Advertisement

ಕೋರ್ಟ್‌ ಆದೇಶಗಳ ಅವಧಿ ವಿಸ್ತರಣೆ

01:24 AM Apr 18, 2020 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ 19 ವೈರಸ್‌ ಸೋಂಕು ವ್ಯಾಪಕ ವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಹೈಕೋರ್ಟ್‌ ಸೇರಿದಂತೆ ವಿವಿಧ ನ್ಯಾಯಾಲಯಗಳು ನೀಡಿರುವ ಮಧ್ಯಾಂತರ ಆದೇಶಗಳ ಅವಧಿಯನ್ನು ಜೂ.5ರವರೆಗೆ ವಿಸ್ತರಿಸಲಾಗಿದೆ.

Advertisement

ಈ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕುರಿತು ತುರ್ತು ವಿಚಾರಣೆ ನಡೆಸಿದ ಮುಖ್ಯ ನ್ಯಾಣ ಎ.ಎಸ್‌. ಓಕ್‌ ನೇತೃತ್ವದ ವಿಭಾಗೀಯ ನ್ಯಾಯಪೀಠ ಕಕ್ಷಿದಾರರ ಹಿತದೃಷ್ಟಿಯಿಂದ ಕೆಲವು ಆದೇಶಗಳನ್ನು ಹೊರಡಿಸಿದೆ.ಹೈಕೋರ್ಟ್‌, ಜಿಲ್ಲಾ ನ್ಯಾಯಾಲಯ ಗಳು, ಸಿವಿಲ್‌ ನ್ಯಾಯಾಲಯಗಳ, ಕೌಟುಂಬಿಕ ಕೋರ್ಟ್‌, ಕಾರ್ಮಿಕ ನ್ಯಾಯಾಲಯಗಳು, ಕೈಗಾರಿಕೆ ನ್ಯಾಯ ಮಂಡಳಿ ಸೇರಿದಂತೆ ರಾಜ್ಯದ ಎಲ್ಲಾ ನ್ಯಾಯಾಲಯಗಳು ನೀಡಿರುವ ಮಧ್ಯಾಂತರ ಆದೇಶಗಳನ್ನು ಜೂ.5ರವರೆಗೆ ವಿಸ್ತರಣೆ ಮಾಡಲಾಗಿದೆ.

ಮುಂದಿನ ಆದೇಶದವರೆಗೆ ಎಂದು ನೀಡಿದ ಮಧ್ಯಾಂತರ ಆದೇಶಗಳು ಮುಂದುವರಿಯಲಿವೆ. ಅಂತಹ ಪ್ರಕರಣಗಳಲ್ಲಿ ಯಾವುದೇ ತೊಂದರೆ ಇಲ್ಲ ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next