ನವದೆಹಲಿ: ಸಾಮಾಜಿಕ ಜಾಲತಾಣಗಳ ದೈತ್ಯ ಫೇಸ್ ಬುಕ್, ತನ್ನ ಇನ್ ಸ್ಟಾಗ್ರಾಂ ಹಾಗೂ ಮೆಸೆಂಜರ್ ಆ್ಯಪ್ ಗಳ ಚಾಟ್ ಗಳನ್ನು ವಿಲೀನಗೊಳಿಸಲು ಮುಂದಾಗಿದೆ ಎಂದು ವರದಿ ತಿಳಿಸಿದೆ. ಈ ಹೊಸ ಪ್ರಕ್ರಿಯೇ ಐಓಎಸ್ ಮತ್ತು ಆ್ಯಂಡ್ರಾಯ್ಡ್ ಎರಡರಲ್ಲೂ ಏಕಕಾಲಕ್ಕೆ ಜಾರಿಗೆ ಬರಲಿದೆ.
ಇದೀಗ ಇನ್ ಸ್ಟಾಗ್ರಾಂ ನಲ್ಲಿ ಹೊಸ ವಿಧಾನದ ಮೆಸೇಜ್ ಸೇವೆಯನ್ನು ಆರಂಭಿಸಲಾಗಿದೆ. ಆ್ಯಪ್ ಅಪ್ ಡೇಟ್ ಮಾಡಿದ ತಕ್ಷ
ಣ, ಪ್ರಸ್ತುತ ಇರುವು ಮೆಸೇಜ್ ಐಕಾನ್ ಬದಲಾಗಿ ಅಲ್ಲಿ ಫೇಸ್ ಬುಕ್ ಮೆಸೇಂಜರ್ ನ ಲೋಗೋ ಕಾಣಿಸಿಕೊಳ್ಳಲು ಆರಂಭಿಸುತ್ತದೆ ಎಂದು ಜೀ ನ್ಯೂಸ್ ವರದಿ ಮಾಡಿದೆ.
ಅದಾಗ್ಯೂ, ಫೇಸ್ ಬುಕ್ ನಲ್ಲಿ ಬರುವ ಮೆಸೇಜ್ ಗಳಿಗೆ ಇನ್ ಸ್ಟಾಗ್ರಾಂ ಮೂಲಕ ರಿಪ್ಲೈ ನೀಡಬಹುದೇ ಎಂಬ ಪ್ರೆಶ್ನೆಗೆ ಉತ್ತರ ಸಿಕ್ಕಿಲ್ಲ. ಇದು ಸಾಧ್ಯವೂ ಇಲ್ಲ ಎನ್ನುತ್ತಿದೆ ವರದಿಗಳು.
ಜಗತ್ತಿನಾದ್ಯಂತ ಫೇಸ್ ಬುಕ್ ಸೇರಿದಂತೆ ಇದರ ಸಹೋದರ ಆ್ಯಪ್ ಗಳನ್ನು 3.14 ಮಿಲಿಯನ್ ಜನರು ಬಳಸುತ್ತಿದ್ದಾರೆ. ಮಾತ್ರವಲ್ಲದೆ ಫೇಸ್ ಬುಕ್ ಇತ್ತೀಚಿಗೆ ತನ್ನ ಮೆಸೇಂಜರ್ ರೂಂಗೆ ಸಂಪರ್ಕ ಕಲ್ಲಿಸುವ ಸೇವೆಯನ್ನು ವಾಟ್ಸಾಪ್ ನಲ್ಲಿ ಜಾರಿಗೊಳಿಸಿತ್ತು. ಇದೀಗ ಬಳಕೆದಾರರು ವಾಟ್ಸಾಪ್ ಮೆಸೇಂಜರ್ ರೂಂ ಗಳ ಮೂಲಕ ಏಕಕಾಲಕ್ಕೆ 50 ಜನರಿಗೆ ವಿಡಿಯೋ ಕರೆ ಮಾಡಬಹುದು.
ಫೇಸ್‌ಬುಕ್, ಮೆಸೆಂಜರ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್ ನಡುವೆ ಪ್ಲಾಟ್‌ಫಾರ್ಮ್ ಒಂದನ್ನು ಸಂಯೋಜಿಸುವ ಯೋಜನೆಯಿದೆ ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್ ಇತ್ತೀಚಿಗೆ ಹೇಳಿದ್ದರು. ಮಾತ್ರವಲ್ಲದೆ ಇದೊಂದು ದೀರ್ಘಾವಧಿಯ ಯೋಜನೆ ಎಂಬುದನ್ನು ಬಹಿರಂಗಪಡಿಸಿದ್ದರು.