Advertisement

ಭಾರತ್‌ ಜೋಡೋ ಯಾತ್ರೆಗೆ ಅಪೂರ್ವ ಬೆಂಬಲ: ರಮಾನಾಥ ರೈ

12:32 AM Oct 30, 2022 | Team Udayavani |

ಮಂಗಳೂರು: ಧರ್ಮದ ಆಧಾರದಲ್ಲಿ ದೇಶವನ್ನು ಒಡೆಯುವ ಶಕ್ತಿಗಳ ವಿರುದ್ಧ ರಾಹುಲ್‌ ಗಾಂಧಿಯವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಹಮ್ಮಿಕೊಂಡಿರುವ ಭಾರತ್‌ ಜೋಡೋ ಯಾತ್ರೆ ತೆಲಂಗಾಣ ಪ್ರವೇಶಿಸಿದ್ದು, ಯಾತ್ರೆಯುದ್ದಕ್ಕೂ ಎಲ್ಲ ವರ್ಗದ ಜನರು ಸ್ವಾಗತಿಸುವ ಮೂಲಕ ಯಶಸ್ವಿಯಾಗಿ ಸಾಗುತ್ತಿದೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Advertisement

ಬಿಜೆಪಿಯವರ ಟೀಕೆಗೆ ಅವರದ್ದೇ ಧ್ವನಿಯಲ್ಲಿ ಉತ್ತರ ನೀಡಬೇಕಾದ ಅನಿವಾರ್ಯ ಎದುರಾಗಿದೆ. ಯಾತ್ರೆಯನ್ನು ಟೀಕಿಸಿ ಯಾತ್ರೆ ಪಾಕಿಸ್ಥಾನಕ್ಕೆ ಹೋಗಿ ಮಾಡಲಿ ಎನ್ನುವ ಬಿಜೆಪಿಯವರು ತಮ್ಮ ಅಖಂಡ ಭಾರತದ ದೊಂದಿ ಮೆರವಣಿಗೆಯನ್ನು ಪಾಕಿಸ್ಥಾನದ ಸಹಿತ ಅಖಂಡ ಭಾರತದಲ್ಲಿದ್ದ ಇತರ ದೇಶಗಳಲ್ಲೂ ನಡೆಸಲಿ ಎಂದರು.

ದ್ವೇಷ ಭಾಷಣದ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಬೇಕು ಎಂಬ ಸುಪ್ರೀಂ ಕೋರ್ಟ್‌ನ ಆದೇಶ ದ.ಕ. ಜಿಲ್ಲೆಗೂ ಅನ್ವಯ ಆಗಬೇಕಾಗಿದೆ. ಕಾಣಿಯೂರು ಪ್ರಕರಣಕ್ಕೆ ಸಂಬಂಧಿಸಿ ಸಿಒಡಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರಾಗಿರುವ ಬಗ್ಗೆ ಸಿ.ಟಿ. ರವಿ ಮಾಡಿರುವ ಟೀಕೆಗೆ ಆಕ್ರೋಶ ವ್ಯಕ್ತಪಡಿಸಿದ ರೈಯವರು, ರವಿಯ ವಯಸ್ಸಿಗಿಂತ ಜಾಸ್ತಿ ಖರ್ಗೆಯವರಿಗೆ ರಾಜಕೀಯ ಅನುಭವ ಇದೆ. ಅವರ ಬಗ್ಗೆ ಮಾತನಾಡುವ ಯಾವುದೇ ಯೋಗ್ಯತೆ ರವಿಗಿಲ್ಲ ಎಂದರು.

ಮುಖಂಡರಾದ ಹರಿನಾಥ್‌, ಶಶಿಧರ ಹೆಗ್ಡೆ, ಟಿ.ಕೆ. ಸುಧೀರ್‌, ಅಪ್ಪಿ, ನೀರಜ್‌ ಪಾಲ್‌, ಪ್ರಕಾಶ್‌ ಸಾಲಿಯಾನ್‌, ರಮಾನಂದ, ಸುಹಾನ್‌, ಸದಾಶಿವ ಉಳ್ಳಾಲ, ಮಹಮ್ಮದ್‌ ಮೋನು, ಭಾಸ್ಕರ್‌, ನವೀನ್‌ ಡಿ’ಸೋಜಾ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next