Advertisement

ಅಫ್ಘಾನಿಸ್ಥಾನದಲ್ಲಿ ಶಿಯಾಗಳನ್ನ ಗುರಿಯಾಗಿರಿಸಿಕೊಂಡು ಮುಂದುವರಿದ ದಾಳಿ

05:57 PM Oct 15, 2021 | Team Udayavani |

ಕಾಬೂಲ್‌: ಅಫ್ಘಾನಿಸ್ಥಾನದಲ್ಲಿ ತಾಲಿಬಾನ್ ಕಬಂದ ಬಾಹುಗಳನ್ನು ಚಾಚುತ್ತಿರುವ ವೇಳೆಯಲ್ಲಿ ಆಂತರಿಕ ಸಂಘರ್ಷ ವ್ಯಾಪಕವಾಗುತ್ತಿದೆ. ವಾರದ ಒಳಗೆ ಎರಡು ಮಸೀದಿಗಳನ್ನು ಸ್ಪೋಟಿಸಿರುವುದು ಹಿಂಸಾಚಾರದ ತೀವ್ರತೆ ಯನ್ನು ಸಾರಿ ಹೇಳುತ್ತಿದೆ.

Advertisement

ಸುನ್ನಿ ಬಹುಸಂಖ್ಯಾತ ರಾಷ್ಟದಲ್ಲಿ ಶಿಯಾ ಗಳನ್ನ ಗುರಿಯಾಗಿಸಿ ದಾಳಿ ನಡೆಸಲಾಗುತ್ತಿದ್ದು, ಕುಂಡುಜ್‌ನಲ್ಲಿ ವಾರದ ಹಿಂದೆ ಶಿಯಾ ಮಸೀದಿಯ ಮೇಲೆ ಇಸ್ಲಾಮಿಕ್ ಸ್ಟೇಟ್ ಉಗ್ರರು ನಡೆಸಿದ ದಾಳಿಯಲ್ಲಿ 50ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು.

ಮತ್ತೆ ಕಂದಹಾರ್ ಪ್ರಾಂತ್ಯದ ಶಿಯಾ ಪಂಥದ ಮುಸ್ಲಿಮರಿಗೆ ಸೇರಿದ ಮಸೀದಿಯಲ್ಲಿ ಶುಕ್ರವಾರ ಪ್ರಬಲ ಬಾಂಬ್‌ ಸ್ಫೋಟ ಸಂಭವಿಸಿದ್ದು, ಈ ದುರಂತದಲ್ಲಿ ಕನಿಷ್ಠ 30 ಮಂದಿ ಅಸುನೀಗಿದ್ದಾರೆ ಮತ್ತು ಹಲವಾರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.ಪ್ರಾರ್ಥನೆಗಾಗಿ ಆಗಮಿಸಿದ್ದ 53 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಗಳಿವೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಬಾಂಬ್ ಸ್ಫೋಟದ ಹೊಣೆಯನ್ನು ಇದುವರೆಗೆ ಯಾವುದೇ ಉಗ್ರ ಸಂಘಟನೆ ಹೊತ್ತುಕೊಂಡಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next