Advertisement

ಮಾಹಿತಿ ಹಕ್ಕು ಕಾಯ್ದೆ ದುರ್ಬಳಕೆ: ಕಳವಳ

10:25 AM Nov 05, 2017 | Team Udayavani |

ಕಲಬುರಗಿ: ಮಾಹಿತಿ ಹಕ್ಕು ಕಾಯಿದೆ ಸಾರ್ವಜನಿಕರ ಪಾಲಿಕೆ ತುಂಬಾ ಅತ್ಯುತ್ತಮ ಆಯಾಮ. ಅದರಿಂದ ಪ್ರಜಾಪ್ರಭುತ್ವ ಆಡಳಿತ ವರ್ಗದಲ್ಲಿ ನಡೆಯುವುದನ್ನು ತಿಳಿಯುವ ಹಕ್ಕಾಗಿದೆ. ಆದರೆ, ಕೆಲವು ಇದನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದು ಸಮಾಜಕ್ಕೆ ಮಾರಕವಾಗಬಹುದು ಎಂದು ಜಿಲ್ಲಾ ಪ್ರಧಾನ ಮತ್ತು ಸೆಷೆನ್ಸ್‌ ನ್ಯಾಯಾ ಧೀಶ ಬಿ.ವಿ. ಪಾಟೀಲ್‌ ಕಳವಳ ವ್ಯಕ್ತಪಡಿಸಿದರು.

Advertisement

ನಗರದ ಸಿದ್ದಾರ್ಥ ಕಾನೂನು ಮಹಾವಿದ್ಯಾಲಯದಲ್ಲಿ ಶನಿವಾರ ನಾಗರಿಕ ಹಕ್ಕು ರಕ್ಷಣಾ ಸಂಘಟನೆ ಹಾಗೂ ಜಿಲ್ಲಾ
ಕಾನೂನು ಸೇವೆಗಳ ಪ್ರಾಧಿಕಾರ ಜಂಟಿಯಾಗಿ ಹಮ್ಮಿಕೊಂಡಿದ್ದ ಮಾಹಿತಿ ಹಕ್ಕು ಕಾಯ್ದೆ ಕುರಿತ ಎರಡು ದಿನಗಳ ವಿಚಾರ ಸಂಕಿರಣ ಹಾಗೂ ಹಿರಿಯ ಪತ್ರಕರ್ತ ಡಾ| ಶ್ರೀನಿವಾಸ ಸಿರನೂರಕರ ಅವರು ಮಾಹಿತಿ ಹಕ್ಕು ಕಾಯ್ದೆ ಕುರಿತು ಬರೆದ ಲೇಖನಗಳ ವಸ್ತು ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

ಇಂತಹ ಒಳ್ಳೆಯ ಕಾಯ್ದೆ ಸದ್ಬಳಕೆ ಮಾಡಿಕೊಳ್ಳದಿದ್ದಲ್ಲಿ ದೇಶದ ಐಕ್ಯತೆಗೆ ಭಂಗ ಬರುತ್ತದೆ. ಮಾಹಿತಿ ಹಕ್ಕು ಕಾಯ್ದೆಯನ್ನು ಸದುದ್ದೇಶ ಪ್ರಜಾಪ್ರಭುತ್ವದ ಉತ್ತಮ ಆಡಳಿತ ವರ್ಗ ಹಾಗೂ ಸಮರ್ಪಕ ಮೂಲಭೂತ ಸೌಲಭ್ಯಕ್ಕಾಗಿ 2005ರಲ್ಲಿ ಕೇಂದ್ರ ಸರ್ಕಾರವು ಜಾರಿಗೆ ತಂದಿದೆ. ಈ ಕಾಯ್ದೆ ಸಾರ್ವಜನಿಕರಿಗೆ ಅತ್ಯಂತ ಅಗತ್ಯವಾಗಿದೆ. ಮಾಹಿತಿಯಿಂದ ಎಲ್ಲ ವಿವರ ಪಡೆಯಬಹುದಾಗಿದೆ. ಪಾರದರ್ಶಕ ಆಡಳಿತದೊಂದಿಗೆ ಭ್ರಷ್ಟಾಚಾರಕ್ಕೆ ನಿಯಂತ್ರಣ ಹೇರಲು ಈ ಕಾಯ್ದೆ ಹೆಚ್ಚು ಉಪಯುಕ್ತವಾಗಿದೆ ಎಂದು ಹೇಳಿದರು.

ಮಾಹಿತಿ ಹಕ್ಕು ಕಾಯ್ದೆ ಕುರಿತು ಹಿರಿಯ ಪತ್ರಕರ್ತ ಡಾ| ಶ್ರೀನಿವಾಸ್‌ ಸಿರನೂರಕರ ಅವರು ಬರೆದ ಲೇಖನಗಳಲ್ಲಿ
ಸಾಮಾಜಿಕ ಕಳಕಳಿ ಮೆಚ್ಚಿದ ಅವರು, ಅವರ ಲೇಖನಗಳಲ್ಲಿ ನಿಖರತೆ, ಸ್ಪಷ್ಟತೆ ಹಾಗೂ ವಾಸ್ತವಿಕತೆ ಮತ್ತು ಪ್ರಾಮಾಣಿಕತೆ ಇದೆ ಎಂದು ಹೇಳಿದರು. ಕಲಬುರ್ಗಿ ಹೈಕೋರ್ಟ್‌ನ ಅಡ್ವೋಕೇಟ್‌ ಜನರಲ್‌ ರಾಘವೇಂದ್ರ ನಾಡಗೌಡ ಮಾತನಾಡಿ, ಮಾಹಿತಿ ಹಕ್ಕಿನ ದುರುಪಯೋಗ ತಡೆಯುವ ನಿಟ್ಟಿನಲ್ಲಿ ಮುಂದಾಗಬೇಕು ಎಂದರು.

ಎಪಿಸಿಆರ್‌ ಸಂಘದ ಅಧ್ಯಕ್ಷ ಹಾಗೂ ನ್ಯಾಯವಾದಿ ಅಬ್ದುಲ್‌ ಖದೀರ್‌ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾನೂನು
ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್‌.ಆರ್‌. ಮಾಣಿಕ್ಯ, ಕರ್ನಾಟಕ ಪೀಪಲ್ಸ್‌ ಎಜುಕೇಶನ್‌ ಸೊಸೈಟಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ವಿಧಾನ ಪರಿಷತ್‌ ಮಾಜಿ ಸದಸ್ಯ ಡಾ. ಮಾರುತಿರಾವ್‌ ಡಿ. ಮಾಲೆ, ಸಂಘದ ರಾಜ್ಯ ಸಂಯೋಜಕ ಶೇಖ್‌ ಶಫಿ ಅಹ್ಮದ್‌ ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next