Advertisement

ಕ್ಯಾಂಟೀನ್‌ ವ್ಯವಸ್ಥೆ ಮೇಲೆ ಕಣ್ಣು 

12:10 PM Aug 23, 2017 | Team Udayavani |

ಬೆಂಗಳೂರು: ಇಂದಿರಾ ಕ್ಯಾಂಟೀನ್‌ಗಳಲ್ಲಿನ ವ್ಯವಸ್ಥೆ ಬಗ್ಗೆ ತಿಳಿಯಲು ದಿಢೀರ್‌ ಭೇಟಿ ಮುಂದುವರಿಸಿರುವ ಮೇಯರ್‌ ಜಿ. ಪದ್ಮಾವತಿ, ಮಂಗಳವಾರ ಅತಿ ¤ಗುಪ್ಪೆ, ನಾಗರಬಾವಿ, ಪಾದರಾಯನಪುರ, ಆಜಾದ್‌ನಗರ ಮತ್ತು ರಾಯಪುರಂ ವಾರ್ಡ್‌ಗಳಲ್ಲಿರುವ ಇಂದಿರಾ ಕ್ಯಾಂಟೀನ್‌ಗಳಲ್ಲಿ ಪರಿಶೀಲನೆ ನಡೆಸಿದರು.

Advertisement

ಈ ವೇಳೆ ಕ್ಯಾಂಟೀನ್‌ ಸಿಬ್ಬಂದಿಗೆ ಹಲವು ಸಲಹೆ ಸೂಚನೆಗಳನ್ನು ಮೇಯರ್‌ ನೀಡಿದ್ದಾರೆ. “ಕ್ಯಾಂಟೀನ್‌ಗೆ ಬರುವ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ನಡೆದುಕೊಳ್ಳಬೇಕು. ಆಹಾರದ ಹಂಚಿಕೆ ಸಮರ್ಪಕವಾಗಿರಬೇಕು ಹಾಗೂ ಸ್ವತ್ಛತೆ ಕಾಪಾಡಬೇಕು,’ ಎಂದು ತಾಕೀತು ಮಾಡಿದ್ದಾರೆ. ಆಜಾದ್‌ನಗರ ಮತ್ತು ಬಾಬು ಜಗಜೀವನರಾಮ್‌ ನಗರದಲ್ಲಿರುವ ಇಂದಿರಾ ಕ್ಯಾಂಟೀನ್‌ ಹೊರಭಾಗದಲ್ಲಿ ನಡೆಯುತ್ತಿರುವ ಸಿವಿಲ್‌ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದರು. 

ಅನಿರೀಕ್ಷಿತ ತಪಾಸಣೆ ವೇಳೆ ಅತ್ತಿಗುಪ್ಪೆ ವಾರ್ಡ್‌ ಇಂದಿರಾ ಕ್ಯಾಂಟೀನ್‌ನಲ್ಲಿ ಶಾಲಾ ಮಕ್ಕಳು ಸಾಲಿನಲ್ಲಿ ನಿಂತಿರುವುದನ್ನು ಗಮನಿಸಿದ ಮೇಯರ್‌, ಮಕ್ಕಳಿಗೆ ಸ್ವತಃ ತಿಂಡಿ ತಿನಿಸಿದರು. ವ್ಯವಸ್ಥಿತವಾಗಿ ತಿಂಡಿ ಸರಬರಾಜು ಆಗುತ್ತಿರುವುದನ್ನು ಗಮನಿಸಿದರು. ನಂತರ ಪೂರ್ವವಲಯದ ಗಂಗಾನಗರ ವಾರ್ಡ್‌, ಗಂಗೇನಹಳ್ಳಿ ವಾರ್ಡ್‌, ಹೆಬ್ಟಾಳ ವಾರ್ಡ್‌ನಲ್ಲಿರುವ ಇಂದಿರಾ ಕ್ಯಾಂಟೀನ್‌ಗಳಿಗೆ ಮಧ್ಯಾಹ್ನದ ಊಟ ಸರಬರಾಜಿನ ಬಗ್ಗೆ ತಪಾಸಣೆ ಕೈಗೊಂಡು ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಸಾರ್ವಜನಿಕರಿಂದ ಆಹಾರದ ಗುಣಮಟ್ಟ ಮತ್ತು ರುಚಿಯ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತವಾಯಿತು. ಈ ವೇಳೆ ಮಾತನಾಡಿದ ಮೇಯರ್‌, ಇಂದಿರಾ ಕ್ಯಾಂಟೀನ್‌ ವ್ಯವಸ್ಥೆಯು ದಿನೇ ದಿನೇ ಸುಧಾರಿಸುತ್ತಿದ್ದು, ನಿರೀಕ್ಷೆಗಿಂತ ಹೆಚ್ಚು ಜನ ಭೇಟಿ ನೀಡುತ್ತಿದ್ದಾರೆ. ಹಾಗಾಗಿ, ಎಲ್ಲರಿಗೂ ಸಮರ್ಪಕ ಆಹಾರ ಪೂರೈಕೆಯಲ್ಲಿ ತುಸು ವ್ಯತ್ಯಾಸವಾಗುತ್ತಿದ್ದು, ಹಂತ-ಹಂತವಾಗಿ ಸುಧಾರಣೆ ಆಗಲಿದೆ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next