Advertisement

ವ್ಯಕ್ತಿತ್ವ ವಿಕಸನಕ್ಕೆ ಪಠ್ಯೇತರ ಚಟುವಟಿಕೆ ಪೂರಕ

11:49 AM Jul 28, 2017 | Team Udayavani |

ಹುಬ್ಬಳ್ಳಿ: ವ್ಯಕ್ತಿತ್ವ ವಿಕಸನ ಮತ್ತು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬೆಳೆಯಲು ಪಠ್ಯೇತರ ಚಟುವಟಿಕೆಗಳು ಸಹಾಯಕವಾಗುತ್ತವೆ ಎಂದು ಬೆಳಗಾವಿ ರಾಣಿ ಚನ್ನಮ್ಮ ವಿವಿಯ ಶಿಕ್ಷಣ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ| ಎ.ವಿ. ಕರಬಸನಗೌಡ್ರ ಹೇಳಿದರು. 

Advertisement

ಇಲ್ಲಿಯ ಉಣಕಲ್ಲನಲ್ಲಿರುವ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಐ.ಜಿ.  ಹಿರೇಗೌಡರ ಪದವಿ ಪೂರ್ವ ಮಹಾ ವಿದ್ಯಾಲಯದಲ್ಲಿ ನಡೆದ 2016-17ನೇ ಸಾಲಿನ ವಿದ್ಯಾರ್ಥಿ ಸಂಘ ಮತ್ತು ಸಹಪಠ್ಯ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಹೊರಹಾಕಲು, ನಾಯಕತ್ವ ಗುಣ ಬೆಳೆಸಲು ಸಹಪಠ್ಯ ಚಟುವಟಿಕೆಗಳು ಅವಶ್ಯ ಎಂದರು. ಆರ್‌.ವಿ. ಪಾಟೀಲ್‌ ಮಾತನಾಡಿದರು. ಕಾಲೇಜಿನ ಸ್ಥಳೀಯ ಸಲಹಾ ಸಮಿತಿಯ ಉಪಾಧ್ಯಕ್ಷ ಶಂಕರಗೌಡ ಶಿವಳ್ಳಿ, ಸದಸ್ಯರಾದ ಸೋಮನಗೌಡ ಪಾಟೀಲ್‌, ವಿಜಯಕುಮಾರ ಪಾಟೀಲ್‌,

-ಎಸ್‌. ಎಂ. ಶಿರೂರ, ಮುಖ್ಯೋಪಾಧ್ಯಾಯ ಶಿವಕುಮಾರಗೌಡ, ಪ್ರಾಚಾರ್ಯ ಉದಯ ಪೂಜಾರಿ ಇದ್ದರು. ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಉಪನ್ಯಾಸಕ ಬಸರಾಜ ಕುರ್ತಕೋಟಿ ಪ್ರತಿಜ್ಞಾ ವಿಧಿ ಬೋಧಿಸಿದರು. ಶ್ವೇತಾ ಸ್ವಾಗತಿಸಿದರು. ಸೋμಯಾ ನಿರೂಪಿಸಿದರು. ಪದ್ಮಾ ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next