Advertisement

ಉಗ್ರರ ಪೈಶಾಚಿಕ ಕೃತ್ಯಕ್ಕೆ ತೀವ್ರ ಆಕ್ರೋಶ

07:27 AM Feb 16, 2019 | Team Udayavani |

ದೊಡ್ಡಬಳ್ಳಾಪುರ: ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಗುರುವಾರ ಭಾರತೀಯ ಯೋಧರ ಮೇಲೆ ಉಗ್ರರು ನಡೆಸಿದ ಪೈಶಾಚಿಕ ಕೃತ್ಯಕ್ಕೆ ತಾಲೂಕಿನಾದ್ಯಂತ ತೀವ್ರ ಆಕ್ರೊಶ ವ್ಯಕ್ತವಾಗಿದ್ದು, ವಿವಿಧ ಸಂಘಟನೆಗಳಿಂದ ಶುಕ್ರವಾರ ಪ್ರತಿಭಟನೆ, ವೀರ ಮರಣವನ್ನಪ್ಪಿದ ವೀರಯೋಧರಿಗೆ ಶ್ರದ್ಧಾಂಜಲಿ ಕಾರ್ಯಕ್ರಮಗಳು ನಡೆದವು.  

Advertisement

ನಗರದ ಡಿ ಕ್ರಾಸ್‌ ವೇತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್‌ ಶೆಟ್ಟಿ ಬಣ)ಆಯೋಜಿಸಿದ್ದ ಹುತಾತ್ಮ ವೀರಯೋಧರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಕರವೇ ರಾಜ್ಯ ಕಾರ್ಯದರ್ಶಿ ರಾಜಘಟ್ಟ ರವಿ, ದೇಶದೊಳಗಿನ ಶತ್ರುಗಳನ್ನು ಮಟ್ಟಹಾಕುವಲ್ಲಿ ಸರಕಾರಗಳು ಕ್ರಮ ಕೈಗೊಂಡಾಗ ಮಾತ್ರ ಅಮಾಯಕರ ಸಾವು, ನೋವುಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.  

ಎದುರಿಗಿರುವ ಶಶ್ರುಗಳನ್ನು ನಂಬಬಹುದು. ಆದರೆ, ನಮ್ಮ ಜೊತೆಯಲ್ಲಿಯೇ ಇದ್ದು, ಬೆನ್ನಿಗೆ ಚೂರಿ ಹಾಕುವಂತ ಹಿತಶತ್ರುಗಳಿಂದಾಗಿಯೇ ಪುಲ್ವಾಮದಲ್ಲಿ ದೇಶದ ಗಡಿ ರಕ್ಷಣೆ ಮಾಡುವ ಸೈನಿಕರ ಮೇಲಿನ ದಾಳಿ ನಡೆದಿದೆ. ಒಂದೆಡೆ ಇಡೀ ದೇಶ ವೀರ ಯೋಧರ ಬಲಿದಾನಕ್ಕೆ ಅಶ್ರುತರ್ಪಣಗೈಯುತ್ತಿದ್ದರೆ, ಕೆಲವರು ಸಂಭ್ರಮಿಸುತ್ತಿದ್ದಾರೆ. ಇಂತಹ ದೇಶದ್ರೋಹಿಗಳನ್ನು ಬಲಿ ಹಾಕದ ಹೊರತು ನಮ್ಮ ದೇಶ ನೆಮ್ಮದಿಯಿಂದಿರಲು ಸಾಧ್ಯವಿಲ್ಲವೆಂದು ಹೇಳಿದರು.

ದೇಶದ್ರೋಹಿಗಳ ಬಗ್ಗೆ ಅರಿವು ಅಗತ್ಯ: ಕರವೇ ಕಾನೂನು ಘಟಕದ ಸಲೆಗಾರ ಆನಂದ್‌ ಮಾತನಾಡಿ, ಬಯೋತ್ಪಾದನೆ ಜಾಗತಿಕ ಸಮಸ್ಯೆಯಾಗಿ ಪರಿಣಮಿಸಿದೆ. ಧರ್ಮದ ಕಾರಣ ಬಯೋತ್ಪಾದನೆಗೆ ಕುಮ್ಮಕ್ಕು ನೀಡುವವರಲ್ಲಿ ಪರಿವರ್ತನೆ ಉಂಟು ಮಾಡಬೇಕಿದೆ. ದೇಶದ್ರೋಹಿ ಯಾರೇ ಆದರೂ ದೇಷದ್ರೋಹಿ ಎಂಬ ಅರಿವನ್ನು ಮೂಡಿಸಬೇಕಿದೆ ಎಂದರು.

ಈ ವೇಳೆ ಅಪರಾಧ ವಿಭಾಗದ ಸಬ್‌ಇನ್ಸ್‌ಪೆಕ್ಟರ್‌ ರಂಗನಾಥ್‌, ಗೌರವ ಅಧ್ಯಕ್ಷ ಪು.ಮಹೇಶ್‌, ತಾಲೂಕು ಕಾರ್ಯದರ್ಶಿ ಜೋಗಹಳ್ಳಿ ಅಮ್ಮು, ಕುಮಾರ್‌, ನಗರ ಅಧ್ಯಕ್ಷ ಶ್ರೀನಗರ ಬಷೀರ್‌, ಕಾರ್ಯದರ್ಶಿ ಸುಬ್ರಹ್ಮಣ್ಯ, ಮುಖಂಡರಾದ ಸುಹಾಸ್‌,ಕಿಟ್ಟಿ, ವರ್ಗಿಸ್‌,ದಾದಾಪೀರ್‌ ಮುಂತಾದವರು ಭಾಗವಹಿಸಿ ವೀರ ಮರಣವನ್ನಪ್ಪಿದ ವೀರಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next