ನವದೆಹಲಿ: ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ನಲ್ಲಿ ಬಿಸಿನೆಸ್‌ಗಾಗಿ ಭಾರತೀಯ ಗ್ರಾಹಕರಿಗೆ ದೃಢೀಕೃತ ಚಂದಾದಾರಿಕೆ ಪ್ಲ್ಯಾನ್‌ಗಳನ್ನು ಮೆಟಾ ಕಂಪನಿ ಬುಧವಾರ ಪರಿಚಯಿಸಿದೆ. ಈ ಕುರಿತು ಕಳೆದ ವರ್ಷ ಭಾರತದಲ್ಲಿ ಪರೀಕ್ಷೆ ನಡೆಸಲಾಗಿತ್ತು. ಹಾಗಾಗಿ ಈ ವರ್ಷ ಫೇಸ್‌ಬುಕ್, ಇನ್ ಸ್ಟಾಗ್ರಾಮ್‌ಗಳಿಗೆ ಮೆಟಾ ದೃಢೀಕೃತ ಚಂದದಾರಿಕೆಗಳನ್ನು ಇನ್ನಷ್ಟು ವೈಶಿಷ್ಟ್ಯಗಳು ಮತ್ತು ಬೆಂಬಲದೊಂದಿಗೆ ನೀಡುವುದಾಗಿ ಮೆಟಾ ಹೇಳಿದೆ.
ಈ ಪ್ಲ್ಯಾನ್ ಒಂದು ತಿಂಗಳಗೆ 639 ರೂ.ನಿಂದ ಶುರುವಾಗುತ್ತದೆ ಮತ್ತು ಆರಂಭದ ರಿಯಾಯಿತಿಯೊಂದಿಗೆ ಎರಡೂ ಆ್ಯಪ್ ಗಳಿಗೆ
ತಿಂಗಳಿಗೆ 21,000 ರೂ.ವರೆಗೂ ಹೆಚ್ಚಲಿದೆ. ಚಂದಾದರಿಕೆ ಪಡೆದ ಬಳಕೆದಾರರಿಗೆ ಅಧಿಕೃತ ಬ್ಲೂಟಿಕ್ ದೊರೆಯಲಿದೆ. ಇದರ ಜತೆಗೆ ಹೆಚ್ಚಿನ ಫೀಚರ್‌ಗಳನ್ನು ಒದಗಿಸಲಿದೆ.
ಬ್ಲೂಟಿಕ್ ಪಡೆಯುವುದರಿಂದ ಖಾತೆಯ ವಿಶ್ವಾಸಾರ್ಹತೆ ಹೆಚ್ಚುವುದರಿಂದ ವ್ಯಾಪಾರಕ್ಕೆ ನೆರವಾಗಲಿದೆ ಎಂದು ಮೆಟಾ ಹೇಳಿದೆ.
ದೃಢೀಕೃತ ಚಂದಾದಾರರಿಗೆ ಚಾಟ್ ಅಥವಾ ಇ-ಮೇಲ್ ಸೇವೆ, ಕಾಲ್ ಬ್ಯಾಕ್ ಸರ್ವೀಸ್ ಸೇರಿದಂತೆ ಇನ್ನಿತರ ಫೀಚರ್‌ಗಳನ್ನು
ಒದಗಿಸುತ್ತದೆ. ಇದು ಫೇಸ್‌ಬುಕ್, ಇನ್‌ಸ್ಟಾಗ್ರಾಂ ಮೂಲಕ ವ್ಯಾಪಾರ ನಡೆಸುವವರಿಗೆ ಹೆಚ್ಚಿನ ಅನುಕೂಲ ತಂದುಕೊಡಲಿದೆ.