Advertisement

ನಗರದ ಶೌಚಾಲಯದಲ್ಲಿ ಮಹಿಳೆಯರಿಂದ ಅಧಿಕ ಹಣ ವಸೂಲಿ

11:24 PM Feb 08, 2020 | Sriram |

ಉಡುಪಿ: ನಗರಸಭೆ ವ್ಯಾಪ್ತಿಯ ಬಸ್‌ ನಿಲ್ದಾಣದಲ್ಲಿರುವ ಸಾರ್ವಜನಿಕರ ಶೌಚಾಲಯದಲ್ಲಿ ಮೂತ್ರ ವಿಸರ್ಜನೆಗಾಗಿ ಮಹಿಳೆಯರಿಂದ ಹಣ ಪಡೆಯಲಾಗುತ್ತಿದ್ದು, ಅಲಿಖೀತ ನಿಯಮಾವಳಿಗಳನ್ನು ಗುತ್ತಿಗೆದಾರರು ಸಾರ್ವಜನಿಕರ ಮೇಲೆ ಹೇರುತ್ತಿದ್ದಾರೆ.

Advertisement

ಟೆಂಡರ್‌ ಷರತ್ತು ಉಲ್ಲಂಘನೆ
ಟೆಂಡರ್‌ ಸಂದರ್ಭದಲ್ಲಿ ಪ್ರಯಾಣಿಕರಿಗೆ ಉಚಿತವಾಗಿ ಮೂತ್ರ ವಿಸರ್ಜನೆಗೆ ಅವಕಾಶ ನೀಡಬೇಕು ಎಂದು ವಿಧಿಸಿದ ಷರತ್ತುಗಳ ಉಲ್ಲಂಘನೆಯಾಗುತ್ತಿದೆ. ಮಲ ವಿಸರ್ಜನೆಗೆ ಗುತ್ತಿಗೆದಾರರು 2ರಿಂದ 3ರೂ. ಪಡೆಯಬೇಕು ಎಂಬ ನಿಯವಗಳಿದ್ದರೂ ಕೂಡ ಮಹಿಳೆಯರಿಂದ ಮೂತ್ರ ಹಾಗೂ ಮಲ ವಿಸರ್ಜಜನೆಗೆ 5 ರೂ., ಪುರುಷರ ಮೂತ್ರ ವಿಸರ್ಜನೆಗೆ 3 ರೂ, ಮಲ ವಿಸರ್ಜನೆಗೆ 5ರೂ. ಪಡೆಯುತ್ತಿದ್ದಾರೆ.

ಮಹಿಳೆಯರಿಗೆ ಮುಜುಗರ
ಇಲ್ಲಿ ಪುರುಷ ಸಿಬಂದಿ ಹಣ ವಸೂಲಿ ಮಾಡುತ್ತಿದ್ದು, ಮಹಿಳೆಯರು ಶೌಚಾಲಯಕ್ಕೆ ತೆರಳಲು ಮುಜುಗರ ಅನುಭವಿಸುವಂತಾಗಿದೆ. ಭದ್ರತೆಯೂ ಇಲ್ಲದ್ದರಿಂದ ಮಹಿಳೆಯರು ತೆರಳಲು ಭಯಪಡುವಂತಾಗಿದೆ. ರಾತ್ರಿಯೂ ಇಲ್ಲಿಗೆ ಯಾರೂ ಬರುತ್ತಿಲ್ಲ.

ಸೂಚನೆ ಕಾಣಲ್ಲ
ಶೌಚಾಲಯ ಪ್ರವೇಶ ದ್ವಾರದಲ್ಲಿ ಶೌಚಾಲಯ ಉಪಯೋಗಿಸಲು ವಿಧಿಸುವ ಶುಲ್ಕದ ವಿವರ ಹಾಕಬೇಕು. ಆದರೆ ಇದುವರೆಗೆ ಸೂಚನಾ ಫ‌ಲಕ ಹಾಕಿಲ್ಲ. ನಿಗದಿತ ಶುಲ್ಕ ಗೊತ್ತಾದರೆ, ಪ್ರಯಾಣಿಕರು ಜಗಳ ಮಾಡುತ್ತಾರೆ ಎನ್ನುವ ಕಾರಣಕ್ಕೆ ಬರಹ ಅಳಿಸಲಾಗಿದೆ. ಗಮನಾರ್ಹ ಅಂಶವೆಂದರೆ, ಹೆಚ್ಚು ಹಣ ವಸೂಲಿ ಮಾಡುತ್ತಿರುವುದು ಮೇಲಧಿಕಾರಿಗಳಿಗೆ ಮಾಹಿತಿ ಇದ್ದರೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ.

ಪ್ರವಾಸಿಗರಿಗೆ ಭಯ!
ಉಡುಪಿಗೆ ನಿತ್ಯ ಹಲವೆಡೆಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಶೌಚಾಲಯದ ಸಮೀಪ ಸಿಬಂದಿ ಹೊರತು, ಕುಡುಕರು ನಿಂತುಕೊಂಡು ಕಾಲ ಕಳೆಯುವುದರಿಂದ ಪ್ರವಾಸಿಗರು ಶೌಚಾಲಯಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ ಎನ್ನುವ ಆರೋಪಗಳಿವೆ.

Advertisement

ದುಬಾರಿ ದರ, ಸ್ವಚ್ಛತೆ ಮಾಯ !
ನಿತ್ಯ ಸಾವಿರಾರು ಪ್ರಯಾಣಿಕರು ಬಂದು ಹೋಗುವ ನಗರದ ಬಸ್‌ ನಿಲ್ದಾಣದ ಶೌಚಾಲಯದ ಸ್ಥಿತಿ ವಾಕರಿಕೆ ಬರಿಸುವಂತಿದೆ. ಹೆಚ್ಚುವರಿ ಶುಲ್ಕ ಪಡೆದರೂ ಅದನ್ನು ಸ್ವಚ್ಛವಾಗಿಟ್ಟುಕೊಳ್ಳಲು ಗುತ್ತಿಗೆದಾರರು ಕ್ರಮ ಕೈಗೊಂಡಿಲ್ಲ .

ಹೆಚ್ಚಿನ ಹಣ ವಸೂಲಿ
ಶಾಲೆಗೆ ಹೋಗುವ ವಿದ್ಯಾರ್ಥಿನಿಯರು ಮೂತ್ರ ವಿಸರ್ಜನೆ ಮಾಡಲು ಹಣ ನೀಡ ಬೇಕಾಗಿದೆ. ನಿಗದಿತ ದರಕ್ಕಿಂತ ಹೆಚ್ಚಿನ ಹಣ ಪಡೆದು ಕೊಳ್ಳುತ್ತಿದ್ದಾರೆ. ಈ ಕುರಿತು ಪ್ರಶ್ನಿಸಲು ಭಯವಾಗುತ್ತದೆ.
-ಸೌಮ್ಯಾ, ವಿದ್ಯಾರ್ಥಿನಿ

ಹೆಚ್ಚಿನ ಹಣ ವಸೂಲಿ
ಮೂತ್ರ ವಿಸರ್ಜನೆಗೆ ಮಹಿಳೆಯರಿಂದ ಹೆಚ್ಚುವರಿಯಾಗಿ ಹಣ ಪಡೆಯುತ್ತಿರುವ ಕುರಿತು ಯಾವುದೇ ದೂರುಗಳು ಬಂದಿಲ್ಲ. ಅದರೂ ಗುತ್ತಿಗೆದಾರರಿಗೆ ಹೆಚ್ಚುವರಿ ಹಣ ಸಂಗ್ರಹಿಸದಂತೆ ಎಚ್ಚರಿಕೆ ನೀಡಲಾಗುತ್ತದೆ.
-ಸ್ನೇಹಾ, ಪರಿಸರ ಎಂಜಿನಿಯರ್‌ ನಗರಸಭೆ

Advertisement

Udayavani is now on Telegram. Click here to join our channel and stay updated with the latest news.

Next