Advertisement

ಪುರಪಿತೃ ಸ್ಥಾನಕ್ಕೆ ತೀವ್ರ ಪೈಪೋಟಿ

02:09 PM Jul 27, 2018 | |

ವಿಜಯಪುರ: ರಾಜ್ಯದ ಪ್ರತಿಷ್ಠಿತ ಮಹಾನಗರ ಪಾಲಿಕೆ ಎನಿಸಿರುವ ವಿಜಯಪುರ ಮಹಾನಗರ ಪಾಲಿಕೆ ಪ್ರಸಕ್ತ ಅವಧಿಯ ಕೊನೆಯ ಮೇಯರ್‌ -ಉಪ ಮೇಯರ್‌ ಆಯ್ಕೆಗೆ ಜು. 28ರಂದು ಚುನಾವಣೆ ನಿಗದಿಯಾಗಿದೆ, ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಇಲ್ಲದ ಅತಂತ್ರ ಸ್ಥಿತಿ ಇದ್ದರೂ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಮೂರು ಪಕ್ಷಗಳು ಇಲ್ಲಿ ಮೈತ್ರಿ ಮಾಡಿಕೊಂಡು ನಾಲ್ಕು ಅವಧಿಯಲ್ಲಿ ಬಹುತೇಕ ಅಧಿಕಾರ ನಡೆಸಿವೆ. ವಿಜಯಪುರ ರಾಜಕೀಯ ಬಲ್ಲವರಿಗೆ ಇದೇನು ಅಚ್ಚರಿಯಲ್ಲ. ಹೀಗಾಗಿ ಪ್ರಸಕ್ತ ಅವಧಿಗೂ ಅಧಿಕಾರ ನಡೆಸಲು ಮೂರು ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆ ಬಿರುಸುಗೊಂಡಿವೆ.

Advertisement

ಪ್ರಸಕ್ತ ಪಾಲಿಕೆಯ ಕೊನೆ ಅವಧಿಗೆ ಮೇಯರ್‌ ಅಧಿಕಾರ ಹಿಡಿಯುವ ಅವಕಾಶ ಬಿಜೆಪಿಗೆ ಅಧಿಕವಾಗಿದೆ. ಆದರೆ ಬಿಜೆಪಿಯಲ್ಲಿನ ಬಣ ರಾಜಕೀಯ ಕಾಂಗ್ರೆಸ್‌ ಪಕ್ಷಕ್ಕೆ ಮತ್ತೆ ಅಧಿಕಾರ ಹಂಚಿಕೊಳ್ಳಲು ಅವಕಾಶ ಕಲ್ಪಿಸುವ ಅವಕಾಶ ಹೆಚ್ಚಿದೆ. 4 ಅವಧಿಯಲ್ಲೂ ಮೀಸಲು ಕಾರಣ ಘಟಾನುಘಟಿಗಳು ಮೇಯರ್‌-ಉಪ ಮೇಯರ್‌ ಅಧಿಕಾರದಿಂದ ಅವಕಾಶ ವಂಚಿತರಾಗಿದ್ದು, ಕೋರ್ಟ್‌ ಮೆಟ್ಟಿಲೇರಿದರೂ ಅಧಿಕಾರ ಸಿಕ್ಕಿಲ್ಲ. ಇದೀಗ 5ನೇ ಅವಧಿಯಲ್ಲೂ ಮೇಯರ್‌ ಸ್ಥಾನ 3-ಬಿ ಮಹಿಳೆ, ಉಪ ಮೇಯರ್‌ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿದೆ.

35 ಸದಸ್ಯ ಬಲದ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಮೂಲ ಸದಸ್ಯ ಬಲ 13, ಕಾಂಗ್ರೆಸ್‌ 10, ಜೆಡಿಎಸ್‌ 8, ಎನ್‌ಸಿಪಿ-ಕೆಜೆಪಿ ತಲಾ 1 ಹಾಗೂ ಇಬ್ಬರು ಪಕ್ಷೇತರ ಸದಸ್ಯರಿದ್ದಾರೆ. ಬದಲಾದ ರಾಜಕೀಯ ಸ್ಥಿತಿಯಲ್ಲಿ ಬಿಜೆಪಿ-22, ಕಾಂಗ್ರೆಸ್‌-9, ಜೆಡಿಎಸ್‌ 2, ಕೆಜೆಪಿ, ಪಕ್ಷೇತರ ತಲಾ 1 ಸದಸ್ಯತ್ವ ಹೊಂದಿದೆ.

3-ಬಿ ಮಹಿಳೆ ಮೀಸಲಾತಿಯಡಿ ಬಿಜೆಪಿಯ ಭಾರತಿ ಬೆಲ್ಲದ, ಜೆಡಿಎಸ್‌ ಪಕ್ಷದಿಂದ ಆಯ್ಕೆಯಾಗಿ ಕಳೆದ ವಿಧಾನಸಭೆ ಚುನಾವಣೆ ವೇಳೆ ಯತ್ನಾಳ ಅವರನ್ನು ಬೆಂಬಲಿಸಿ ಬಿಜೆಪಿ ಸೇರ್ಪಡೆ ಆಗಿರುವ ವಿದ್ಯಾ ಕವಟಗಿ ಮೇಯರ್‌ ಸ್ಥಾನ ಪ್ರಮುಖ ಆಕಾಂಕ್ಷಿಗಳು. ಅವಕಾಶ ಸಿಕ್ಕರೆ ಮತ್ತೆ ಅಧಿಕಾರಕ್ಕೆ ಏರಲು ಕಾಂಗ್ರೆಸ್‌ ಪಕ್ಷ ತನ್ನಲ್ಲಿರುವ ಶ್ರೀದೇವಿ ಲೋಗಾಂವಿ ಅವರನ್ನು ಕಣಕ್ಕಿಳಿಸುವ ಸಿದ್ಧತೆ ನಡೆಸಿದೆ.

ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಉಪ ಮೇಯರ್‌ ಸ್ಥಾನಕ್ಕೆ ಹಾಲಿ ಮೇಯರ್‌ ಸಂಗೀತಾ ಪೋಳ, ಮಾಜಿ ಉಪ ಮೇಯರ್‌ ಗೋಪಾಲ ಘಟಕಾಂಬಳೆ, ಬಿಜೆಪಿ ಸೇರಿರುವ ಎನ್‌ಸಿಪಿ ಸದಸ್ಯ ಸಂತೋಷ ಚವ್ಹಾಣ ಹಾಗೂ ಕಾಂಗ್ರೆಸ್‌ನಿಂದ ಪ್ರೇಮಸಿಂಗ್‌ ಚವ್ಹಾಣ ಆಕಾಂಕ್ಷಿಗಳು. ಬಿಜೆಪಿ ದೊಡ್ಡ ಪಕ್ಷವಾಗಿದ್ದರೂ ಕಾಂಗ್ರೆಸ್‌ ತಂತ್ರದಿಂದಾಗಿ ಕಳೆದ 4 ಅವಧಿಗಳಲ್ಲಿ ಮೇಯರ್‌ ಸ್ಥಾನ ಗಿಟ್ಟಿಸಿಕೊಳ್ಳಲಾಗಿರಲಿಲ್ಲ. 2 ಅವಧಿಗಳಲ್ಲಿ ಉಪ ಮೇಯರ್‌ ಸ್ಥಾನಕಷ್ಟೇ ತೃಪ್ತಿಪಡುವಂತಾಗಿತ್ತು. ಆದರೀಗ ಜೆಡಿಎಸ್‌ನ 6 ಸದಸ್ಯರು, ಕಾಂಗ್ರೆಸ್‌ನ ಇಬ್ಬರು ಹಾಗೂ ಓರ್ವ ಪಕ್ಷೇತರ ಬಿಜೆಪಿ ಸೇರಿದ್ದು, ಕಮಲ ಅರಳಿಸಲು ಸುವರ್ಣವಕಾಶ ದೊರಕಿದೆ. ಇದಲ್ಲದೇ ಬಿಜೆಪಿಯ ಓರ್ವ ಸಂಸದ ರಮೇಶ ಜಿಗಜಿಣಗಿ, ಓರ್ವ ಎಂಎಲ್‌ಎ ಬಸನಗೌಡ ಪಾಟೀಲ ಯತ್ನಾಳ, ಓರ್ವ ಎಂಎಲ್‌ಸಿ ಅರುಣ ಶಹಾಪುರ, ಜೆಡಿಎಸ್‌ ಪಕ್ಷದ ಎಂಎಲ್‌ಎ ದೇವಾನಂದ ಚವ್ಹಾಣ ಕೂಡ ಮತದಾನದ ಹಕ್ಕು ಹೊಂದಿದ್ದಾರೆ.

Advertisement

ಗಮನೀಯ ಅಂಶ ಎಂದರೆ ಈ ಬಾರಿ ಜಿಲ್ಲೆಯಲ್ಲಿ ರಾಜ್ಯದ ಮೈತ್ರಿ ಸರ್ಕಾರದ ಕಾಂಗ್ರೆಸ್‌ ಶಿವಾನಂದ ಪಾಟೀಲ ಹಾಗೂ ಜೆಡಿಎಸ್‌ನ ಎಂ.ಸಿ.ಮನಗೂಳಿ ಇಬ್ಬರೂ ಸಚಿವರಿದ್ದು, ಮಹಾನಗರ ಪಾಲಿಕೆ ಚುನಾವಣೆಯನ್ನು ಯಾವ ರೀತಿ ಸ್ವೀಕರಿಸುತ್ತಾರೆ ಎಂದು ಕಾದು ನೋಡಬೇಕಿದೆ.

ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಇಲ್ಲದ ವಿಜಯಪುರ ಮಹಾನಗರ ಪಾಲಿಕೆಯಲ್ಲಿ ಅಧಿಕಾರದ ಗದ್ದುಗೆ ಏರಲು ಮೈತ್ರಿ ಅನಿವಾರ್ಯವಾಗಿತ್ತು. ಹೀಗಾಗಿಯೇ ಮೊದಲ ಅವ ಧಿಯಲ್ಲಿ ಬಿಜೆಪಿ ಸದಸ್ಯೆಯನ್ನೇ ಹೈಜಾಕ್‌ ಮಾಡಿದ್ದ ಕಾಂಗ್ರೆಸ್‌ ಜೆಡಿಎಸ್‌ ಮೈತ್ರಿಯೊಂದಿಗೆ ಅಧಿಕಾರ ನಡೆಸಿತ್ತು. 2ನೇ ಅವ ಧಿಯಲ್ಲಿ ಜೆಡಿಎಸ್‌ ಮೈತ್ರಿಯೊಂದಿಗೆ ಅ ಧಿಕಾರ ನಡೆಸಿದ ಕಾಂಗ್ರೆಸ್‌, 3ನೇ ಅವಧಿಯಲ್ಲಿ ಕಾಂಗ್ರೆಸ್‌-ಬಿಜೆಪಿ-ಜೆಡಿಎಸ್‌ ಮೈತ್ರಿಯೊಂದಿಗೆ ಅಧಿಕಾರ ನಡೆಸಿದ್ದು, ಮೂರನೇ ಅವಧಿಯಲ್ಲಿ ಕಾಂಗ್ರೆಸ್‌-ಜೆಡಿಎಸ್‌, 4ನೇ ಅವಧಿಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಮಾಡಿಕೊಂಡು ಮೂರು ಪಕ್ಷಗಳು ಅಧಿಕಾರ ಅನುಭವಿಸಿವೆ.

ಆದರೆ ಅಧಿ ಕಾರ ಕೊನೆ ಅವ ಧಿಯಲ್ಲಿ ಕಾಂಗ್ರೆಸ್‌ -ಬಿಜೆಪಿಗೆ ಅಧಿ ಕಾರದಲ್ಲಿರುವುದು ಮಹತ್ವ ಎನಿಸಿದೆ. ಇದೀಗ ಕಾಂಗ್ರೆಸ್‌ ಪಕ್ಷಕ್ಕೆ ಹೈಜಾಕ್‌ ಆಗಿದ್ದ ಸಂಗೀತಾ ಪೋಳ ಹಾಗೂ ಜೆಡಿಎಸ್‌ನ 6 ಸದಸ್ಯರು ಸೇರಿ 22 ಸದಸ್ಯ ಬಲ ಹೊಂದಿದ್ದರೂ ಅಧಿಕಾರ ಪಡೆಯುವುದು ಸುಲಭವಾಗಿಲ್ಲ. ಏಕೆಂದರೆ ಬಿಜೆಪಿಯಲ್ಲಿ ಬಣ ರಾಜಕೀಯ ಪಕ್ಷವನ್ನು ದುರ್ಬಲಗೊಳಿಸಿದೆ. ಇದೀಗ ಕೂಡ ಶಾಸಕ ಬಸನಗೌಡ ಪಾಟೀಲಯ ಯತ್ನಾಳ ಹಾಗೂ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಬಣಗಳ ಮಧ್ಯೆ ಮೇಯರ್‌-ಉಪ ಮೇಯರ್‌ ಆಯ್ಕೆ ವಿಷಯವಾಗಿಯೇ ಪೈಪೋಟಿ ಏರ್ಪಟ್ಟಿದೆ. ದರ ಲಾಭ ಪಡೆದು ಕೊನೆ ಅವಧಿಯಲ್ಲೂ ಅಧಿಕಾರದ ಗದ್ದುಗೆ ಏರಲು ಕಾಂಗ್ರೆಸ್‌ ಹವಣಿಗೆ ನಡೆಸುತ್ತಿದೆ

ಮೇಯರ್‌-ಉಪ ಮೇಯರ್‌ ಚುನಾವಣೆಯಲ್ಲಿ ಬಿಜೆಪಿ ಸದಸ್ಯರು ವಿಪ್‌ ಪ್ರಕಾರ ಪಕ್ಷದ ಅಧಿಕೃತ ಅಭ್ಯರ್ಥಿಗೆ ಮತ ಚಲಾಯಿಸಬೇಕು. ವಿಪ್‌ ಉಲ್ಲಂಘಿಸಿದರೆ ಪಾಲಿಕೆ ಸದಸ್ಯತ್ವ ರದ್ದು ಮಾಡಲು ಕಾನೂನು ಕ್ರಮದ ಜೊತೆಗೆ ಬಿಜೆಪಿ ಸದಸ್ಯತ್ವದಿಂದಲೂ ಉಚ್ಛಾಟಿಸಲಾಗುತ್ತದೆ.
ಬಸನಗೌಡ ಪಾಟೀಲ ಯತ್ನಾಳ
ಶಾಸಕರು, ವಿಜಯಪುರ ನಗರ ಕ್ಷೇತ್ರ

ಜಿ.ಎಸ್‌. ಕಮತರ

Advertisement

Udayavani is now on Telegram. Click here to join our channel and stay updated with the latest news.

Next