Advertisement
ಇದನ್ನು ವಾಲ್ ಸ್ಟಿಕ್ಕರ್ಸ್ ಎಂದು ಕರೆಯಲಾಗುತ್ತದೆ. ನೋಡಲು ಸುಂದರವಾಗಿ ಕಾಣುವ ಈ ಸ್ಟಿಕ್ಕರ್ಸ್‌ಗಳು 50- 100 ರೂ. ನಿಂದ ಹಿಡಿದು ಸಾವಿರಾರು ರೂ. ಮೌಲ್ಯವನ್ನೂಪಡೆದಿರುತ್ತದೆ. ಇದು ಕೋಣೆಗೊಂದು ವಿಶೇಷ ಲುಕ್, ಸೌಂದರ್ಯದ ಜತೆಗೆ ಅತ್ಯಾಧುನಿಕವಾಗಿ ಕಾಣುವಂತೆ ಮಾಡುತ್ತದೆ.
ಈ ಸ್ಟಿಕ್ಕರ್ಸ್‌ಗಳಲ್ಲಿ ತ್ರೀಡಿ ಸ್ಟಿಕ್ಕರ್ಸ್, ಸಾಮಾನ್ಯ ಸ್ಟಿಕ್ಕರ್ಸ್‌ಗಳಿವೆ. ಜತೆಗೆ ಪರ್ಮನೆಂಟ್, ಟೆಂಪರರಿಯಾಗಿ ಅಂಟಿಸಬಹುದಾದ ಸ್ಟಿಕ್ಕರ್ಸ್‌ಗಳಿವೆ. ಅಲ್ಲದೇ ಫ್ಲೋರಲ್, ಬರ್ಡ್ಸ್, ಟ್ರೈಬಲ್, ಕಿಡ್ಸ್ ಗ್ರೋವಿಂಗ್, ಮ್ಯಾಜಿಕ್ ಮಂತ್ರ, ಕ್ಯಾರೆಕ್ಟರ್, ಫನ್ನೀ ಬೋನ್ಸ್ ಮೊದಲಾದ ಮಾದರಿಯ ಸ್ಟಿಕ್ಕರ್ಸ್‌ಗಳಿದ್ದು, ನಮ್ಮ ಇಷ್ಟಕ್ಕನುಗುಣವಾಗಿ ಆಯ್ಕೆ ಮಾಡಿಕೊಳ್ಳಬಹುದು. ಇರಲಿ ಎಚ್ಚರಿಕೆ
ಸ್ಟಿಕ್ಕರ್ಸ್‌ಗಳನ್ನು ಹಾಕುವ ಮೊದಲು ಅವು ಶಾಶ್ವತವಾಗಿರಬೇಕೋ ಅಥವಾ ಸ್ವಲ್ಪ ಸಮಯಕ್ಕೋ ಎಂಬುದನ್ನು ನಿರ್ಧರಿಸಿಕೊಳ್ಳಿ. ಇಲ್ಲವಾದರೆ ಮತ್ತೆ ಪೈಂಟ್ ಹೊಡೆಯುವಾಗ ಅಥವಾ ನಿಮಗೆ ಬೇಡವೆನಿಸಿದಾಗ ಇದನ್ನು ತೆಗೆಯಲು ಸಾಧ್ಯವಿಲ್ಲ. ಪೈಂಟ್ ಮೂಲಕವೂ ಈ ಚಿತ್ರಗಳನ್ನು ಬರೆಯಬಹುದು. ಆದರೆ ಇದು ಶಾಶ್ವತವಾಗಿರುತ್ತದೆ.
ಸ್ಟಿಕರ್ಸ್‌ಗಳಾದರೆ ನಾವು ನಮಗೆ ಇಷ್ಟವಾದಾಗ ಬದಲಿಸಬಹುದು.
Related Articles
ಲೀವಿಂಗ್ ರೂಮ್, ಬೆಡ್‌ರೂಮ್, ಮಕ್ಕಳ ರೂಮ್, ಸ್ಟಡಿ ರೂಮ್, ಕಿಚನ್ ಹೀಗೆ ಮನೆಯಲ್ಲಿ ಬೇರೆಬೇರೇ ಕೋಣೆಗಳಿಗೆ ಬೇರೇ ಬೇರೆ ಮಾದರಿಯ ಸ್ಟಿಕ್ಕರ್ಸ್‌ಗಳಿವೆ. ಮಕ್ಕಳ ಕೋಣೆಗಾದರೆ ಡೋರೆಮೋನ್, ಟಾಮ್ ಆ್ಯಂಡ್ ಜರಿ, ಮಿಕ್ಕಿ ಮೌಸ್ ಗಳಂತಹ ಕಾರ್ಟೂನ್ ಗಳ ಚಿತ್ರವನ್ನು ಅಥವಾ ಕಲಿಕೆ ಪೂರಕವಾದ ಚಿತ್ರಗಳನ್ನು ಆಯ್ದುಕೊಳ್ಳಬಹುದು. ಇನ್ನು ಲೀವಿಂಗ್ ರೂಮ್‌ಗಾದರೆ ಹೂವು, ಬಳ್ಳಿ, ಹೂಜಿ, ದೀಪ, ದೇವರ ಚಿತ್ರಗಳನ್ನು ಆಯ್ದುಕೊಳ್ಳಬಹುದು. ಕಿಚನ್ ರೂಮ್‌ನಲ್ಲಿ ಹಸುರು, ಹಣ್ಣು, ಹಂಪಲಿನ ಚಿತ್ರವನ್ನು ಅಂಟಿಸಬಹುದು. ಬೆಡ್ ರೂಮ್‌ಗಾದರೆ ಪ್ರೀತಿಯ ಗುರುತು, ಹಕ್ಕಿಗಳ ಚಿತ್ರಗಳನ್ನು ಅಂಟಿಸಬಹುದು. ಹೀಗೆ ಇಚ್ಛೆಗೆ ತಕ್ಕಂತೆ ಗೋಡೆಗಳನ್ನು ಈ ಸ್ಟಿಕ್ಕರ್ಸ್‌ಗಳಿಂದ ಸಿಂಗರಿಸಬಹುದು.
Advertisement
ಒಂದು ವೇಳೆ ವಿಶೇಷ ಸಂದರ್ಭಕ್ಕೆ ಮಾತ್ರ ಸಾಕು ಅನ್ನೋರಾದರೆ ಇದಕ್ಕಾಗಿಯೇ ಟೆಂಪರರಿ ಸ್ಟಿಕರ್ಸ್‌ಗಳು ಲಭ್ಯವಿವೆ. ಇದರಿಂದ ಗೋಡೆಯ ಬಣ್ಣಕ್ಕೇನೂ ಹಾನಿಯಾಗೋದಿಲ್ಲ. ಅಗತ್ಯ ಸಂದರ್ಭದಲ್ಲಿ ಅಂಟಿಸಿ, ಮತ್ತೆ ತೆಗೆದಿಡಬಹುದಾದ ಸ್ಟಿಕ್ಕರ್ಸ್‌ಗಳು ಇದರಲ್ಲಿವೆ. ಶಾಶ್ವತವಾಗಿ ಅಂಟಿಸುವ ಸ್ಟಿಕ್ಕರ್ಸ್‌ಗಳೂ ಇರುವುದರಿಂದ ಈ ಚಿತ್ರಗಳನ್ನು ಆಯ್ದುಕೊಳ್ಳುವಲ್ಲಿ ಎಚ್ಚರಿಕೆ ವಹಿಸುವುದು ಕೂಡ ಬಹುಮುಖ್ಯವಾಗಿರುತ್ತದೆ.
ಮೇಘಾ ಸಾನಾಡಿ