Advertisement

ಫಾಸ್ಟ್‌ಟ್ಯಾಗ್‌ ಅಳವಡಿಕೆ ಗಡುವು ಡಿ.15ಕ್ಕೆ ವಿಸ್ತರಣೆ

09:49 AM Nov 30, 2019 | Team Udayavani |

ಹೊಸದಿಲ್ಲಿ: ದೇಶದಲ್ಲಿ ಜಾರಿಯಾಗಲಿರುವ ಆನ್ ಲೈನ್ ಟೋಲ್ ಪಾವತಿ ವ್ಯವಸ್ಥೆ ಫಾಸ್ಟ್‌ಟ್ಯಾಗ್‌ ಯೋಜನೆಯನ್ನು ಡಿಸೆಂಬರ್ 15ಕ್ಕೆ ಕೇಂದ್ರ ಸರಕಾರ ಮುಂದೂಡಿದೆ. ಈ ಹಿಂದೆ ಡಿಸೆಂಬರ್ 1ರಂದು ಕಡ್ಡಾಯ ಎಂದು ತೀರ್ಮಾನಿಸಲಾಗಿತ್ತು.

Advertisement

ಆದರೆ ಬೇಡಿಕೆಯಷ್ಟು ಫಾಸ್ಟ್‌ಟ್ಯಾಗ್‌ ಗಳು ವಿತರಣೆಯಾಗದೇ ಇದ್ದ ಕಾರಣ ಮತ್ತಷ್ಟು ಸಮಯವನ್ನು ನೀಡಲಾಗಿದೆ. ಕೆಲವು ಟೋಲ್ ಗಳಲ್ಲಿ ಸಾಕಷ್ಟು ಫಾಸ್ಟ್‌ಟ್ಯಾಗ್‌ ಗಳು ಇರದೇ ಇದ್ದ ಕಾರಣ ಜನರಿಗೆ ಕೊಂಡುಕೊಳ್ಳಲಾಗುತ್ತಿಲ್ಲ. ಈ ಕಾರಣವನ್ನು ಮನಗಂಡಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತನ್ನ ನಿರ್ಧಾರವನ್ನು ಮುಂದೂಡಿದೆ.

ಈಗಾಗಲೇ ಒಟ್ಟು 70 ಲಕ್ಷ ಫಾಸ್ಟ್‌ಟ್ಯಾಗ್‌ ಗಳನ್ನು ವಿತರಿಸಲಾಗಿದೆ. ನವೆಂಬರ್ 26ರಂದು ದಾಖಲೆಯ 1,35,583 ಫಾಸ್ಟ್‌ಟ್ಯಾಗ್‌ ಗಳು ವಿತರಣೆಯಾಗಿದ್ದವು. 28ರಂದು 1.03 ಲಕ್ಷ ಫಾಸ್ಟ್‌ಟ್ಯಾಗ್‌ ಗಳು ವಿತರಣೆಯಾಗಿದ್ದವು.

ಸಾರ್ವಜನಿಕರು ಈ ಕುರಿತಂತೆ ಯಾವುದೇ ಗೊಂದಲಗಳು ಇದ್ದರೆ ಉಚಿತ ದೂರವಾಣಿ ಸಂಖ್ಯೆ 1033ಕ್ಕೆ ಸಂಪರ್ಕಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next