Advertisement

ಭಾರೀ ಮಳೆಗೆ ಅಪಾರ ಬೆಳೆ ನಷ್ಟ

03:49 PM Oct 18, 2021 | Team Udayavani |

ಪಾವಗಡ: ತಾಲೂಕಾದ್ಯಂತ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. ಕಸಬಾ ಹೋಬಳಿ ನಲಿಗಾನಹಳ್ಳಿ ಗ್ರಾಪಂ ವ್ಯಾಪ್ತಿಯ ಕುರುಬರಹಳ್ಳಿ ಗ್ರಾಮದ ಸರ್ವೆ ನಂಬರ್‌ 72/2ರ ನರಸಿಂಹರೆಡ್ಡಿ ಎಂಬ ರೈತನಿಗೆ ಸೇರಿದ 2.20 ಎಕರೆ ನೀರಾವರಿ ಜಮೀನಿನಲ್ಲಿ ಶೇಂಗಾ, ದಾಳಿಂಬೆ ಹಾಗೂ ಜಮೀನು ಸುತ್ತ ಹಾಕಿದ ತಂತಿಬೇಲಿ ಮಳೆಗೆ ಕೊಚ್ಚಿ ಹೋಗಿದ್ದು, 4 ಲಕ್ಷ ರೂ. ನಷ್ಟ ಉಂಟಾಗಿದೆ.

Advertisement

ರೈತ ನರಸಿಂಹ ರೆಡ್ಡಿ ಸಾಲ ಮಾಡಿ ಶೇಂಗಾ ಬಿತ್ತನೆ ಮಾಡಿದ್ದು, ಮಳೆ ಯಿಂದ ಎಲ್ಲ ಕೊಚ್ಚಿ ಹೋಗಿದೆ. ಮಳೆಯಿಂದ ಆದ ಅನಾಹುತಕ್ಕೆ ರೈತ ಕುಟುಂಬಕ್ಕೆ ಕಣ್ಣಿರು ಸುರಿಸುತ್ತಿದೆ. ಸ್ಥಳಕ್ಕೆ ಭೇಟಿ ನೀಡಿದ ರಾಜ್ಯ ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ಪೂಜಾರಪ್ಪ ಮಾತನಾಡಿ, ಕಳೆದ ಒಂದು ವಾರದಿಂದ ಸುರಿದ ಮಳೆಗೆ ರೈತರು ಬೆಳೆದಂತಹ ಬೆಳೆ ಸಂಪೂರ್ಣ ನೆಲ ಕಚ್ಚಿ ಹೋಗಿದೆ. ಶೇಂಗಾ ಗಿಡ ಕಿತ್ತು ಒಣಗಿಸುವ ಉದ್ದೇಶದಿಂದ ಹೊಲದಲ್ಲಿಯೇ ಬಿಡಲಾ ಗಿತ್ತು.

ಈ ಹಂತದಲ್ಲಿ ಸುರಿದ ಮಳೆಯಿಂದ ಎಲ್ಲ ಶೇಂಗಾ ಗಿಡ ಕೊಚ್ಚಿ ಹೋಗಿ ಕೆರೆಯ ಪಾಲಾಗಿವೆ. ರೈತ ನರಸಿಂಹ ರೆಡ್ಡಿಗೆ ಸರ್ಕಾರದಿಂದ ಪರಿಹಾರವನ್ನು ನೀಡಬೇಕು ಎಂದು ಮನವಿ ಮಾಡಿದರು. ಕಂದಾಯ ಇಲಾಖೆ ಅಧಿಕಾರಿ ತಿಪ್ಪೇಸ್ವಾಮಿ ಮಾತನಾಡಿ, ಕುರುಬರಹಳ್ಳಿ ಗ್ರಾಮದ ರೈತ ನರಸಿಂಹರೆಡ್ಡಿ ಅವರು,ತಮ್ಮ ಜಮೀನಿನಲ್ಲಿ ಬೆಳೆದ ಶೇಂಗಾ ಸಂಪೂರ್ಣ ಕೊಚ್ಚಿ ಹೋಗಿದೆ.

ನಾಟಿ ಮಾಡಿರುವ ದಾಳಿಂಬೆ ಗಿಡಗಳು ಮತ್ತು ತಂತಿಬೇಲಿ ಮಳೆಯಿಂದ ಹಾನಿಯಾಗಿದ್ದು, ಈ ವಿಷಯವನ್ನು ಮೇಲಿನ ಅಧಿಕಾರಿಗಳಿಗೆ ವರದಿ ಮಾಡಿ ಸೂಕ್ತ ಪರಿಹಾರ ನೀಡವುದಕ್ಕೆ ಪ್ರಯತ್ನ ಮಾಡುವುದಾಗಿ ತಿಳಿಸಿದರು. ಹಸಿರು ಸೇನೆಯ ಉಪಾಧ್ಯಕ್ಷ ನಾರಾಯಣಪ್ಪ, ಕಾರ್ಯದರ್ಶಿ ಶಿವರಾಜ್‌, ಸದಸ್ಯ ಬ್ಯಾಡನೂರು ಶಿವ ರುದ್ರಪ್ಪ, ಶನಿವಾರಪ್ಪ, ಪೂಜಾರಿ ಚಿತ್ತಯ್ಯ, ಸಿ.ಕೆ.ಪುರ ನರಸಣ್ಣ, ಅನ್ನಪೂರ್ಣಮ್ಮ, ಹನುಮ ಸಾಗರದ ಹುಲಿ ಯಪ್ಪ, ದೊಡ್ಡಣ್ಣ, ರಾಮಚಂದ್ರಪ್ಪ ಹಾಗೂ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next