Advertisement

ಶಾಲೆಯಲ್ಲಿ ಫೇಸ್‌ ರಿಕಗ್ನಿಶನ್‌?

12:30 AM Sep 27, 2019 | mahesh |

ಹೊಸದಿಲ್ಲಿ: ಶಾಲೆಯಲ್ಲಿ ಮಕ್ಕಳು ಪಾಠದ ಕಡೆ ಗಮನ ಹರಿಸುತ್ತಿದ್ದಾರೆಯೇ ಇಲ್ಲವೇ, ಅವರು ಪ್ರಗತಿ ಸಾಧಿಸುತ್ತಿದ್ದಾರೆಯೇ, ಇಲ್ಲವೇ ಎಂಬುದನ್ನು ಗುರುತಿಸಲು ಫೇಸ್‌ ರಿಕಗ್ನಿಶನ್‌, ವೀಡಿಯೋ ಪ್ರೊಸೆಸಿಂಗ್‌ ಹಾಗೂ ಇಮೇಜ್‌ ಪ್ರೊಸೆಸಿಂಗ್‌ ಬಳಕೆಯ ಬಗ್ಗೆ ಭಾರತ ಮತ್ತು ಸಿಂಗಾಪುರದ ವಿದ್ಯಾರ್ಥಿಗಳು ಸಂಶೋಧನೆ ನಡೆಸುತ್ತಿದ್ದಾರೆ. ಇಂಡಿಯಾ- ಸಿಂಗಾಪುರ ಹ್ಯಾಕಥಾನ್‌ ಅಡಿಯಲ್ಲಿ ಈ ವಿದ್ಯಾರ್ಥಿಗಳ ತಂಡ ಸಂಶೋಧನೆ ನಡೆಸುತ್ತಿದ್ದು, ವಿಜೇತರಾದರೆ ಈ ವಿದ್ಯಾರ್ಥಿಗಳು ಪ್ರಧಾನಿ ನರೇಂದ್ರ ಮೋದಿಯವರಿಂದ ಪ್ರಶಸ್ತಿಯನ್ನು ಪಡೆಯಲಿದ್ದಾರೆ.

Advertisement

ಒಂದು ತಂಡದಲ್ಲಿ 6 ವಿದ್ಯಾರ್ಥಿಗಳು: ಈ ತಂಡದಲ್ಲಿ ಭಾರತ ಹಾಗೂ ಸಿಂಗಾಪುರದ ತಲಾ ಮೂರು ವಿದ್ಯಾರ್ಥಿಗಳಿದ್ದಾರೆ. ಇದೇ ರೀತಿ, 20 ತಂಡಗಳಿವೆ. ವಿವಿಧ ವಿಷಯಗಳ ಮೇಲೆ ಈ ತಂಡಗಳು ಕೆಲಸ ಮಾಡುತ್ತಿವೆ. ಒಂದು ತಂಡವು ವಿದ್ಯಾರ್ಥಿಗಳ ಭಾವನೆ ವಿಶ್ಲೇಷಣೆ ಅಧ್ಯಯನದಲ್ಲಿ ತೊಡಗಿದ್ದರೆ, ಇನ್ನೊಂದು ತಂಡವು ಸೆನ್ಸರ್‌ ಆಧರಿತ ಸ್ಮಾರ್ಟ್‌ ಬಿನ್‌ಗಳನ್ನು ಬಳಸಿ ವೈದ್ಯಕೀಯ ತ್ಯಾಜ್ಯವನ್ನು ಮರುಬಳಕೆ ಮಾಡುವ ಬಗ್ಗೆ ಅಧ್ಯಯನ ನಡೆಸುತ್ತಿದೆ. ಇದು ಎರಡನೇ ಆವೃತ್ತಿಯ ಭಾರತ-ಸಿಂಗಾಪುರ ಹ್ಯಾಕಥಾನ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next