Advertisement

ತೆಹ್ರಾನ್ ವೈದ್ಯಕೀಯ ಕೇಂದ್ರದಲ್ಲಿ ಅನಿಲ ಸೋರಿಕೆ-ಸ್ಪೋಟ: 19 ಮಂದಿ ದುರ್ಮರಣ

04:53 PM Jul 01, 2020 | Mithun PG |

ತೆಹ್ರಾನ್: ಇರಾನಿನ ರಾಜಧಾನಿ ತೆಹ್ರಾನ್ ನ ಉತ್ತರದ ವೈದ್ಯಕೀಯ ಚಿಕಿತ್ಸಾಲಯವೊಂದರಲ್ಲಿ ಮಂಗಳವಾರ ಸಂಭವಿಸಿದ ಸ್ಫೋಟದಲ್ಲಿ 19 ಜನರು ಸಾವನ್ನಪ್ಪಿದ್ದಾರೆ ಮತ್ತು ಆರು ಮಂದಿ ಗಾಯಗೊಂಡಿದ್ದಾರೆ ಎಂದು ಅಲ್ಲಿನ ಮಾಧ್ಯಮ ವರದಿ ಮಾಡಿದೆ.

Advertisement

ಅನಿಲ ಸೋರಿಕೆಯೇ ಸ್ಫೋಟಕ್ಕೆ ಕಾರಣ ಎಂದು ತೆಹ್ರಾನ್ ಉಪ ಗವರ್ನರ್ ಹಮೀದ್ ರೆಜಾ ಗೌಡಾರ್ಜಿ ತಿಳಿಸಿದ್ದಾರೆ. ಈ ಮೊದಲು ಅವಘಡದಲ್ಲಿ 13 ಜನರು ಮೃತಪಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದರು. ಆದರೆ ತೆಹ್ರಾನ್ ಅಗ್ನಿಶಾಮಕ ಇಲಾಖೆಯ ವಕ್ತಾರ ಜಲಾಲ್ ಮಲೇಕಿ ಸಾವಿಗೀಡಾದವರ ಸಂಖ್ಯೆ 19ಕ್ಕೆ ಏರಿಕೆಯಾಗಿದ್ದು, ಬೆಂಕಿಯನ್ನು ನಂದಿಸಲಾಗಿದೆ ಎಂದು ತಿಳಿಸಿದ್ದಾರೆ.

Iran: Reports of another explosion in northern Tehran today at a clinic near Tajrish square. Details still unclear.

Just a few days ago another explosion happened near military sites in eastern Tehran. #Iran pic.twitter.com/xeZaRvcVaK

— Negar Mortazavi نگار مرتضوی (@NegarMortazavi) June 30, 2020

Advertisement

ಈ ಕುರಿತು ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸ್ಪೋಟದ ನಂತರ ಅಗ್ನಿಶಾಮಕ ಸಿಬ್ಬಂದಿ ಕಟ್ಟಡ ಹತ್ತಿ ಕೆಲವರನ್ನು ರಕ್ಷಿಸಿದ್ದಾರೆ. ವೈದ್ಯಕೀಯ ಕೇಂದ್ರದಲ್ಲಿ ಆಕ್ಷಿಜನ್ ತುಂಬಿದ ಟ್ಯಾಂಕ್ ಗಳಿದ್ದವು.  ಮಾತ್ರವಲ್ಲದೆ 25ಕ್ಕೂ ಹೆಚ್ಚು ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದರು. ಈ ವೇಳೆ ಹಲವು ಬಾರಿ ಸ್ಪೋಟ ಸಂಭವಿಸಿದ್ದು, ಕಟ್ಟಡ ಪೂರ್ತಿ ಬೆಂಕಿ ವ್ಯಾಪಿಸಿದೆ.

ಕಳೆದ ವಾರ, ತೆಹ್ರಾನ್ ಬಳಿಯ ಸೂಕ್ಷ್ಮ ಮಿಲಿಟರಿ ಸ್ಥಳವೊಂದರ ಬಳಿಯ ಅನಿಲ ಸಂಗ್ರಹಣಾ ಕೇಂದ್ರದಲ್ಲಿ ಟ್ಯಾಂಕ್ ಸೋರಿಕೆಯಾಗಿ ಸ್ಫೋಟ ಸಂಭವಿಸಿತ್ತು. ಆದರೆ ಯಾವುದೇ ಸಾವು ನೋವು ಸಂಭವಿಸಿರಲಿಲ್ಲ ಎಂದು ರಕ್ಷಣಾ ಸಚಿವಾಲಯ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next