Advertisement

ಯರಗಟ್ಟಿ ತಾಲೂಕು ರಚನೆಗೆ ವ್ಯಾಪಕ ಹರ್ಷ

10:19 AM Feb 28, 2019 | |

ಯರಗಟ್ಟಿ: ದಶಕಗಳ ಹೋರಾಟದ ಫಲವಾಗಿ ಬುಧವಾರ ಯರಗಟ್ಟಿಯನ್ನು ತಾಲೂಕನ್ನಾಗಿ ಘೋಷಣೆ ಮಾಡುತ್ತಿದ್ದಂತೆ ಸ್ಥಳೀಯ ಕರವೇ, ರೈತಸೇನೆ, ದಲಿತ ಸಂಘರ್ಷ ಸೇರಿದಂತೆ ಇತರೆ ಸಂಘಟನೆಗಳು ಮತ್ತು ಮುಖಂಡರು ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

Advertisement

ಈ ವೇಳೆ ಹೊರಾಟಗಾರರು ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಅಭಿನಂದನೆ ಸಲ್ಲಿಸಿದರು. ಹಲವು ದಶಕಗಳಿಂದ ಕರವೇ, ರೈತ ಸೇನೆ ಮತ್ತು ಸಂಘಟನೆಗಳು ನಿರಂತರ ಹೋರಾಟ ಮಾಡುವುದರ ಜೊತೆಗೆ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು. ಹೋರಾಟದ ವೇದಿಕೆಗೆ ರಮೇಶ ಜಾರಕಿಹೊಳಿ, ಬಸವರಾಜ ಹೊರಟ್ಟಿ, ಆರ್‌.ವ್ಹಿ. ದೇಶಪಾಂಡೆ, ಸುರೇಶ ಅಂಗಡಿ, ಆರ್‌.ಬಿ. ತಮ್ಮಾಪುರ ಮುಂತಾದವರು ಆಗಮಿಸಿ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು.

ಕಳೆದ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಸ್ಥಳೀಯ ಶಾಸಕ ಆನಂದ ಮಾಮನಿ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಮನವರಿಕೆ ಮಾಡಿದ ನಿಮಿತ್ತ ಈಗ ಯರಗಟ್ಟಿ ತಾಲೂಕನ್ನಾಗಿ ಘೋಷಿಸಲಾಗಿದೆ ಎಂದು ಹೋರಾಟಗಾರರು ಹೇಳಿದರು.

ರಾಜರಾಜೇಶ್ವರಿ ಆಶ್ರಮದ ಗನಪತಿ ಮಹಾರಾಜರು, ಚಿಕ್ಕೊಪ್ಪದ ಶಿವಾಚಾರ್ಯ ಸ್ವಾಮೀಜಿ, ಜಿಪಂ ಸದಸ್ಯ ಅಜಿಕುಮಾರ ದೇಸಾಯಿ, ವ್ಹಿ.ಜಿ. ಕೊಪ್ಪದ, ಎಚ್‌.ಎಸ್‌. ಗಂಗರಡ್ಡಿ, ಸದಾನಂದ ಹನಬರ, ಇಮಾಮಸಾಬ ಹುಸೆನಾಯ್ಕರ, ಡಿ.ಕೆ. ರಫಿಕ, ಸೋಮು ರ್ಯಾನಾಪುರ, ಪ್ರವೀಣ ಪಠಾತ, ಸಂಜೀವ ಚನ್ನಮೇತ್ರಿ, ಸಮೀರ ಜಮಾದಾರ, ಕುಮಾರ ಜಕಾತಿ, ರತ್ನಾಕರ ಶೆಟ್ಟಿ, ಸಂಘನಗೌಡ ದ್ಯಾಮನಗೌಡರ, ವಿವಿಧ ಗ್ರಾಮಗಳ ಮುಖಂಡರು ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next