Advertisement
ನಗರ ಪ್ರದೇಶದ ವಾಯುಮಾಲಿನ್ಯದಿಂದಾಗಿ ಜನಸಾಮಾನ್ಯರು ತೊಂದರೆಗೊಳಗಾಗುತ್ತಿದ್ದಾರೆ. ಅದರಲ್ಲೂ ರಾಷ್ಟ್ರ ರಾಜಧಾನಿ ಜನತೆ ವಿಷಗಾಳಿಯಿಂದ ತೀವ್ರ ಸಮಸ್ಯೆ ಎದುರಾಗಿದೆ. ಈ ವಿಷಯವನ್ನು ಗಮನದಲ್ಲಿರಿಸಿಕೊಂಡ ಶಿವಾನಿ ಖೋಟ್ ಹಾಗೂ ಇಶಾ ಖೋಟ್ ಸಹೋದರಿಯರು “ಬ್ಲೂ ಸಿಗ್ನಲ್’ ಎಂಬ ಪರಿಹಾರವನ್ನು ಕಂಡುಹಿಡಿದಿದ್ದಾರೆ.
ಟ್ರಾಫಿಕ್ ಸಿಗ್ನಲ್ ಗಳಲ್ಲಿ ಈಗಾಗಲ್ಲೇ ಇರುವ ಕೆಂಪು, ಹಳದಿ ಮತ್ತು ಹಸಿರು ಬಣ್ಣಗಳ ಜತೆಗೆ ನೀಲಿ ಬಣ್ಣವಿರಲಿದ್ದು, ಕೆಂಪು ಬಣ್ಣದ ಬಳಿಕ ಈ ಹೊಸತಾಗಿ ಅಳವಡಿಸಿರುವ ನೀಲಿ ಬಣ್ಣ ಸಿಗ್ನಲ್ ನಲ್ಲಿ ಕಾಣಿಸಿಕೊಳ್ಳುತ್ತದೆ. ಈ ಸಿಗ್ನಲ್ ವಾಹನ ಚಾಲಕರು ತಮ್ಮ ವಾಹನದ ಇಂಜಿನ್ ಆಫ್ ಮಾಡುವಂತೆ ಸೂಚಿಸಲಿದ್ದು, ಇಂಧನ ಉಳಿತಾಯದ ಜತೆಗೆ ಪರಿಸರ ಮಾಲಿನ್ಯ ತಪ್ಪಿಸಬಹುದು ಎಂದು ಸಹೋದರಿಯರಾದ ಶಿವಾನಿ ಖೋಟ್ ಹಾಗೂ ಇಶಾ ಖೋಟ್‌ಹೇಳಿದ್ದಾರೆ. ಕೆಂಪು ಸಿಗ್ನಲ್ ಬಂದ 10 ಸೆಕೆಂಡ್‌ಗಳ ನಂತರ ಬ್ಲೂ ಸಿಗ್ನಲ್ ಆನ್ ಆಗುತ್ತದೆ. ಅದೇ ಕೆಂಪು ಸಿಗ್ನಲ್ ಆಫ್ ಆಗುವ 10 ಸೆಕೆಂಡ್‌ಗೂ ಮುನ್ನ ಈ ಬ್ಲೂ ಸಿಗ್ನಲ್ ಆಫ್ ಆಗುತ್ತದೆ. ಆ ವೇಳೆ ಮತ್ತೆ ವಾಹನ ರಿಸ್ಟಾರ್ಟ್ ಮಾಡಿ ಸಿಗ್ನಲ್ ಬಿಟ್ಟ ನಂತರ ವಾಹನವನ್ನು ಮುಂದೆ ಚಲಾಯಿಸಬಹುದು. ಈ ಬಗ್ಗೆ ಮಾತನಾಡಿರುವ ಶಿವಾನಿ ಖೋಟ್ ದೇಶ ಸದ್ಯ ವಾಯುಮಾಲಿನ್ಯ ಎಂಬ ಪ್ರಮುಖ ಸಮಸ್ಯೆಯಲ್ಲಿ ಸಿಲುಕಿದ್ದು, ವಿಷಪೂರಿತ ಗಾಳಿಯಿಂದ ಹಲವು ಜನ ಸಾವನ್ನಪುತ್ತಿದ್ದಾರೆ. ನಮ್ಮ ರಾಜಧಾನಿ ದೆಹಲಿಯಲ್ಲಂತೂ ವಾಯುಮಾಲಿನ್ಯ ಅಪಾಯದ ಮಟ್ಟ ತಲುಪಿದೆ. ಇನ್ನೂ ಈ ಯೋಜನೆಯನ್ನು ಕಡಿಮೆ ವೆಚ್ಚದಲ್ಲಿ ಅಳವಡಿಸಿಕೊಳ್ಳಬಹುದಾಗಿದ್ದು, ಮನುಷ್ಯ ಜೀವಕ್ಕಿಂತ ಯಾವುದೂ ದೊಡ್ಡದಲ್ಲ. ಹೀಗಾಗಿ ನೀಲಿ ಸಿಗ್ನಲ್ ಅಳವಡಿಸಿ ಅಪಾಯವನ್ನು ಕೊಂಚ ಮಟ್ಟಿಗೆ ತಪ್ಪಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.