Advertisement
ಕೆಲವು ಖಾಸಗಿ ಬಸ್ ಮಾಲಕರ ವಸೂಲಿಗೆ ಕಡಿವಾಣ ಹಾಕುವುದಕ್ಕೆ ಕೆಎಸ್ಸಾರ್ಟಿಸಿ ಬೆಂಗಳೂರಿ ನಿಂದ-ಮಂಗಳೂರು ಕಡೆಗೆ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಲು ನಿರ್ಧರಿಸಿದೆ.ಪುತ್ತೂರು ವಿಭಾಗದಲ್ಲಿ ಬಸ್‌ಗಳ ಕೊರತೆ ಇರುವ ಕಾರಣ ಹೆಚ್ಚುವರಿ ಬಸ್ ಬದಲು ಹೆಚ್ಚುವರಿ ಟ್ರಿಪ್ ಕಾರ್ಯಾಚರಣೆ ಮಾಡಲು ಚಿಂತನೆ ನಡೆಯುತ್ತಿದೆ.
ಗಣೇಶ ಹಬ್ಬದಂದು ಪ್ರಯಾಣಿಕರ ದಟ್ಟಣೆ ಹೆಚ್ಚಿರುವ ಕಾರಣದಿಂದಾಗಿ ಪ್ರಯಾಣಿಕರ ಅನುಕೂಲಕ್ಕಾಗಿ ಕೆಎಸ್ಸಾರ್ಟಿಸಿ ಹೆಚ್ಚುವರಿ ಬಸ್‌ಗಳಿಗೆ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸುವ ಸೌಲಭ್ಯಗಳನ್ನು ಕಲ್ಪಿಸಿದೆ. ಪ್ರಯಾಣಿಕರು ಬಸ್ ನಿಲ್ದಾಣಗಳಿಗೆ ತೆರಳುವ ಮುನ್ನ, ಮುಂಗಡ ಕಾಯ್ದಿರಿಸಲಾಗಿರುವ ಟಿಕೇಟುಗಳ ಮೇಲೆ ನಮೂದಿಸಲಾಗಿರುವ ಬಸ್ ನಿಲ್ದಾಣ/ಪಿಕ್‌ಅಪ್ ಪಾಯಿಂಟ್‌ನ ಹೆಸರನ್ನು ಗಮನಿಸಬಹುದಾಗಿದೆ. ಕೆಎಸ್ಸಾರ್ಟಿಸಿಯಲ್ಲಿ ನಾಲ್ಕು ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಟಿಕೇಟ್ ಕಾಯ್ದಿರಿಸಿದಲ್ಲಿ ಶೇ.5 ರಷ್ಟು ರಿಯಾಯಿತಿ ನೀಡಲಾಗುತ್ತಿದ್ದು, ಹೋಗುವ ಮತ್ತು ಬರುವ ಪ್ರಯಾಣದ ಟಿಕೇಟ್‌ನ್ನು ಒಟ್ಟಿಗೆ ಕಾಯ್ದಿರಿಸಿದಾಗ ಬರುವ ಪ್ರಯಾಣ ದರದಲ್ಲಿ ಶೇ.10 ರಷ್ಟು ರಿಯಾಯಿತಿ ನೀಡಲು ಮುಂದಾಗಿದೆ.
Related Articles
ಚೌ ಹಬ್ಬಕ್ಕೆ ಬೆಂಗಳೂರಿನ ಮಂದಿ ಮಂಗಳೂರಿಗೆ ಬರಬೇಕಾದರೆ ಮಾಮೂಲಿ ದರಕ್ಕಿಂತ ನಾಲ್ಕು ಪಟ್ಟು ಹೆಚ್ಚುವರಿ ದರ ನೀಡಿ ಬರಬೇಕು. ಬೆಂಗಳೂರಿನಲ್ಲಿರುವ ಹೆಚ್ಚಿನ ಮಂದಿ ಈ ಬಾರಿಯ ಗಣೇಶ ಚತುರ್ಥಿ ಹಬ್ಬವು ಸೆ. 2ರಂದು ಸೋಮವಾರ ಬಂದಿದ್ದು, ರವಿವಾರ ಖಾಸಗಿ ಮತ್ತು ಸರಕಾರಿ ಕಚೇರಿಗಳಿಗೆ ರಜೆ ಇರುತ್ತದೆ. ಕೆಲವೊಂದು ಸಾಫ್ಟ್‌ವೇರ್ ಕಚೇರಿಗಳಿಗೆ ಶನಿವಾರವೂ ರಜೆ ಇರುತ್ತದೆ. ಇದೇ ಕಾರಣಕ್ಕೆ ದೂರದ ಊರುಗಳಿಗೆ ಪ್ರಯಾಣಿಸುವ ಹೆಚ್ಚಿನ ಮಂದಿ ಶುಕ್ರವಾರ ರಾತ್ರಿಯೇ ಪ್ರಯಾಣ ಆರಂಭಿಸುತ್ತಾರೆ. ಬೆಂಗಳೂರಿನಿಂದ ಮಂಗ ಳೂರಿಗೆ ಶುಕ್ರವಾರದಂದು ಖಾಸಗಿ ಬಸ್‌ನಲ್ಲಿ ಗರಿಷ್ಠ ದರ 2,550 ರೂ. ಇದೆ. ಇನ್ನು, ಸೋಮವಾರ ಮತ್ತು ಮಂಗಳವಾರದಂದು ಮಂಗಳೂರಿನಿಂದ ಬೆಂಗಳೂರಿಗೆ 1,950 ರೂ. ಇದೆ.
Advertisement
ಹೆಚ್ಚುವರಿ ಬಸ್ಗಣೇಶ ಹಬ್ಬಕ್ಕೆಂದು ಕೆಎಸ್ಸಾ ರ್ಟಿಸಿಯು ರಾಜ್ಯದಲ್ಲಿ ಒಟ್ಟಾರೆ 1,800 ಹೆಚ್ಚುವರಿ ಬಸ್ ನಿಯೋಜಿಸ ಲಾಗಿದ್ದು, ಆ. 30ರಂದು ಬೆಂಗಳೂ ರಿನಿಂದ-ಮಂಗಳೂರಿಗೆ (ಉಡುಪಿ, ಕುಂದಾಪುರ)ಹೆಚ್ಚುವರಿ 20 ಬಸ್‌ಗಳು ಕಾರ್ಯಾಚರಣೆ ನಡೆಸಲಿವೆ. ಪುತ್ತೂರಿಗೆ 10 ಹೆಚ್ಚುವರಿ ಬಸ್ ಸಂಚರಿಸಲಿವೆ. ಒತ್ತ ಡಕ್ಕೆ ಅನುಗುಣ ವಾಗಿ ಹೆಚ್ಚುವರಿ ಬಸ್‌ಗಳು ನಿಯೋಜಿಸಲಾಗುತ್ತಿದೆ. ಸೆ.2 ಮತ್ತು 3ರಂದು 10ಕ್ಕೂ ಹೆಚ್ಚು ಬಸ್‌ಗಳು ಕುಂದಾಪುರ-ಉಡುಪಿ – ಮಂಗಳೂರು ಮಾರ್ಗವಾಗಿ ಬೆಂಗಳೂರಿಗೆ ಸಂಚರಿಸಲಿದೆ. ಅಗತ್ಯಕ್ಕೆ ತಕ್ಕಂತೆ ಹೆಚ್ಚುವರಿ ಬಸ್
ಗಣೇಶ ಹಬ್ಬಕ್ಕೆ ಬೆಂಗಳೂರಿನಿಂದ- ಮಂಗಳೂರಿಗೆ ಮತ್ತು ಮಂಗಳೂರಿನಿಂದ ಬೆಂಗಳೂರಿಗೆ ತೆರಳುವ ಪ್ರಯಾಣಿಕರಿಗೆ ಅನುಕೂಲವಾಗಲೆಂದು ಹೆಚ್ಚುವರಿ ಬಸ್‌ಗಳನ್ನು ನಿಯೋಜಿಸಲಾಗಿದೆ. ಒಂದು ವೇಳೆ ಪ್ರಯಾಣಿಕರ ಸಂಖ್ಯೆ ಮತ್ತಷ್ಟು ಹೆಚ್ಚಾದರೆ, ಅಗತ್ಯಕ್ಕೆ ಅನುಗಣವಾಗಿ ಮತ್ತಷ್ಟು ಬಸ್ ಕಾರ್ಯಾಚರಣೆ ನಡೆಸಲು ಕೆಎಸ್ಸಾರ್ಟಿಸಿ ತಯಾರಿದೆ.
– ಜಯಶಾಂತ್, ಕೆಎಸ್ಸಾರ್ಟಿಸಿ ವಿಭಾಗ ನಿಯಂತ್ರಣಾಧಿಕಾರಿ (ಪ್ರಭಾರ)