Advertisement
ಕವಿಗಳ ಹೋಲಿಕೆಯಲ್ಲಿ ಬರುವ ಕಮಲದಂಥ ಕಣ್ಣುಗಳು ಯಾರಿಗೆ ಬೇಕಿಲ್ಲ? ಯಾಕಂದ್ರೆ, ಕಣ್ಣುಗಳು ಮನಸ್ಸಿನ ಕನ್ನಡಿಯಷ್ಟೇ ಅಲ್ಲ, ಹೆಣ್ಣಿನ ಅಂದದ ಮಾನದಂಡವೂ ಹೌದು. ಗಾಢ ಕಣ್ರೆಪ್ಪೆ ಇರುವ ಹುಡುಗಿಯರ ಕಣ್ಣು ಸಹಜವಾಗಿಯೇ ಆಕರ್ಷಕವಾಗಿ ಕಾಣುತ್ತದೆ. ಹಾಗಾದ್ರೆ, ಉಳಿದವರ ಪಾಡು? ಅವರಿಗಾಗಿ, ಕೃತಕ ಕಣ್ರೆಪ್ಪೆಗಳು ಇದ್ದೇ ಇವೆಯಲ್ಲ. ಅದನ್ನು ಬಳಸುವ ವಿಧಾನ ತಿಳಿದಿದ್ದರಾಯ್ತು.
Related Articles
Advertisement
– ಉತ್ತಮ ಗುಣಮಟ್ಟದ ಅಂಟನ್ನು ಬಳಸಿದರೆ ರೆಪ್ಪೆಗಳು ಜಾರುವ ಭಯವಿರುವುದಿಲ್ಲ.
– ಕೃತಕ ರೆಪ್ಪೆಗಳನ್ನು ಅಂಟಿಸಿದ ನಂತರ, ಅದರ ಮೇಲೆ ಐ ಲೈನರ್ ಹಚ್ಚಿಕೊಳ್ಳಿ. ಅದು ಕಣ್ಣುಗಳಿಗೆ ಸಾಫ್ಟ್ ಲುಕ್ ಕೊಡುತ್ತದೆ.
– ಈಗ ರೆಪ್ಪೆಯ ಬುಡಕ್ಕೆ (ಲ್ಯಾಷ್ ಲೈನ್) ಮೊದಲಿಗೆ ತೆಳುವಾಗಿ, ನಂತರ ಗಾಢವಾಗಿ ಕಲರ್ ಪೆನ್ಸಿಲ್‌ನಿಂದ ತೀಡಿ. ಇದು ಕಣ್ಣಿಗೆ ನೈಸರ್ಗಿಕ ಹೊಳಪು ನೀಡುತ್ತದೆ.
– ನಿಮ್ಮ ಡ್ರೆಸ್‌ನ ಕಲರ್‌ನದ್ದೇ ಪೆನ್ಸಿಲ್ ಬಳಸಿದರೆ, ಫ್ಯಾಷನೆಬಲ್ ಆಗಿ ಕಾಣುವಿರಿ.
– ಐ ಶ್ಯಾಡೋ ಹಲವಾರು ಬಣ್ಣಗಳಲ್ಲಿ ಲಭ್ಯವಿದ್ದು, ಬ್ರಷ್‌ನ ಮೂಲಕವೂ ಹಚ್ಚಬಹುದು.
– ಕಣ್ಣಿನ ರೆಪ್ಪೆಗಳಿಗೆ ಉತ್ತಮ ಆಕಾರ ಕೊಡಲು ಮಸ್ಕರವನ್ನೂ ಬಳಸಬಹುದು.
– ಮಸ್ಕರವನ್ನು ರೆಪ್ಪೆಗಳ ತುದಿಗೆ ಮಾತ್ರ ಹಚ್ಚಬೇಕು.ರೆಪ್ಪೆಯ ಬುಡ ಅತಿ ಸೂಕ್ಷ್ಮವಾಗಿರುವುದರಿಂದ ಸೋಂಕು ಉಂಟಾಗುವ ಅಪಾಯವಿರುತ್ತದೆ.
– ಡ್ರೆಸ್‌ಗೆ ಹೊಂದುವ ಬಣ್ಣದ ಲೆನ್ಸ್ ಅನ್ನು ಕೂಡಾ ಧರಿಸಬಹುದು.
– ಲೆನ್ಸ್‌ಗಳನ್ನು ಮೆಡಿಕಲ್ ಶಾಪ್‌ನಿಂದ ಖರೀದಿಸುವುದು ಉತ್ತಮ.
– ಕಣ್ಣಿನ ಮೇಕಪ್ ತೆಗೆಯುವ ಮುನ್ನ ಮೊದಲು ಲೆನ್ಸ್ ತೆಗೆದು, ನಂತರ ಇತರ ಮೇಕಪ್ ತೆಗೆಯಬೇಕು.