Advertisement
ಆರ್‌ಎಸ್‌ಎಸ್ ಸೇರಿದಂತೆ 18 ಸಂಘಟನೆಗಳ ವಿವಿಧ ಹಂತದ ಪದಾಧಿಕಾರಿಗಳ ಹೆಸರು, ವಿಳಾಸ ಮತ್ತು ಇತರ ವಿವರ ಸಂಗ್ರಹಿಸುವಂತೆ ಸೂಚಿಸಲಾಗಿತ್ತು. ಈ ಬಗೆಗಿನ ಟಿಪ್ಪಣಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ದರ್ಭಾಂಗಾ ಟೌನ್‌ನ ಬಿಜೆಪಿ ಶಾಸಕ ಸಂಜಯ್ ಸರಾವಗಿ “ಚುನಾವಣೆ ನಡೆದು ಸರಕಾರ ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ಜೆಡಿಯು ಜತೆಗಿನ ಮೈತ್ರಿಯಲ್ಲಿ ಎಲ್ಲೋ ಲೋಪವಾಗಿತ್ತು. ನಿತೀಶ್ ಕುಮಾರ್ ಅವರಿಗೆ ಬೇಸರವಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಕುಸಿದು ಬಿದ್ದು ರಾಷ್ಟ್ರಪತಿ ಆಡಳಿತ ಜಾರಿಯಾಗಲು ಬಯಸುತ್ತಿದ್ದಾರೆ’ ಎಂದು ಹೇಳಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಮುಖ್ಯಮಂತ್ರಿ ನಿತೀಶ್ ಕುಮಾರ್‌ರನ್ನು ಬಿಜೆಪಿ ಒತ್ತಾಯಿಸಿದೆ. ವರದಿ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಬಿಜೆಪಿ ಎಂಎಲ್‌ಸಿ ಸಚ್ಚಿದಾನಂದ ರೈ, “ಸಿಎಂ ನಿತೀಶ್ ಅವರ ಉದ್ದೇಶದ ಬಗ್ಗೆ ಪಕ್ಷವು ಅತ್ಯಂತ ಜಾಗರೂಕರಾಗಿರಬೇಕು’ ಎಂದಿದ್ದಾರೆ. ಇದು ಈಗ ಬಿಹಾರ ಆಡಳಿತಾರೂಢ ಮಿತ್ರಪಕ್ಷಗಳ ನಡುವೆ ಎಲ್ಲವೂ ಸರಿಯಿಲ್ಲ ಎಂಬುದನ್ನು ತೋರಿಸಿದೆ ಮಾತ್ರವಲ್ಲ, ಬಿಜೆಪಿ- ಜೆಡಿಯು ನಡುವೆ ವೈಮನಸ್ಸು ಮೂಡಿಸಿದೆ.
ವಿವರಣೆ ನೀಡುವಂತೆ ಬಿಹಾರ ಸಿಎಂ ನಿತೀಶ್‌ಗೆ ಬಿಜೆಪಿ ಒತ್ತಾಯ
18 ಸಂಘಸಂಸ್ಥೆಗಳ ನಾಯಕರ ಕುರಿತ ಮಾಹಿತಿ ಸಂಗ್ರಹಿಸಲು ಸೂಚನೆ ನೀಡಿದ್ದ ಸರಕಾರ