Advertisement

ಸರಕಾರಿ ತರಬೇತಿ ಕೇಂದ್ರದಿಂದ ಮುಖ ಕವಚ

03:40 PM Apr 14, 2020 | mahesh |

ಹುಬ್ಬಳ್ಳಿ: ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟಲು ಕರ್ತವ್ಯ ನಿರತ ಸಿಬ್ಬಂದಿಗಳಿಗಾಗಿ ನಗರದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ) ವಿಶೇಷ ಮುಖ ಕವಚ (ಫೇಸ್‌ ಶೀಲ್ಡ್‌ ಮಾಸ್ಕ್)ನ್ನು ಸಿದ್ಧಪಡಿಸಿದೆ.

Advertisement

ಪ್ರತಿದಿನ 200 ಮುಖ ಕವಚಗಳನ್ನು ತಯಾರಿಸುವ ನಿರೀಕ್ಷೆಯಿದೆ. ಜಿಟಿಟಿಸಿಯು ಮೊದಲ ಹಂತದಲ್ಲಿ ಧಾರವಾಡ ಜಿಲ್ಲಾಡಳಿತಕ್ಕೆ 500 ಮುಖ ಕವಚಗಳನ್ನು
ಉಚಿತವಾಗಿ ನೀಡಲಿದೆ. ಯಾವುದೇ ತಂತ್ರಜ್ಞಾನದ ಅವಶ್ಯಕತೆಯಿಲ್ಲದೇ ಅತ್ಯಂತ ಸರಳವಾಗಿ ಮತ್ತು ಕಡಿಮೆ ವೆಚ್ಚದಲ್ಲಿ ಕೋವಿಡ್-19  ಸ್ವಯಂ ರಕ್ಷಣಾ ಸಾಧನ ಉತ್ಪಾದಿಸಲು ಅನುವಾಗುವಂತೆ ವಿನ್ಯಾಸ ಮಾಡಲಾಗಿದೆ. ಸ್ಥಳೀಯವಾಗಿ ಲಭ್ಯವಿರುವ ಸಾಮಗ್ರಿ ಬಳಸಿಕೊಂಡು, ನೈರ್ಮಲ್ಯ ಸೂತ್ರಗಳನ್ನು ಪಾಲಿಸಿ ಅತ್ಯಂತ ಸರಳವಾಗಿ ಗರಿಷ್ಠ 25ರೂ.ಗಳ ವೆಚ್ಚದೊಳಗೆ ಜಿಟಿಟಿಸಿ ವಿನ್ಯಾಸದ ಫೇಸ್‌ಶೀಲ್ಡ್‌ ತಯಾರಿಸಬಹುದಾಗಿದೆ. ತಲೆಯ ಆಕಾರಕ್ಕೆ ಅನುಗುಣವಾಗಿ ಹೊಂದಿಕೊಳ್ಳಬಲ್ಲ ಮತ್ತು ಪಾರದರ್ಶಕ ಶೀಲ್ಡ್‌ ಹೊಂದಿರುವ ಈ ಮುಖ ಕವಚವನ್ನು ತಲೆಯ ಮೇಲಿನಿಂದ ಮುಖಕ್ಕೆ ಹಾಕಿಕೊಳ್ಳಬಹುದಾಗಿದೆ.

ಜಿಟಿಟಿಸಿಯ ವ್ಯವಸ್ಥಾಪಕ ನಿರ್ದೇಶಕ ಹ.ರಾಘವೇಂದ್ರ ಇವರು ಸೂಚಿಸಿದ ಹಿನ್ನೆಲೆಯಲ್ಲಿ ಕಾರ್ಯ ಪ್ರವೃತ್ತರಾದ ಜಿಟಿಟಿಸಿ ಹುಬ್ಬಳ್ಳಿಯ ಸಂಯೋಜಕ ಮಾರುತಿ ಭಜಂತ್ರಿ, ಹಳೇ ವಿದ್ಯಾರ್ಥಿ ಪ್ರಮೋದ ಇಟಗಿ, ತರಬೇತಿ ಅಧಿಕಾರಿ ಲೀಲಾಧರ ಚಳಗೇರಿ, ರಮೇಶ ಸಾಂಗಲಿ, ಪ್ರಶಾಂತ ಸುತಾರ, ಶರಣಯ್ಯ ಹಿರೇಮಠ, ಗುರುಬಸಯ್ಯ ಇನ್ನಿತರರು ಈ ಮುಖ ಕವಚವನ್ನು ಸಿದ್ಧಪಡಿಸಿದ್ದಾರೆ. ಜಿಟಿಟಿಸಿಯ ಬೆಂಗಳೂರು ಕೇಂದ್ರವು ಡಿಆರ್‌ ಡಿಒ ಸಂಸ್ಥೆಯು ಅಭಿವೃದ್ಧಿ ಪಡಿಸಿರುವ
ವೆಂಟಿಲೇಟರಿನ ಪ್ರಾಯೋಗಿಕ ಮಾದರಿಯನ್ನು ಈಗಾಗಲೇ ತಯಾರಿಸಿ ಪೊರೈಸಿ ಉತ್ಪಾದನೆಗೆ ಅನುಮೋದನೆ ಪಡೆದಿರುತ್ತದೆ. ಮಾಹಿತಿಗೆ ಮೊ:
9902101010, 9886915904 ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next