ಮೆಲ್ಬರ್ನ್: ವಿಶ್ವದ ನಂ.1 ಟೆನಿಸಿಗ ನೊವಾಕ್ ಜೊಕೋವಿಕ್ ಅವರ “ಕೇಸ್’ ಫೆಡರಲ್ ಕೋರ್ಟ್‌ನಲ್ಲಿ ಇತ್ಯರ್ಥಗೊಂಡಿದೆ. ಅವರಿಗೆ ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್‌ಸ್ಲಾಮ್‌ನಲ್ಲಿ ಆಡಲು ಅನುಮತಿ ನೀಡಿದೆ. ಇದರಿಂದ ಆಸ್ಟ್ರೇಲಿಯ ಸರಕಾರಕ್ಕೆ ತೀವ್ರ ಮುಖಭಂಗವಾಗಿದೆ.
ಕೊರೊನಾ ವ್ಯಾಕ್ಸಿನ್ ನಿಯಮಾವಳಿಗೆ 6 ತಿಂಗಳ ತಾತ್ಕಾಲಿಕ ವಿರಾಮ ನೀಡಬಹುದು ಎಂದು ಕೋರ್ಟ್ ತೀರ್ಪು ನೀಡಿದೆ. ಹಾಗೆಯೇ ಅವರನ್ನು ಕೂಡಲೇ ಹೊಟೇಲ್‌ನಿಂದ ಬಿಡುಗಡೆಗೊಳಿಸುವಂತೆ ಸೂಚಿಸಿದೆ.
ಇದನ್ನೂ ಓದಿ:ಮೇಕೆದಾಟು ನ್ಯಾಯಮಂಡಳಿ ತೀರ್ಪು: ಸುಪ್ರೀಂನಲ್ಲಿ ನಾಳೆ ವಿಚಾರಣೆ
ಹೀಗಾಗಿ ಜೊಕೋವಿಕ್ ಅವರ ದಾಖಲೆಯ 21ನೇ ಗ್ರ್ಯಾನ್‌ಸ್ಲಾಮ್ ಗೆಲುವಿನ ಕನಸು ಪುನಃ ಚಿಗುರಿದೆ.
ಬುಧವಾರ ಮೆಲ್ಬರ್ನ್ ಗೆ ಬಂದ ಕೂಡಲೇ ಜೊಕೋವಿಕ್ ವೀಸಾವನ್ನು ಆಸ್ಟ್ರೇಲಿಯ ಸರಕಾರ ರದ್ದುಗೊಳಿಸಿತ್ತು.
ಕೋವಿಡ್ ಲಸಿಕೆಗೆ ವಿನಾಯಿತಿ ನೀಡಿರುವ ಸೂಕ್ತ ದಾಖಲಾತಿಗಳನ್ನು ಜೊಕೋ ಒದಗಿಸಿರಲಿಲ್ಲ. ಇದನ್ನು ವಿರೋಧಿಸಿದ ಅವರು ನ್ಯಾಯಾಲಯದ ಮೊರೆ ಹೋಗಿದ್ದರು.