ಉಳಿಸಿಕೊಂಡಿದ್ದರಿಂದ ಕ್ಷೇತ್ರಕ್ಕೆ ಈಗ ಉಪಚುನಾವಣೆ ಎದುರಾಗಿದೆ. ಕ್ಷೇತ್ರದಲ್ಲಿ ಜೆಡಿಎಸ್-ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಜೆಡಿಎಸ್ ಭದ್ರಕೋಟೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ, ಕಾಂಗ್ರೆಸ್, ತನ್ನ ಐಡೆಂಟಿಟಿ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಉಪಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿವೆ. ಇನ್ನೊಂದೆಡೆ, ಕ್ಷೇತ್ರವ್ಯಾಪ್ತಿಯಲ್ಲಿ ಗುಪ್ತವಾಹಿನಿಯಂತೆ
ಪ್ರವಹಿಸುತ್ತಿರುವ ಬಿಜೆಪಿ, ಮೈತ್ರಿ ಪಕ್ಷಗಳ ನಿದ್ದೆಗೆಡಿಸಿದೆ. ಪಕ್ಷದ ಮತಗಳಿಕೆಯಲ್ಲಿ ಸಾಕಷ್ಟು ಸುಧಾರಣೆಯಾಗುವ ನಿರೀಕ್ಷೆಯನ್ನು ಬಿಜೆಪಿ ಇರಿಸಿಕೊಂಡಿದೆ.
Advertisement
ಮೂಲಸೌಕರ್ಯಗಳ ಕೊರತೆ ಬಗ್ಗೆ ಭುಗಿಲೆದ್ದಿದೆ ಆಕ್ರೋಶ: ಎರಡು ದಶಕಗಳಿಂದ ಎಚ್.ಡಿ.ದೇವೇಗೌಡರು,ಎಚ್.ಡಿ.ಕುಮಾರಸ್ವಾಮಿ ಅವರನ್ನು ಗೆಲ್ಲಿಸಿಕೊಂಡೇ ಬರಿ¤ದ್ದೀವಿ. ಕುಮಾರಸ್ವಾಮಿ ಕ್ಷೇತ್ರಕ್ಕೆ ಬರದಿದ್ದರೂ ಅವರನ್ನು ಆರಿಸಿದ್ದೇವೆ. ಮಾದರಿ ಕ್ಷೇತ್ರವನ್ನಾಗಿ ರೂಪಿಸುವುದಾಗಿ 2004ರಲ್ಲಿ ಅವರು ನೀಡಿದ್ದ ಭರವಸೆ ಈವರೆಗೂ ಈಡೇರಿಲ್ಲ. ಮೂಲಸೌಕರ್ಯದ ಸಮಸ್ಯೆಗಳಿಗೆ ಪರಿಹಾರ ಸಿಕ್ಕೇ ಇಲ್ಲ ಎಂಬ ಅಸಮಾಧಾನವನ್ನು ಮತದಾರರು ವ್ಯಕ್ತಪಡಿಸುತ್ತಿದ್ದಾರೆ. ಕಳೆದ ಮೇನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯ ವೇಳೆ ಭುಗಿ ಲೇಳದ ಮತದಾರರ ಈ ಅಸಮಾಧಾನ, ಉಪಚುನಾವಣೆಯಲ್ಲಿ ಭುಗಿಲೆದ್ದಿದೆ.
ಅನಿತಾ ಕುಮಾರಸ್ವಾಮಿ ಪ್ರಚಾರಕ್ಕೆ ಹೋದೆಡೆ ಯಲ್ಲೆಲ್ಲ ಮತದಾರರು ನೇರವಾಗಿಯೇ ಅವರನ್ನು ಪ್ರಶ್ನಿಸುತ್ತಿದ್ದಾರೆ. ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಮತದಾರರ ಪ್ರಶ್ನೆಗೆ ಅನಿತಾ ಅವರ ಮೌನವೇ ಉತ್ತರವಾಗಿದೆ ಎಂಬ ಟೀಕೆಗಳು ಕೇಳಿ ಬರುತ್ತಿವೆ.
ಹೋಬಳಿಯಲ್ಲಿ ಸೋಮವಾರ ನಡೆದ ಪ್ರಚಾರದ ವೇಳೆ ಮೇಲ್ಮಟ್ಟದಲ್ಲಿ ನೀವು ಹೊಂದಾಣಿಕೆ ಮಾಡಿಕೊಂಡಿದ್ದೀರಿ. ಹೀಗಾಗಿ, ವರಿಷ್ಠರೇ ಪ್ರಚಾರ ಮಾಡಿಕೊಳ್ಳಲಿ. ತಾವು ಬರೋಲ್ಲ ಎಂದು ಎರಡೂ ಪಕ್ಷಗಳ ಕಾರ್ಯಕರ್ತರು ಅನಿತಾ ಕುಮಾರಸ್ವಾಮಿ ಮತ್ತು ಡಿ.ಕೆ.ಸುರೇಶ್ ಅವರನ್ನು ತರಾಟೆಗೆ ತೆಗೆದುಕೊಂಡ ಪ್ರಕರಣ ಅಸಮಾಧಾನ ಇನ್ನೂ ಶಮನ ಆಗಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ. ಎಂಎಲ್‌ಸಿ, ಸಿ.ಎಂ.ಲಿಂಗಪ್ಪ ಅವರ ಪುತ್ರ ಹಾಗೂ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷರಾಗಿದ್ದ ಎಲ್.ಚಂದ್ರಶೇಖರ್ ಅವರು ಬಿಜೆಪಿ ಟಿಕೆಟ್‌ನಿಂದ ಸ್ಪರ್ಧಿಸಿದ್ದಾರೆ. ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸದಿರುವುದರಿಂದ ಅನೇಕ ನಿಷ್ಠಾವಂತ ಕಾಂಗ್ರೆಸ್ಸಿಗರು ಬೇಸರಗೊಂಡಿದ್ದು, ವರಿಷ್ಠರಿಗೆ ಬುದಿಟಛಿ ಕಲಿಸುವ ಸಲುವಾಗಿ ಎಲ್.ಚಂದ್ರಶೇಖರ್‌ಗೆ ಮತ ಚಲಾಯಿಸುವುದಾಗಿ ತಮ್ಮ ಆಪೆಷ್ಟರ ಬಳಿ ಹೇಳಿಕೊಂಡಿದ್ದಾರೆ. ಈ ಮಧ್ಯೆ, ಅನಿತಾ ಕುಮಾರಸ್ವಾಮಿಗೆ ಶೇಕಡಾವಾರು ಮತಗಳಿಕೆಯಲ್ಲಿ ಕಡಿಮೆಯಾದರೆ
ಅದು ಜೆಡಿಎಸ್‌ಗೆ ಆಗುವ ಮುಖಭಂಗವಲ್ಲ, ಕಾಂಗ್ರೆಸ್‌ಗೆ ಆಗುವ ಅವಮಾನ. ಹೀಗಾಗಿ, ಮತದಾರರನ್ನು ಮತಗಟ್ಟೆಗೆ ಕರೆತರುವಲ್ಲಿ
ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ಪಾತ್ರ ವಹಿಸುವಂತೆ ಡಿ.ಕೆ.ಬ್ರದರ್ ಸ್ಪಷ್ಟ ಸೂಚನೆ ಕೊಟ್ಟಿರುವುದಾಗಿ ತಿಳಿದು ಬಂದಿದೆ.
Related Articles
Advertisement
ಕ್ಷೇತ್ರ ವ್ಯಾಪ್ತಿರಾಮನಗರ ವಿಧಾನಸಭಾ ಕ್ಷೇತ್ರವ್ಯಾಪ್ತಿಗೆ ರಾಮನಗರ ಜಿಲ್ಲಾ ಕೇಂದ್ರ, ರಾಮನಗರ ತಾಲೂಕಿನ ಕಸಬಾ ಮತ್ತು ಕೈಲಾಂಚ
ಹೋಬಳಿಗಳು, ಕನಕಪುರ ತಾಲೂಕಿನ ಹಾರೋಹಳ್ಳಿ ಮತ್ತು ಮರಳವಾಡಿ ಹೋಬಳಿಗಳು ಬರಲಿವೆ. ಸೂರ್ಯಪ್ರಕಾಶ್