Advertisement

ಬಹಿರ್ಮುಖಿ-ಅಂತರ್ಮುಖಿ ರಾಯರು

08:15 AM Feb 17, 2018 | |

ಉಡುಪಿ: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳು ಪವಾಡ ಪುರುಷರು ಮಾತ್ರವಲ್ಲ; ಅವರು ಏಕಕಾಲದಲ್ಲಿ ಅಂತರ್ಮುಖೀ ಮತ್ತು ಬಹಿರ್ಮುಖೀ ವ್ಯಕ್ತಿತ್ವ ಹೊಂದಿದ ಮಹಾಪುರುಷರು ಕೂಡ ಆಗಿದ್ದರು ಎಂದು ಪರ್ಯಾಯ ಶ್ರೀ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಹೇಳಿದರು.

Advertisement

ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠ ಮತ್ತು ಮಂತ್ರಾಲಯ ಶ್ರೀ ರಾಘವೇಂದ್ರ ಸಪ್ತಾಹ ಕಾರ್ಯಾಚರಣ ಸಮಿತಿ ವತಿಯಿಂದ ಫೆ.16ರಿಂದ 22ರ ವರೆಗೆ ಆಯೋಜಿಸಲಾದ ಶ್ರೀ ರಾಘವೇಂದ್ರ ಸಪ್ತಾಹ ರಜತೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ಮಂತ್ರಾಲಯ ಶ್ರೀ ರಾಘ ವೇಂದ್ರ ಸ್ವಾಮಿ ಮಠದ ಶ್ರೀ ಸುಬು ಧೇಂದ್ರತೀರ್ಥ ಶ್ರೀಪಾದರು ಮತ್ತು ಅದಮಾರು ಮಠದ ಕಿರಿಯ ಯತಿ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು. ಮಂತ್ರಾಲಯದ ವಿದ್ವಾನ್‌ ರಾಜಾ ಗಿರಿಯಾಚಾರ್ಯ, ಮಠದ ದಿವಾನ ಶಿಬರೂರು ವೇದವ್ಯಾಸ ತಂತ್ರಿ, ಚಿಂತರವೇಲಿಯ ಅದ್ಯ ಕೇಶವಾಚಾರ್ಯ ಉಪಸ್ಥಿತ ರಿದ್ದರು. ಮಂತ್ರಾಲಯ ರಾಘವೇಂದ್ರ ಮಠದ ವೃಂದಾವನದ ಪ್ರಧಾನ ಅರ್ಚಕ ಪರಿಮಳಾಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಹ್ಲಾದ ರಾವ್‌ ಕಾರ್ಯಕ್ರಮ ನಿರ್ವಹಿಸಿದರು.

ನೇರಪ್ರಸಾರ ಆ್ಯಪ್‌: ರಾಘವೇಂದ್ರ ಸಪ್ತಾಹ‌ದ ನೇರಪ್ರಸಾರವನ್ನು “ವಿಆರ್‌ ಡಿವೋಟಿ’ ಆ್ಯಪ್‌ ಮೂಲಕ 360 ಡಿಗ್ರಿ ವರ್ಚುವಲ್‌ ರಿಯಾಲಿಟಿ (ವಿಆರ್‌) ಯಲ್ಲಿ ವೀಕ್ಷಿಸಬಹುದಾಗಿದೆ.

ಹಸುವಿದ್ದಲ್ಲಿ ಕರು, ಕರುವಿದ್ದಲ್ಲಿ ಹಸು
ರಾಘವೇಂದ್ರ ಸ್ವಾಮಿಗಳು ಕಾಮಧೇನು. ಕರು ಇದ್ದಲ್ಲಿಗೆ ಹಸು ಬರುತ್ತದೆ. ಹಸು ಇದ್ದಲ್ಲಿ ಕರು ಬರುತ್ತದೆ. ಅಂತೆಯೇ ಸ್ವಾಮಿಗಳು ಭಕ್ತರ ಬಳಿ ಬಂದು ಕೂಡ ಅನುಗ್ರಹಿಸುತ್ತಾರೆ. ಈ ಹಿನ್ನೆಲೆಯಲ್ಲಿ ಕಳೆದ 25 ವರ್ಷಗಳಿಂದ ರಾಯರ ಉತ್ಸವವನ್ನು ವಿವಿಧ ರಾಜ್ಯಗಳಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ. ಎಂದು ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದರು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next