Advertisement

Cinema: ತಂದೆಯ ಪ್ರೀತಿಯ ಉತ್ಕರ್ಷ- ಅನಿಮಲ್‌

03:04 PM Jan 06, 2024 | Team Udayavani |

ಹಿಂಸೆಯ ವೈಭವೀಕರಣ, ಪ್ರೀತಿ, ಕುಟುಂಬಗಳ ನಡುವಿನ ಸಂಬಂಧ, ಉತ್ತಮ ಸಂಗೀತ ಮತ್ತು ಇವುಗಳನ್ನು ಮೀರಿ ತಂದೆಯ ಮೇಲಿನ ಪ್ರೀತಿಯನ್ನು ಕಟ್ಟಿಕೊಡುವ ಸಿನೆಮಾ “ಅನಿಮಲ್‌’.

Advertisement

ಹಿಂದಿ, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ತೆರೆಕಂಡ ಈ ಸಿನೆಮಾದಲ್ಲಿ ಇಂದಿನ ಯುವಜನಾಂಗಕ್ಕೆ ಬೇಕಾದ ಎಲ್ಲ ರೀತಿಯ ಮಸಾಲೆ ಅಂಶಗಳನ್ನು ಒಳಗೊಂಡಿದೆ ಎನ್ನಬಹುದು.

ಚಾಕ್ಲೇಟ್‌ ಬಾಯ್‌ ಎಂದು ಹೆಸರುವಾಸಿಯಾದ ರಣಬೀರ್‌ ಕಪೂರ್‌ ಅವರು ಅನಿಮಲ್‌ ಚಿತ್ರದಲ್ಲಿ ಆ್ಯಕ್ಷನ್‌ ಹೀರೊ ಆಗಿ ಹೊರಹೊಮ್ಮಿರುವುದು ಅವರ ನಟನಗೆ ಹೊಸ ಗರಿ ಮೂಡುವಂತೆ ಮಾಡಿದೆ. ಈ ಚಿತ್ರದ ಮತ್ತೂಂದು ವಿಶಿಷ್ಟéವೆಂದರೆ ಬಹುತೇಕ ಎಲ್ಲ ಚಿತ್ರಗಳಲ್ಲಿ ತಾಯಿ ಬಗೆಗಿನ ಭಾವನೆಗಳಿಗೆ ಪ್ರಾಮುಖ್ಯತೆ ನೀಡಿರುವುದನ್ನು ಕಂಡಿರುತ್ತೇವೆ. ಆದರೆ ಅನಿಮಲ್‌ ಚಿತ್ರವು ತಂದೆ ಮಗನ ನಡುವಿನ ಪ್ರೀತಿಯ ಪ್ರತಿರೂಪದಂತೆ ಚಿತ್ರಿತವಾಗಿರುವುದರಿಂದ ಪ್ರೇಕ್ಷಕರಿಗೆ ಹೊಸ ದೃಶ್ಯ ಕಾವ್ಯವನ್ನು ಕಟ್ಟಿಕೊಡುತ್ತದೆ.

ತಂದೆಯ ಪಾತ್ರದಲ್ಲಿ ಹಿರಿಯ ನಟ ಅನಿಲ್‌ ಕಪೂರ್‌ ಅವರ ಅಭಿನಯ ತುಂಬಾ ಮನೋಜ್ಞವಾಗಿದ್ದು, ಅಪ್ಪ ಮಗನ ದೃಶ್ಯಗಳು ನೋಡಿದ ಎಲ್ಲ ಪ್ರೇಕ್ಷಕರಿಗೆ ಅವರ ತಂದೆಯ ನೆನಪಾಗುವಂತೆ ಮಡುವುದು ಖಚಿತ.

ನಿದೇರ್ಶಕ ಸಂದೀಪ್‌ ರೆಡ್ಡಿ ವಂಗಾ ಸಿನೆಮಾದಲ್ಲಿ ಸಾಹಸ ದೃಶ್ಯಗಳಿಗೆ ಹೆಚ್ಚು ಒತ್ತು ನೀಡಿದ್ದು, ಹೊಸ ರೀತಿಯ ಸಾಹಸ ದೃಶ್ಯಗಳನ್ನು ತೆರೆಯ ಮೇಲೆ ಸೃಷ್ಟಿಸಿದ್ದಾರೆ. ಆಂಧ್ರಪ್ರದೇಶ ಮೂಲದ ನಿದೇರ್ಶಕರಾಗಿರುವ ಕಾರಣ ತೆಲಗು ಚಿತ್ರಗಳ ಪ್ರಭಾವವನ್ನು ಅನಿಮಲ್‌ ಚಿತ್ರದಲ್ಲೂ ಗಮನಿಸಬಹುದಾಗಿದೆ. ಚಿತ್ರದ ನಾಯಕಿಯರಾದ ರಶ್ಮಿಕಾ ಮಂದಣ್ಣ ಮತ್ತು ತೃಪ್ತಿ ದಿಮರಿ ಅವರು ಉತ್ತಮ ನಟನೆಯಿಂದ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಸಫ‌ಲರಾಗಿದ್ದಾರೆ.

Advertisement

ಚಿತ್ರದ ಸಂಗೀತಕ್ಕೆ ಜಗತ್ತಿನಾದ್ಯಂತ ಮೆಚ್ಚುಗೆ ವ್ಯಕ್ತವಾಗಿದ್ದು, ರಣಬೀರ್‌ಕರ್ಪೂರ್‌ ಅವರ ಪಾತ್ರವನ್ನು ಪರಿಚಯಿಸುವ ಸೀನ್‌ನಲ್ಲಿ ಬಳಸಿರುವ ರೋಜಾ ಚಿತ್ರದ ಹಿನ್ನೆಲೆ ಸಂಗೀತ ಈಗಲೂ ಸುಮಧುರವಾಗಿದೆ. ಇದರಲ್ಲಿ ಬರುವ “ಪಾಪಾ ಮೇರಿಜಾನ್‌’ ಹಾಡು ಕೇಳಿದ ಪ್ರತಿಯೊಬ್ಬರಿಗೂ ತಮ್ಮ ತಂದೆಯ ಜತೆ ಕಳೆದ ಮಧುರ ಕ್ಷಣಗಳು ನೆನಪಾಗುವುದು ಖಂಡಿತ.

ಅನಿಮಲ್‌ ಹೆಸರಿಗೆ ತಕ್ಕಂತೆ ಚಿತ್ರದ ಖಳನಟ “ಬಾಬಿ ಡಿಯೋಲ್‌’ ತಮ್ಮ ನಟನೆಯಲ್ಲಿನ ಕ್ರೂರತೆಯನ್ನು ಮಾಡಲು ಪ್ರಾಣಿಯೆ ಅವರ ಮೈಯಲ್ಲಿ ಪರಕಾಯ ಪ್ರವೇಶ ಮಾಡಿದಂತೆ ನಟನೆ ಮಾಡಿದ್ದಾರೆ. ಮೂರುವರೆ ಗಂಟೆಯ ಅನಿಮಲ್‌ ಸಿನೆಮಾದಲ್ಲಿ ಕೊನೆಯ 15 ನಿಮಿಷ ಮಾತ್ರ ಕಾಣುವ ಖಳನಟ ಬಾಬಿ ಡಿಯೋಲ್‌ ಸಂಪೂರ್ಣ ಚಿತ್ರವನ್ನೇ ವ್ಯಾಪಿಸುವಂತಹ ನಟನೆಯನ್ನು ಮಾಡಿದ್ದಾರೆ.

ಕಳೆದ ಕೆಲವು ದಶಕಗಳಿಂದ ಆರಕ್ಕೆ ಏರದೆ ಮೂರಕ್ಕೂ ಇಳಿಯದೆ ನಟನೆ ಮಾಡುತ್ತಿದ್ದ ಬಾಬಿ ಡಿಯೋಲ್‌ಗೆ ಈ ಚಿತ್ರದ ಮೂಲಕ ಮತ್ತೂಂದು ಹೊಸ ಜೀವನ ಸಿಕ್ಕಿಂತಾಗಿದೆ. ಆದರೆ ಇಂದಿನ ಯುವಜನಾಂಗಕ್ಕೆ ಬೇಕಾದ ಎಲ್ಲ ಅಂಶಗಳು ಇದರಲ್ಲಿದ್ದು ಮೂರುವರೆ ಗಂಟೆ ಪ್ರೇಕ್ಷಕರಿಗೆ ಮೋಸವಿಲ್ಲದಂತೆ ಮನರಂಜನೆ ನೀಡುವ ಚಿತ್ರವಾಗಿದೆ.

-ರಾಸುಮ ಭಟ್‌

ಕುವೆಂಪು ವಿವಿ, ಶಿವಮೊಗ್ಗ

Advertisement

Udayavani is now on Telegram. Click here to join our channel and stay updated with the latest news.

Next