Advertisement

ಎಫ್-16 ಹೊಡೆದುರುಳಿಸಿದ್ದು ಹೌದು

10:48 PM Apr 05, 2019 | mahesh |

ವಾಷಿಂಗ್ಟನ್‌/ಹೊಸದಿಲ್ಲಿ : ಪುಲ್ವಾಮಾ ದಾಳಿ ಬಳಿಕ ಭಾರತ ಮತ್ತು ಪಾಕಿಸ್ಥಾನ ಉದ್ವಿಗ್ನತೆ ಸಂದರ್ಭದಲ್ಲಿ ದೇಶದ ವಾಯುಪ್ರದೇಶ ಪ್ರವೇಶಿಸಿದ ಪಾಕಿಸ್ಥಾನದ ಎಫ್-16 ಯುದ್ಧ ವಿಮಾನ ಹೊಡೆದು ಉರುಳಿಸಿದ್ದು ಸತ್ಯ. ಈ ಬಗ್ಗೆ ದಾಖಲೆಗಳು ಇವೆ ಎಂದು ಭಾರತೀಯ ವಾಯುಪಡೆ (ಐಎಎಫ್) ಶುಕ್ರವಾರ ತಿಳಿಸಿದೆ.

Advertisement

“ಫಾರಿನ್‌ ಪಾಲಿಸಿ’ ನಿಯತಕಾಲಿಕದಲ್ಲಿ ಪ್ರಕಟವಾಗಿರುವ ಅಂಶಗಳನ್ನು ತಿರಸ್ಕರಿಸುತ್ತೇವೆ ಎಂದು ಐಎಎಫ್ ಹೇಳಿದೆ. ಪಾಕಿಸ್ಥಾನ ಹೊಂದಿರುವ ಎಫ್-16 ಯುದ್ಧ ವಿಮಾನದ ಪೈಲಟ್‌ನ ವೈರ್‌ಲೆಸ್‌ ಸಂದೇಶದ ಮಾಹಿತಿ, ಸಿಗ್ನಲ್‌ ಮತ್ತು ಇತರ ಗ್ರಾಫಿಕ್‌ ಅಂಶಗಳನ್ನು ಪಡೆದುಕೊಂಡಿದ್ದೇವೆ. ಜತೆಗೆ ಹೊಡೆದು ಉರುಳಿಸಲಾಗಿದ್ದ ವಿಮಾನಕ್ಕೆ ನೀಡಿದ್ದ ಎಚ್ಚರಿಕೆಗಳು ದಾಖಲಾಗಿವೆ ಎಂದು ಐಎಎಎಫ್ ಹೇಳಿಕೆಯಲ್ಲಿ ತಿಳಿಸಿದೆ. ಫೆ.27ರಂದು ಐಎಎಫ್ನ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಮಿಗ್‌-21 ಬೈಸನ್‌ ವಿಮಾನದ ಮೂಲಕ ಅದನ್ನು ಹೊಡೆದು ಉರುಳಿಸಿದ ಬಳಿಕ ಪಾಕಿಸ್ಥಾನ ದಲ್ಲಿ ಸೆರೆಯಾಗಿದ್ದರು. ಎಸ್‌ಯು30- ಎಂಕೆಐ, ಮಿರಾಜ್‌ 2000 ಮತ್ತು ಮಿಗ್‌ 21 ಬೈಸನ್‌ ಫೈಟರ್‌ ವಿಮಾನಗಳ ಮೂಲಕ ಪಾಕಿಸ್ಥಾನ ದ ಎಫ್-16 ವಿಮಾನ ವನ್ನು ಸುತ್ತುವರಿಯಲಾಗಿತ್ತು ಎಂದು ಸ್ಪಷ್ಟನೆ ನೀಡಿದೆ. ಅದಕ್ಕೆ ಪೂರಕವಾಗಿ ಫೆ.28ರಂದು ವಿಮಾನದ ಅವಶೇಷಗಳನ್ನೂ ಪ್ರದರ್ಶಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next