Advertisement

ಪ್ರಯೋಗ, ಅನುಭವ ವಿನಿಮಯದಿಂದ ಕೃಷಿಗೆ ಭವಿಷ್ಯ

07:34 AM Dec 01, 2017 | Team Udayavani |

ಮೂಡಬಿದಿರೆ: “ಕೃಷಿಯಲ್ಲಿ ಪ್ರಯೋಗಾತ್ಮಕ ಚಿಂತನೆಗಳನ್ನು ಅಳವಡಿಸಿಕೊಳ್ಳುವ ಜತೆಗೆ ಅನುಭವ ವಿನಿಮಯ ಮಾಡಿ ಕೊಂಡಾಗ ಮಾತ್ರ ಕೃಷಿ ರಂಗ ಬೆಳಗಲು ಸಾಧ್ಯ’ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ.ಹರ್ಷೇಂದ್ರ ಕುಮಾರ್‌ ಅಭಿಪ್ರಾಯಪಟ್ಟರು.

Advertisement

ಮೂಡಬಿದಿರೆ ವಿದ್ಯಾಗಿರಿಯಲ್ಲಿ 14ನೇ ವರ್ಷದ  “ಆಳ್ವಾಸ್‌ ನುಡಿಸಿರಿ’ ನಾಡುನುಡಿ ಸಂಸ್ಕೃತಿ ಸಮ್ಮೇಳನದಂಗವಾಗಿ, ಮುಂಡ್ರುದೆ ಗುತ್ತು ರಾಮಮೋಹನ ರೈ ಆವರಣದಲ್ಲಿ ಸಜ್ಜುಗೊಂಡ ಆಳ್ವಾಸ್‌ ಕೃಷಿ ಸಿರಿ-2017ರ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಪಂಚದೀವಟಿಗೆಗಳನ್ನು ಬೆಳಗಿಸಿದ ಅವರು ಮಾತನಾಡಿದರು.

ಶಾಸಕ, ಮಾಜಿ ಸಚಿವ ಅಭಯಚಂದ್ರ ಅವರು ತೆಂಗು ಹೂವನ್ನು ಅರಳಿಸಿ ಕೃಷಿಸಿರಿಗೆ ಸಾಂಪ್ರದಾಯಿಕವಾಗಿ ಚಾಲನೆ ನೀಡಿದರು.

ಸೂಕ್ತ ಪರಿಹಾರ ಕಂಡುಕೊಳ್ಳಬೇಕು
“ಹಿಂದಿನ ಹಾಗೂ ಇಂದಿನ ಕೃಷಿ ವ್ಯವಸ್ಥೆ ಯಲ್ಲಿ ಅಜಗಜಾಂತರವಿದೆ. ಕೃಷಿಯಲ್ಲಿ ಲಾಭವೂ ಇದೆ, ನಷ್ಟವೂ ಇದೆ. ಎಷ್ಟೋ ಸಲ ನಾವು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗದೆ ತೀವ್ರ ನಷ್ಟವನ್ನು ಅನುಭವಿಸುವಂತಾಗುತ್ತದೆ. ಇದಕ್ಕೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ’ ಎಂದು ಅಭಯಚಂದ್ರ ಹೇಳಿದರು.

ಲಕ್ಷಾಂತರ ರೈತರ ಆತ್ಮಹತ್ಯೆ
ಮುಖ್ಯಅತಿಥಿ, ಕೃಷಿ ಬೆಲೆ ಆಯೋಗದ ಅಧ್ಯಕ್ಷ ಪ್ರಕಾಶ್‌ ಕಮ್ಮರಡಿ ಕೃಷಿ ಕ್ಷೇತ್ರ ಎದು ರಿಸುತ್ತಿರುವ ಬಿಕ್ಕಟ್ಟುಗಳನ್ನು ವಿಶ್ಲೇಷಿಸಿದರು. “ಕಳೆದ 10 ವರ್ಷಗಳಲ್ಲಿ ಲಕ್ಷಾಂತರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಿಕ್ಕಟ್ಟಿನ ಬಗ್ಗೆ ಸೂಕ್ತ ಸಂಶೋಧನೆಗಳಾಗಬೇಕಿದೆ. ನಮ್ಮ ರೈತಾಪಿ ವರ್ಗದಲ್ಲಿರುವ  ಭರ ವಸೆಯ ಕೊರತೆ ನೀಗ ಬೇಕಾಗಿದೆ. ಇಂದು ಸರಕಾರ ರೈತರ ಆದಾಯವನ್ನು ದ್ವಿಗುಣಗೊಳಿಸು ತ್ತೇವೆಂದರೂ ರೈತರು ಅದರಿಂದ ಉತ್ತೇಜಿತರಾಗಿಲ್ಲ’ ಎಂದು ಪ್ರಕಾಶ್‌ ಕಮ್ಮರಡಿ ಅವರು ವಿಷಾದಿಸಿದರು.ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ  ಪ್ರಸ್ತಾವನೆಗೈದರು. 

Advertisement

ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ, ಸಂಸ್ಥೆಯ ಟ್ರಸ್ಟಿ ಜಯಶ್ರೀ  ಅಮರನಾಥ ಶೆಟ್ಟಿ,  ಕಸಾಪ ರಾಜ್ಯ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯದ ಡೀನ್‌ ಡಾ| ವೇಣು ಗೋಪಾಲ್‌, ಪಶುಸಂಗೋಪನಾ ಇಲಾಖೆಯ ಡಾ| ಆನಂದ, ಮೂಡಬಿದಿರೆಯ ಕೃಷಿ ವಿಚಾರ ವಿನಿಮಯ ಕೇಂದ್ರದ ಅಧ್ಯಕ್ಷ ರಾಜವರ್ಮ ಬೈಲಂಗಡಿ, ದಕ್ಷಿಣ ಕನ್ನಡ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ  ಶಿರ್ತಾಡಿ ಸಂಪತ್‌ ಸಾಮ್ರಾಜ್ಯ, ಕರ್ನಾಟಕ ರಾಜ್ಯ ರೈತ ಸಂಘದ ವಲಯಾಧ್ಯಕ್ಷ ಧನಕೀರ್ತಿ ಬಲಿಪ ಉಪಸ್ಥಿತರಿದ್ದರು.

ಬೆಂಬಲ ಬೆಲೆಗೆ ಕಾನೂನಿನ ಚೌಕಟ್ಟು  ಇಲ್ಲ ?
ರೈತರ ಹಿತರಕ್ಷಣೆಗಾಗಿ ಸರಕಾರ ಬೆಂಬಲ ನೀಡುತ್ತದೆ. ಆದರೆ ಈ ಬೆಂಬಲ ಬೆಲೆಗೆ ಕಾನೂನಿನ ಯಾವುದೇ ಚೌಕಟ್ಟಿಲ್ಲ. ಇದೇ ಪರಿಸ್ಥಿತಿ ಮುಂದು ವರಿದರೆ ರೈತರು ಭವಿಷ್ಯದಲ್ಲಿ ಕೃಷಿ ಯನ್ನು ಕೈಬಿಡುವ ಅಪಾಯ ಕಾದಿದೆ. 
 ಪ್ರಕಾಶ್‌ ಕಮ್ಮರಡಿ

Advertisement

Udayavani is now on Telegram. Click here to join our channel and stay updated with the latest news.

Next