Advertisement
ಅರ್ಜುನ್ ಕಿಶೋರ್ 720 ಅಂಕಗಳಲ್ಲಿ 720 ಅಂಕ ಪಡೆದಿದ್ದಾರೆ. ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಗೂ ಇದೊಂದು ಹೆಮ್ಮೆಯ ಕ್ಷಣ ಎಂದರು.
Related Articles
Advertisement
ನಿಖರ ಗುರಿಇದ್ದಾಗ ಸಾಧನೆ
ಸಂಸ್ಥೆಯ ಉಪಾಧ್ಯಕ್ಷೆ ಡಾ| ಉಷಾ ಪ್ರಭಾ ಎನ್. ನಾಯಕ್ ಮಾತನಾಡಿ, ವಿದ್ಯಾರ್ಥಿಗಳು ನಿಖರ ಗುರಿ ಇಟ್ಟುಕೊಂಡು ಅಧ್ಯಯನ ನಡೆಸಿದರೆ ಮಾತ್ರ ಉತ್ತಮ ಸಾಧನೆ ಮಾಡಬಲ್ಲರು. ಎಕ್ಸ್‌ಪರ್ಟ್ ವಿದ್ಯಾರ್ಥಿಗಳು ಇದನ್ನು ಮಾಡಿ ತೋರಿಸಿದ್ದಾರೆ ಎಂದರು. ಐಟಿ ನಿರ್ದೇಶಕ ಅಂಕುಶ್ ಎನ್. ನಾಯಕ್, ವಳಚ್ಚಿಲ್ ಎಕ್ಸ್‌ಪರ್ಟ್ ಪಿಯು ಕಾಲೇಜಿನ ಪ್ರಿನ್ಸಿಪಾಲ್ ಎನ್.ಕೆ. ವಿಜಯನ್, ಶೈಕ್ಷಣಿಕ ಪ್ರಿನ್ಸಿಪಾಲ್ ಪ್ರೊ| ಸುಬ್ರಹ್ಮಣ್ಯ ಉಡುಪ, ಕೊಡಿಯಾಲ್ ಬೈಲ್ ಎಕ್ಸ್‌ಪರ್ಟ್ ಪಿಯು ಕಾಲೇಜಿನ ಪ್ರೊ| ರಾಮಚಂದ್ರ ಭಟ್, ಎಐಸಿ ವಿಭಾಗದ ಸಂಯೋಜಕ ಪ್ರೊ| ಶ್ಯಾಮ್ ಪ್ರಸಾದ್, ಕೋರ್ ಕಮಿಟಿ ಸಮಿತಿ ಸದಸ್ಯ ಪ್ರೊ| ವಿನಯ್‌ಕುಮಾರ್, ಕೋಚಿಂಗ್ ವಿಭಾಗದ ಕೋ ಆರ್ಡಿನೇಟರ್ ಗುರುದತ್, ಕರುಣಾಕರ ಬಳ್ಕೂರು ಉಪಸ್ಥಿತರಿದ್ದರು. ಸಿಇಟಿ, ಪಿಯುಸಿಯಲ್ಲೂ “ಎಕ್ಸ್‌ಪರ್ಟ್’ ಸಾಧನೆ
ರಾಜ್ಯದಲ್ಲಿ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಿದ ಸಿಇಟಿ ಪರೀಕ್ಷೆಯ 7 ವಿಭಾಗಗಳಲ್ಲಿ ಮಂಗಳೂರಿನ ಎಕ್ಸ್‌ಪರ್ಟ್ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳು ಬಿಎನ್‌ವೈಎಸ್ ಹಾಗೂ ಕೃಷಿಯಲ್ಲಿ ಪ್ರಥಮ ರ್‍ಯಾಂಕ್, ದ್ವಿತೀಯ ರ್‍ಯಾಂಕ್ ಮತ್ತು ಪಶುವೈದ್ಯಕೀಯ ಹಾಗೂ ನರ್ಸಿಂಗ್‌ನಲ್ಲಿ ತೃತೀಯ ರ್‍ಯಾಂಕ್ ಪಡೆದುಕೊಂಡಿದ್ದಾರೆ. ಇದೇ ರೀತಿ ದ್ವಿತೀಯ ಪಿಯುಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ಶೇ. 100 ಫಲಿತಾಂಶ ಪಡೆದಿದ್ದು, ಶೇ. 99.94ರಷ್ಟು ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. 590ಕ್ಕಿಂತ ಅಧಿಕ ಅಂಕಗಳನ್ನು 23 ಮಂದಿ, 580ಕ್ಕಿಂತ ಅಧಿಕ ಅಂಕ 193 ಮಂದಿ ಪಡೆದುಕೊಂಡಿದ್ದಾರೆ. ಹಲವು ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ 100 ಅಂಕಗಳನ್ನು ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ ಎಂದರು.