ಹೆಚ್ಚು ಬಳಕೆದಾರರನ್ನು ಹೊಂದಿರುವ ಈ ಮೂರು ಸಂಸ್ಥೆಗಳ ಸರ್ವರ್ಗಳಲ್ಲಿ ತೊಂದರೆಗಳು ಕಾಣಿಸಿಕೊಂಡಾಗ ಈ ಸಮಸ್ಯೆಗಳು ಉಂಟಾಗುತ್ತದೆ. ಕಳೆದ ತಿಂಗಳು ಫೇಸ್ಬುಕ್, ಇನ್ಸ್ಟಾಗ್ರಾಂ ಮತ್ತು ವಾಟ್ಸಾಪ್ ಗಳಲ್ಲಿ ಪೋಟೋ ಅಪ್ಲೋಟ್ ಮತ್ತು ಡೌನ್ಲೋಡ್ ಸೇವೆಗಳಲ್ಲಿ ವ್ಯತ್ಯಯ ಕಂಡು ಬಂದಿತ್ತು. ಫೇಸ್ಬುಕ್ ತಕ್ಷಣ ಸೇವೆಯನ್ನು ಸಹಜ ಸ್ಥಿತಿಗೆ ತಂದಿರುವುದನ್ನು ಇಲ್ಲಿ ಸ್ಮರಿಸಬಹುದು.