Advertisement

ಉನ್ನತ ವಿದ್ಯಾಲಯಗಳ 8 ಲಕ್ಷ ಸಿಬಂದಿಗಳ ವೇತನ ಪರಿಷ್ಕರಣೆ

11:09 AM Oct 12, 2017 | Team Udayavani |

ಹೊಸದಿಲ್ಲಿ : ಏಳನೇ ವೇತನ ಆಯೋಗದ ಅನುಷ್ಠಾನವನ್ನು ಅನುಸರಿಸಿ ಉನ್ನತ ವಿದ್ಯಾಲಯಗಳ ಸುಮಾರು 8 ಲಕ್ಷ ಶಿಕ್ಷಕರು ಮತ್ತು ಶೈಕ್ಷಣಿಕ ಸಿಬಂದಿಗಳ ವೇತನವನ್ನು ಪರಿಷ್ಕರಿಸುವ ಪ್ರಸ್ತಾವಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

Advertisement

ಸಂಪುಟದಿಂದ ಅನುಮೋದಿತವಾಗಿರುವ ಪರಿಷ್ಕೃತ ವೇತನ ಶ್ರೇಣಿಗಳು 2016ರ ಜನವರಿ 1ರಿಂದ ಪೂರ್ವಾನ್ವಯಗೊಂಡು ಜಾರಿಗೆ ಬರಲಿವೆ.

ಕೇಂದ್ರ ಸಚಿವ ಸಂಪುಟದ ಈ ನಿರ್ಧಾರದಿಂದ ಯುಜಿಸಿ ಮತ್ತು ಮಾನವ ಸಂಪನ್ಮೂಲ ಸಚಿವಾಲಯದಿಂದ ನಿಧಿ ಒದಗಣೆಯಾಗುವ 106 ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳ ಸುಮಾರು 7.58 ಲಕ್ಷ ಶಿಕ್ಷಕರು ಮತ್ತು ತತ್ಸಮಾನ ಶಿಕ್ಷಣ ಸಿಬಂದಿಗಳಿಗೆ ಹಾಗೂ ರಾಜ್ಯ ಸರಕಾರಗಳಿಂದ ನಿಧಿ ಒದಗಣೆಯಾಗುವ 329 ವಿಶ್ವವಿದ್ಯಾಲಯಗಳು ಮತ್ತು ರಾಜ್ಯ ಸಾರ್ವಜನಿಕ ವಿಶ್ವವಿದ್ಯಾಲಯಗಳೊಂದಿಗೆ ಸಂಯೋಜಿತವಾಗಿರುವ 12,912 ಸರಕಾರಿ ಮತ್ತು ಖಾಸಗಿ ಅನುದಾನಿತ ಕಾಲೇಜುಗಳ ಸಿಬಂದಿಗಳಿಗೆ ಲಾಭವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next