Advertisement

ಇನ್ನು ಕನ್ನಡದಲ್ಲೂ ಎಫ್ ಬಿ ಫ್ಯಾಕ್ಟ್ ಚೆಕಿಂಗ್‌ ವ್ಯವಸ್ಥೆ

09:02 PM Jul 26, 2022 | Team Udayavani |

ನವದೆಹಲಿ: ಫೇಸ್‌ಬುಕ್‌ನಲ್ಲಿ ಇನ್ನು ಕನ್ನಡದಲ್ಲೂ ಮಾಹಿತಿ ದೃಢೀಕರಿಸುವ (ಫ್ಯಾಕ್ಟ್ ಚೆಕಿಂಗ್‌) ವ್ಯವಸ್ಥೆ ಬರಲಿದೆ. ಈ ಮೂಲಕ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಭಾಷೆಗಳಾದ ಮಲಯಾಳಂ, ತೆಲುಗು, ತಮಿಳು ಭಾಷೆ ಯಲ್ಲೂ ಈ ವ್ಯವಸ್ಥೆ ಬರಲಿದೆ. ಅದಕ್ಕಾಗಿ ಫೇಸ್‌ಬುಕ್‌ ಮಾಲೀಕ ಸಂಸ್ಥೆಯಾಗಿರುವ ಮೆಟಾ ಮುಂದಾಗಿದೆ. ನ್ಯೂಸ್‌ಮೀಟರ್‌ ಹೆಸರಿನ ಫ್ಯಾಕ್ಟ್ ಚೆಕರ್‌ ಸಂಸ್ಥೆಯೊಂದಿಗೆ ಕೈ ಜೋಡಿಸಿರುವುದಾಗಿ ತಿಳಿಸಿದೆ.

Advertisement

ಫೇಸ್‌ಬುಕ್‌ನಲ್ಲಿ ಕನ್ನಡ, ತಮಿಳು, ತೆಲುಗು, ಮಲಯಾಳಂ ಸೇರಿ ದಕ್ಷಿಣ ಭಾರತದ ವಿವಿಧ ಭಾಷೆಗಳಲ್ಲಿ ಬರುವ ನಕಲಿ ಸುದ್ದಿಗಳನ್ನು ಫ್ಯಾಕ್ಟ್ ಚೆಕರ್‌ ಸಂಸ್ಥೆಯು ಪರಿಶೀಲಿಸಿ ಅದಕ್ಕೆ ರೇಟಿಂಗ್‌ ಕೊಡುತ್ತದೆ. ಅಂತಹ ಪೋಸ್ಟ್‌ ಗಳನ್ನು ಫೇಸ್‌ಬುಕ್‌ ಹೆಚ್ಚು ಜನರಿಗೆ ತಲುಪದಂತೆ ತಡೆಹಿಡಿಯುತ್ತದೆ. ಹಾಗೆಯೇ ಅದನ್ನು ಶೇರ್‌ ಮಾಡುವವರಿಗೆ ಎಚ್ಚರಿಕೆಯನ್ನೂ ಕೊಡುತ್ತದೆ.

ಮೆಟಾ ಸಂಸ್ಥೆಯು ಈಗಾಗಲೇ ವಿಶ್ವಾದ್ಯಂತ ಒಟ್ಟು 60 ಭಾಷೆಗಳಲ್ಲಿ ಫ್ಯಾಕ್ಟ್ ಚೆಕ್ಕಿಂಗ್‌ಗೆ 80 ಸಂಸ್ಥೆಗಳನ್ನು ಕೈ ಜೋಡಿಸಿಕೊಂಡಿದೆ. ಅದರಲ್ಲಿ ಭಾರತದಲ್ಲಿಯೇ 11 ಸಂಸ್ಥೆಗಳೊಂದಿಗೆ ಕೈ ಜೋಡಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next