Advertisement

ಪ್ರಾಯೋಗಿಕ ವಿಮಾನ ಹಾರಾಟ ಸಿದ್ಧತೆ ಪರಿಶೀಲನೆ

10:49 AM Aug 26, 2018 | |

ಕಲಬುರಗಿ: ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‌ ಖರ್ಗೆ ಶನಿವಾರ ಶ್ರೀನಿವಾಸ ಸರಡಗಿ ಹತ್ತಿರ ನಿರ್ಮಾಣಗೊಂಡಿರುವ ಕಲಬುರಗಿ ವಿಮಾನ ನಿಲ್ದಾಣದ ಕಾಮಗಾರಿ ಹಾಗೂ ಪ್ರಾಯೋಗಿಕ ವಿಮಾನ ಹಾರಾಟದ ಸಿದ್ಧತೆಗಳನ್ನು ಪರಿಶೀಲಿಸಿದರು.

Advertisement

ಕಲಬುರಗಿ ನಗರಕ್ಕೆ ಪ್ರಥಮ ಬಾರಿಗೆ ವಿಮಾನಗಳು ಬಂದಿಳಿಯುತ್ತಿವೆ. ಇದನ್ನು ನೋಡಲು ಸಾರ್ವಜನಿಕರಲ್ಲಿ ಕುತೂಹಲವಿದ್ದು, ಪ್ರಾಯೋಗಿಕ ವಿಮಾನ ಹಾರಾಟ ವೀಕ್ಷಣೆಗೆ ಆಗಮಿಸುವ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು. ಸಾರ್ವಜನಿಕರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಮಾರ್ಗ ಗುರುತಿಸಬೇಕು. ಸಾರ್ವಜನಿಕರು ವಿಮಾನ ನಿಲ್ದಾಣಕ್ಕೆ ಆಗಮಿಸುವಾಗ ಯಾವುದೇ ತರಹದ ವಸ್ತುಗಳನ್ನು ಹಾಗೂ ಆಹಾರ ಪದಾರ್ಥಗಳನ್ನು ತರಬಾರದೆಂದು ಮನವಿ ಮಾಡಿದರು. 

ಹೈದ್ರಾಬಾದ್‌ನಿಂದ ರವಿವಾರ ಬೆಳಗ್ಗೆ 10:30 ರಿಂದ 11 ರೊಳಗಾಗಿ ಒಂದು ವಿಮಾನ ಹಾಗೂ ಬೆಳಗ್ಗೆ 11 ರಿಂದ 11:15 ರೊಳಗಾಗಿ ಇನ್ನೊಂದು ವಿಮಾನ ಹೀಗೆ ಎರಡು ವಿಮಾನಗಳು ಬಂದಿಳಿಯಲಿವೆ. ಈ ವಿಮಾನಗಳು ಮರಳಿ ಮಧ್ಯಾಹ್ನ 12 ಕ್ಕೆ ಹಾಗೂ 12:30 ಕ್ಕೆ ಟೇಕಾಫ್‌ ಆಗಲಿವೆ.
ವಿಮಾನಗಳ ಲ್ಯಾಂಡಿಂಗ್‌ ಹಾಗೂ ಟೇಕಾಫ್‌ ಸಮಯದಲ್ಲಿ ರನ್‌ವೇ ಮೇಲೆ ಯಾವುದೇ ಪ್ರಾಣಿ ಅಥವಾ ಪಕ್ಷಿಗಳು ಇರದಂತೆ ನೋಡಿಕೊಳ್ಳಬೇಕು. ಸಾಧ್ಯವಾದಲ್ಲಿ ಪೊಲೀಸರು ಏರ್‌ಗನ್‌ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ಸೂಚಿಸಿದರು.

ಪ್ರಾಯೋಗಿಕ ವಿಮಾನ ಹಾರಾಟ ಕಾರ್ಯಕ್ರಮಕ್ಕೆ ಕಲಬುರಗಿ ವಿಭಾಗದಿಂದ ಹಲವಾರು ನಾಯಕರು, ಗಣ್ಯರು, ಜನಪ್ರತಿನಿಧಿಗಳು ಆಗಮಿಸಲಿದ್ದು, ಅವರ ವಾಹನಗಳ ನಿಲುಗಡೆಗೆ ಹಾಗೂ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಕಲ್ಪಿಸಬೇಕು. ಕಾರ್ಯಕ್ರಮಕ್ಕೆ ಯಾವುದೇ ತರಹದ ಅಡೆತಡೆ ಆಗದಂತೆ ಎಚ್ಚರಿಕೆ ವಹಿಸಬೇಕೆಂದು ತಿಳಿಸಿದರು.

ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ, ಏಶಿಯನ್‌ ಪೆಸಿಫಿಕ್‌ ಫ್ಲೆ„ಟ್‌ ಟ್ರೇನಿಂಗ್‌ ಅಕಾಡೆಮಿಯ ಮಹಮ್ಮದ್‌ ಫೈಸಲ್‌, ಕ್ಯಾಪ್ಟನ್‌ ಶಾಮ, ಲೋಕೋಪಯೋಗಿ ಇಲಾಖೆಯ ಅಧಿಧೀಕ್ಷಕ ಇಂಜಿನಿಯರ್‌ ಪ್ರಕಾಶ ಶ್ರೀಹರಿ, ಕಾರ್ಯನಿರ್ವಾಹಕ ಇಂಜಿನಿಯರ್‌ ಅಮೀನ್‌ ಮುಕ್ತಾರ,
ಪೊಲೀಸ್‌ ಅಧಿಕಾರಿಗಳು ಹಾಗೂ ಇನ್ನಿತರ ಅಧಿಕಾರಿಗಳು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next