Advertisement

ಕಣ್ಣ ತುಂಬಾ ಬಿಂಬ

08:55 PM May 31, 2019 | Team Udayavani |

ಚಿಣ್ಣರ ರಂಗಭೂಮಿಯಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಾ ಬಂದಿರುವ ರಂಗಸಂಸ್ಥೆ ವಿಜಯನಗರ “ಬಿಂಬ’ಕ್ಕೆ 23ರ ಹರೆಯ. ಇಲ್ಲಿನ ವಿದ್ಯಾರ್ಥಿಗಳಲ್ಲನೇಕರು ವೃತ್ತಿರಂಗಭೂಮಿಯಲ್ಲಿ, ಧಾರಾವಾಹಿ, ಸಿನಿಮಾ ಮಾಧ್ಯಮಗಳಲ್ಲಿ ಕೆಲಸ ನಿರ್ವಹಿಸುತ್ತಿರುವುದು ಸಂಸ್ಥೆಯ ಹೆಗ್ಗಳಿಕೆ. 2019ನೇ ಸಾಲಿನ ಮಕ್ಕಳ ನಾಟಕ ಶಾಲೆ ಉದ್ಘಾಟನಾ ಕಾರ್ಯಕ್ರಮವನ್ನು ಇದೀಗ ಹಮ್ಮಿಕೊಳ್ಳಲಾಗಿದೆ.

Advertisement

ಸಾಹಿತಿ ಎಂ.ಎಸ್‌ ಆಶಾದೇವಿ, ಹಿರಿಯ ರಂಗಕರ್ಮಿ ಗುಂಡಪ್ಪ ಚಿಕ್ಕಮಗಳೂರು ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ರವೀಂದ್ರ ಟ್ಯಾಗೋರ್‌ ಅವರ ಕಥೆಯನ್ನು ಆಧರಿಸಿದ ಮಕ್ಕಳ ನಾಟಕ “ಮೆಟ್ಟು ಪುರಾಣ’ ಪ್ರದರ್ಶನಗೊಳ್ಳಲಿದೆ. ಡಾ. ಎಸ್‌.ವಿ. ಕಶ್ಯಪ್‌, ನಾಟಕವನ್ನು ರಚಿಸಿ ನಿರ್ದೇಶಿಸಿದ್ದಾರೆ.

ಎಲ್ಲಿ?: ನಗರ ಕೇಂದ್ರ ಗ್ರಂಥಾಲಯ, ಹಂಪಿನಗರ
ಯಾವಾಗ?: ಜೂನ್‌ 1, ಸಂಜೆ 5.30
ಪ್ರವೇಶ: ಉಚಿತ

Advertisement

Udayavani is now on Telegram. Click here to join our channel and stay updated with the latest news.

Next