Advertisement

ಚಂದ್ರಯಾನ-2 ಚಂದ್ರನ ಅಂಗಳದಲ್ಲಿ ಇಳಿಯೋದನ್ನು ನೋಡಲು ಕಾತುರನಾಗಿದ್ದೇನೆ; ಪ್ರಧಾನಿ ಮೋದಿ

09:51 AM Sep 07, 2019 | Nagendra Trasi |

ನವದೆಹಲಿ:ಚಂದ್ರನ ಅಂಗಳದ ದಕ್ಷಿಣ ಧ್ರುವದಲ್ಲಿ ಚಂದ್ರಯಾನ 2 ನೌಕೆಯ ವಿಕ್ರಮ್ ಲ್ಯಾಂಡರ್ ಇಳಿಯಲು ಕೆಲವೇ ಗಂಟೆಗಳು ಬಾಕಿ ಇದ್ದು, ಇಸ್ರೋದ ಐತಿಹಾಸಿಕ ಸಾಧನೆಯ ಈ ವಿಶೇಷ ಕ್ಷಣಗಳನ್ನು ಜನರು ಕಣ್ತುಂಬಿಕೊಳ್ಳಬೇಕೆಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿಕೊಂಡಿದ್ದಾರೆ.

Advertisement

ಚಂದ್ರನ ಮೇಲೆ ಲ್ಯಾಂಡರ್ ಇಳಿಯುವುದನ್ನು ಬೆಂಗಳೂರಿನ ಇಸ್ರೋ ಕೇಂದ್ರದಲ್ಲಿ ವೀಕ್ಷಿಸಲು ತುಂಬಾ ಕುತೂಹಲಿಯಾಗಿದ್ದೇನೆ ಎಂದು ಪ್ರಧಾನಿ ಮೋದಿ ಟ್ವೀಟ್ ಮೂಲಕ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಇಸ್ರೋದ ಈ ಐತಿಹಾಸಿಕ ಸಾಧನೆಯ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ನಾನು ತುಂಬಾ ಕಾತುರನಾಗಿದ್ದೇನೆ ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ವಿಕ್ರಮ್ ಲ್ಯಾಂಡರ್, ಪ್ರಜ್ಞಾನ್ ರೋವರ್ ಒಳಗೊಂಡ ಚಂದ್ರಯಾನ 2 ಉಪಕರಣಗಳನ್ನು ಹೊತ್ತ ಜಿಎಸ್ ಎಲ್ ವಿ ಮಾರ್ಕ್ 3 ರಾಕೆಟ್ ಜುಲೈ 22ರಂದು ಯಶಸ್ವಿಯಾಗಿ ಉಡ್ಡಯನವಾಗಿತ್ತು. ಅಂದಿನಿಂದ ನಿರಂತರವಾಗಿ ಪ್ರಧಾನಿ ಮೋದಿ ಅವರು ಚಂದ್ರಯಾನ 2 ಸಂಬಂಧಿ ಸರಣಿ ಟ್ವೀಟ್ ಮಾಡುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next