Advertisement

Kambala ದೇಶೀಯ ಮಟ್ಟಕ್ಕೆ ವಿಸ್ತರಿಸಲಿ: ಆರ್‌. ಅಶೋಕ್‌

01:05 AM Jan 07, 2024 | Team Udayavani |

ಕಾರ್ಕಳ: ತುಳುನಾಡಿನ ಕ್ರೀಡೆ ಕಂಬಳ ಸಾಹಸ ಮತ್ತು ರೋಮಾಂಚನ ಕ್ರೀಡೆ. ಕೋಣ, ಓಡಿಸುವವರ ಮೈಕಟ್ಟು ಅದ್ಭುತ. ಕಂಬಳ ರಾಜಧಾನಿಗೂ ಬಂದಿದೆ. ಕಂಬಳ ದೇಶೀಯ ಮಟ್ಟಕ್ಕೆ ವಿಸ್ತರಿಸಲಿ ಎಂದು ವಿಪಕ್ಷ ನಾಯಕ ಆರ್‌. ಅಶೋಕ್‌ ಹೇಳಿದರು.

Advertisement

ಮಿಯ್ಯಾರು ಕಂಬಳ ಸಮಿತಿ ಮತ್ತು ನವೋದಯ ಗ್ರಾಮ ವಿಕಾಸ ಚಾರಿಟೆಬಲ್‌ ಟ್ರಸ್ಟ್ ಮಂಗಳೂರು ಇವರ ಸಹಯೋಗದಲ್ಲಿ 20ನೇ ವರ್ಷದ ಲವ-ಕುಶ ಜೋಡುಕರೆ ಕಂಬಳ ಮಹೋತ್ಸವದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಶಾಸಕ ಅಶ್ವತ್ಥನಾರಾಯಣ ಮಾತನಾಡಿ ಸ್ವಯಂ ಪ್ರೇರಿತರಾಗಿ ಭಾಗವಹಿಸುವುದೆ ಕಂಬಳ ಕ್ರೀಡೆಯ ವಿಶೇ
ಷತೆ. ಒಲಿಂಪಿಕ್‌ ದಾಖಲೆ ಮುರಿಯುವಷ್ಟು ಪ್ರತಿಭೆಗಳು ಕಂಬಳದಲ್ಲಿ ಕೋಣ ಓಡಿಸುತ್ತಾರೆ ಎಂದರು.

ಶಾಸಕ ವಿ. ಸುನಿಲ್‌ ಕುಮಾರ್‌ಅಧ್ಯಕ್ಷತೆ ವಹಿಸಿ ಮಾತನಾಡಿ ಸರಕಾರ ಕಂಬಳಕ್ಕೆ ಅನುದಾನ ಮುಂದುವರಿಸಬೇಕು, ಹೆಚ್ಚು ಅನುದಾನ ಒದಗಿಸಬೇಕು ಎಂದರು.

ವಿಧಾನ ಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ, ಶಾಸಕ ಭೈರತಿ ಬಸವರಾಜ್‌, ಶಾಸಕ ಮನಿರಾಜು, ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ಮಾಜಿ ಶಾಸಕ ಕುಮಾರ ಬಂಗಾರಪ್ಪ, ಟಿ.ವಿ. ನಿರೂಪಕಿ ವೀಣಾ ಪೂಜಾರಿ, ಕಂಬಳ ಕಾರ್ಯಾಧ್ಯಕ್ಷ ಜೀವನ್‌ ದಾಸ್‌ ಅಡ್ಯಂತಾಯ, ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಡಾ| ಬೆಳಪು ದೇವಿಪ್ರಸಾದ್‌ ಶೆಟ್ಟಿ, ಉದಯ್‌ ಶೆಟ್ಟಿ ಮುನಿಯಾಲು, ಮಟ್ಟಾರ್‌ ರತ್ನಾಕರ ಹೆಗ್ಡೆ ಮುಂತಾದವರು ಉಪಸ್ಥಿತರಿದ್ದರು.

Advertisement

ಸಮಿತಿ ಗೌರವ ಸಲಹೆಗಾರ ಡಾ| ಎಂ.ಎನ್‌ ರಾಜೇಂದ್ರಕುಮಾರ್‌, ಕಂಬಳ ಸಾಧಕ ಸುಂದರ ಹೆಗ್ಡೆ, ಕೆರ್ವಾಶೆ ನಾರಾಯಣ ಬಂಗೇರ, ರಾಷ್ಟ್ರಮಟ್ಟದ ಶಾಲಾ ಕ್ರೀಡಾಪಟು ಹಿತೇಶ್‌ ಇವರನ್ನು ಸಮ್ಮಾನಿಸಲಾಯಿತು.
ಸ್ವಾಗತ ರವೀಂದ್ರಕುಮಾರ್‌, ಸತೀಶ್‌ ಹೊಸ್ಮಾರ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next