ಚೆನ್ನೈ: ಸ್ಮಾರ್ಟ್ ಫೋನ್‌ಗಳಲ್ಲಿ ಬಳಕೆ ಯಾಗುವ “ಫೇಸ್ ರೆಕಗ್ನಿಷನ್’ ತಂತ್ರಜ್ಞಾನ ವನ್ನು ಚೆನ್ನೈನ ಎರಡು ಸರಕಾರಿ ಶಾಲೆಗಳಲ್ಲಿ ನಿತ್ಯ ಹಾಜರಾತಿಗಾಗಿ ಅಳವಡಿಸಿ ಕೊಳ್ಳಲಾ ಗಿದೆ. ಚೆನ್ನೈ ಕಾರ್ಪೊರೇಷನ್ ನಡೆಸುತ್ತಿರುವ ಟ್ರಿಪ್ಲಿಕೇನ್ ಹೈ ರೋಡ್‌ನಲ್ಲಿರುವ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಟಿ. ನಗರ್‌ನಲ್ಲಿರುವ ಪ್ರಕಾಶಂ ರಸ್ತೆಯಲ್ಲಿರುವ ಸರಕಾರಿ ಶಾಲೆಯಲ್ಲಿ ಇದು ಜಾರಿಗೆ ಬಂದಿದ್ದು, ಇದರಿಂದಾಗಿ ಆ ಶಾಲೆಗಳ ಸರಾಸರಿ ಶೇ. 97ರಷ್ಟು ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಶಾಲೆಗೆ ಆಗಮಿ ಸಲಾರಂಭಿಸಿದ್ದಾರೆ.
ಈ ಕುರಿತಂತೆ ಮಾತನಾಡಿದ ಟ್ರಿಪ್ಲಿಕೇನ್ ಹೈ ರೋಡ್‌ನ ಶಾಲೆಯ ಮುಖ್ಯೋ ಪಾಧ್ಯಾಯಿನಿ ಎ. ಫೆಲ್ಸಿಯಾ ಸುಮಂಗಳಾ ದೇವಿ, ಈ ಮೊದಲು ಶಾಲೆಗೆ ಅನೇಕ ವಿದ್ಯಾರ್ಥಿಗಳು ತಡವಾಗಿ ಬರುತ್ತಿದ್ದರು.
9:15 ತರಗತಿಗಳು ಶುರುವಾದರೂ ಸುಮಾರು 60-70 ವಿದ್ಯಾರ್ಥಿಗಳು 10 ಗಂಟೆಯ ಅನಂತರವೇ ಬರುತ್ತಿದ್ದರು.
ಈಗ ಫೇಸ್ ರೆಕಾಗ್ನಿಶನ್ ಆಧಾರಿತ ಹಾಜರಾತಿ ಜಾರಿಗೆ ಬಂದ ಮೇಲೆ ತಡವಾಗಿ ಬರುವವರ ಸಂಖ್ಯೆ ಬೆರಳೆಣಿಕೆಯಷ್ಟಾಗಿದೆ ಎಂದಿದ್ದಾರೆ.
ತಮಿಳುನಾಡು ಸರಕಾರದ ಇ-ಗವರ್ನನ್ಸ್ ಏಜೆನ್ಸಿ (ಟಿಎನ್‌ಇಜಿಎ) ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ.
ತಿರುಚ್ಚಿಯಲ್ಲಿರುವ ಐಐಎಂನಲ್ಲೂ ಅಳವಡಿಸಲಾಗಿದೆ.