Advertisement

ಮಾಲಕರ ಮೇಲೆ ಸ್ಫೋಟಕ ಕಾಯ್ದೆ ಪ್ರಕರಣ ದಾಖಲು

12:08 PM Mar 22, 2017 | |

ವಿಟ್ಲ: ಕಂಬಳಬೆಟ್ಟು ಸಮೀಪದ ನೂಜಿಯ ಗರ್ನಾಲ್‌ ಸಾಹೇಬರೆಂದೇ ಚಿರಪರಿಚಿತರಾಗಿದ್ದ ದಿ| ಇಬ್ರಾಹಿಂ ಸಾಹೇಬ್‌ ಅವರ ಮನೆಯಂಗಳದಲ್ಲಿ ಸೋಮವಾರ ಸಂಭವಿಸಿದ ಸಿಡಿಮದ್ದು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಲಕ ಅಬ್ದುಲ್‌ಶುಕೂರ್‌ ಮೇಲೆ ಸ್ಫೋಟಕ ಕಾಯ್ದೆ ಐಪಿ ಸೆಕ್ಷನ್‌ 286, 304 ಅಂದರೆ ಉದ್ದೇಶಪೂರ್ವಕವಲ್ಲದ ಮಾನವ ಹತ್ಯೆ ಪ್ರಕರಣ ದಾಖಲಿಸಲಾಗಿದೆ. ದಿ| ಇಬ್ರಾಹಿಂ ಸಾಹೇಬ್‌ ಅವರ ಪುತ್ರ ಅಬ್ದುಲ್‌ಶುಕೂರ್‌ ಅವರಿಗೆ ಈ ಸಿಡಿಮದ್ದು ತಯಾರಿಕೆ ಘಟಕದ ಅನುಮತಿಯಿದ್ದು, ಅವರು ವಿದೇಶದಲ್ಲಿದ್ದಾರೆ. ಅವರು ಊರಲ್ಲಿಲ್ಲದೇ ಇದ್ದರೂ, ಈ ಘಟನೆಗೆ ಅವರ ನಿರ್ಲಕ್ಷತನವೇ ಕಾರಣವೆಂದು ಪರಿಗಣಿಸಲಾಗಿದ್ದು, ಪ್ರಕರಣ ದಾಖಲಿಸಲಾಗಿದೆ.

Advertisement

ಘಟನೆ ಸಂಭವಿಸಿದ ಪ್ರದೇಶದ ಸುತ್ತಮುತ್ತ ಸೋಮವಾರ ತಡರಾತ್ರಿ ಮತ್ತು ಮಂಗಳವಾರ ಬೆಳಗ್ಗೆ ಒಂದು ಕೈ, ಮೂರು ಬೆರಳು, ಒಂದು ಪಾದ ಮತ್ತು ಕಾಲಿನ ಗಂಟು ಭಾಗಗಳು ಲಭಿಸಿದ್ದು ಅವು ಸಾವಿಗೀಡಾದ ಸುಂದರ ಪೂಜಾರಿ ಕಾರ್ಯಾಡಿ ಅವರದ್ದು ಎಂದು ತಿಳಿದುಬಂದಿದೆ. ಸುಂದರ ಪೂಜಾರಿ(38) ಮತ್ತು ಅಬ್ದುಲ್‌ಅಜೀಂ(24) ಅವರ ಶವಪರೀಕ್ಷೆ ನಡೆಸಿ, ಸಂಜೆ ಅವರ ಕುಟುಂಬಕ್ಕೆ ಬಿಟ್ಟುಕೊಡಲಾಗಿದೆ. ವಿಧಿ ವಿಜ್ಞಾನ ಪ್ರಯೋಗಾಲಯದ  ಡಾ. ಗೌತಮ್‌, ಡಾ. ಬಿ.ಸಿ.ರವೀಂದ್ರ, ಅರುಣ್‌, ವೀಣಾ, ಕಸ್ತೂರಿ ವಡೆಯರ್‌, ಭುವನೇಶ್ವರಿ, ಶ್ರೀಕಾಂತ್‌ ಮೊದಲಾದವರು ಪರಿಶೀಲನೆ ನಡೆಸಿದರು.  ನ್ಪೋಟ ಸಂಭವಿಸಿದ ಜಾಗದ ಸಮೀಪದಲ್ಲಿನ ಕೊಟ್ಟಿಗೆಯಲ್ಲಿ ರಾಸಾಯನಿಕ ಪದಾರ್ಥಗಳನ್ನು ಹಾಗೂ ತಯಾರಿಸಿದ್ದ ಗರ್ನಾಲ್‌ಗ‌ಳನ್ನು ಮುನ್ನೆಚ್ಚರಿಕೆದೃಷ್ಟಿಯಿಂದ ನೀರಿಗೆ ಹಾಕಿ, ಪೊಲೀಸರು ನಾಶಪಡಿಸಿದ್ದಾರೆ.

ಆಧಾರಸ್ತಂಭವಾಗಿದ್ದರು: ಸುಂದರ ಪೂಜಾರಿ ಅವರಿಗೆ ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿತ್ತು.  ಅವರದು ಚಿಕ್ಕಮನೆ. ಅವರ ತಾಯಿಗೆ ಅನಾ ರೋಗ್ಯಕಾಡಿ, ಸಾಲ ಮಾಡಿ, ಚಿಕಿತ್ಸೆ ಮಾಡಿದ್ದರು. ಆದರೂ ಅವರನ್ನು ಉಳಿಸ ಸಲಾಗಿರಲಿಲ್ಲ. ಸುಂದರ ಪೂಜಾರಿ ಅವರ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲ. ಇದೀಗ ಅವರ ಕುಟುಂಬದ ಆಧಾರಸ್ತಂಭವಿಲ್ಲದಂತಾಗಿದೆ. 18 ವರ್ಷ ಗಳಿಂದ ಅವರು ಈ ಸಿಡಿಮದ್ದು ತಯಾರಿಕೆ ಘಟಕದಲ್ಲಿ ದುಡಿಯುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next