ಶಿವಮೊಗ್ಗ: ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಭಾರೀ ಸ್ಫೋಟದ ಶಬ್ದ ಕೇಳಿ ಬಂದಿದ್ದು ಜನ ಭಯಬಿದ್ದು ರಸ್ತೆಗೆ ಇಳಿದ ಘಟನೆ ಗುರುವಾರ ರಾತ್ರಿ 10;20ರಿಂದ 10;40ರ ಸಮಯದಲ್ಲಿ ನಡೆದಿದೆ.
ಶಿವಮೊಗ್ಗ ನಗರ, ಭದ್ರಾವತಿ, ಹೊಳೆಹೊನ್ನೂರು, ಹೊಸನಗರ, ತೀರ್ಥಹಳ್ಳಿ, ಸಾಗರ, ಸೊರಬ ಪಕ್ಕದ ತರೀಕೆರೆ ತಾಲ್ಲೂಕಿನಲ್ಲೂ ಶಬ್ದ ಹಾಗೂ ಕಂಪನದ ಅನುಭವವಾಗಿದೆ.
ಹಲವರು ಆಕಾಶದಲ್ಲಿ ಮಿಂಚಿನಂತ ಪ್ರಖರ ಬೆಳಕು ಕಂಡಿರುವುದು ನಿಜ. ಭಾರೀ ಶಬ್ದಕ್ಕೆ ಕಿಟಿಕಿ ಬಾಗಿಲುಗಳು ಅಲುಗಾಡಿದ್ದು ನಿಗೂಢ ಶಬ್ದದ ಬಗ್ಗೆ ಹಲವು ಊಹಾಪೋಹಗಳು ಹರಿದಾಡಿವೆ. ಕೆಲವರಿಗೆ ಕಂಪನದ ಅನುಭವ ಕೂಡ ಆಗಿದೆ. ಮೊದಲು ಕಡಿಮೆ ಪ್ರಮಾಣದ ಶಬ್ದ ಕೇಳಿದ್ದು ನಂತರ ದೊಡ್ಡ ಶಬ್ದ ಮೂಡಿಬಂತು.
ಇದನ್ನೂ ಓದಿ:ಸಿಸಿಬಿ ಪೊಲೀಸರ ಕಾರ್ಯಾಚರಣೆ : 38 ಕೆ.ಜಿ ಗಾಂಜಾ ಸಹಿತ ನಾಲ್ವರು ಆರೋಪಿಗಳ ಬಂಧನ
ಕೆಲ ತಿಂಗಳ ಹಿಂದೆ ಬೆಂಗಳೂರಿನಲ್ಲಿ ಸೂಪರ್ ಸಾನಿಕ್ ವಿಮಾನದಿಂದ ಹೊರಬಂದ ಶಬ್ದವೂ ತಲ್ಲಣ ಉಂಟು ಮಾಡಿತ್ತು. ಖಗೋಳ ವಿಜ್ಞಾನಿಗಳು ಉಲ್ಕೆಗಳ ಸ್ಫೋಟವಾಗಿರಬಹುದು ಎಂದು ಅಂದಾಜಿಸಿದ್ದಾರೆ.