Advertisement

ಕೇರಳಕ್ಕೆ ವಿಶ್ವದ ಮೊದಲ ತಾಳೆ ಹಸ್ತಪ್ರತಿ ಸಂಗ್ರಹಾಲಯ ಶುರು

07:46 PM Jan 05, 2023 | Team Udayavani |

ತಿರುವನಂತಪುರ : ಭಾರತದ ಮಣ್ಣಿನಲ್ಲಿ ಐರೋಪ್ಯ ಶಕ್ತಿಗಳ ಮಟ್ಟಹಾಕಿದ ಮೊದಲ ರಾಜಮನೆತನ ತಿರುವಾಂಕೂರು ಸಾಮ್ರಾಜ್ಯದ ಕಥನಗಳ ಜತನವಾಗಿಟ್ಟಿದ್ದ ಕೇರಳದಲ್ಲಿ ವಿಶ್ವದ ಮೊದಲ ತಾಳೆ ಹಸ್ತಪ್ರತಿಗಳ ವಸ್ತುಸಂಗ್ರಹಾಲಯ ನಿರ್ಮಾಣಗೊಂಡಿದೆ. ಈ ಮೂಲಕ ರಾಜ್ಯದ ಪ್ರಾಚೀನ ಸಾಂಸ್ಕೃತಿ, ಶೈಕ್ಷಣಿಕ ವಿಚಾರಗಳ ಬೆಳಕು ಜಗತ್ತನ್ನು ತಲುಪುವಂತಾಗಿದೆ.

Advertisement

ರಾಜಧಾನಿ ತಿರುವನಂತಪುರದಲ್ಲಿ ತಾಳೆ ಹಸ್ತಪ್ರತಿಗಳ ವಸ್ತು ಸಂಗ್ರಹಾಲಯವನ್ನು ನಿರ್ಮಾಣ ಮಾಡಲಾಗಿದ್ದು, ಇದು ವಿಶ್ವದ ಮೊದಲ ತಾಳೆ ಹಸ್ತಪ್ರತಿ ಸಂಗ್ರಹಾಲಯ ಎನ್ನುವ ಖ್ಯಾತಿಗೂ ಪಾತ್ರವಾಗಿದೆ. 19ನೇ ಶತಮಾನದ ಅಂತ್ಯದವರೆಗೆ ಬರೋಬರಿ 650 ವರ್ಷಗಳ ಅವಧಿಯಲ್ಲಿನ ತಿರುವಾಂಕೂರಿನ ಆಡಳಿತ, ಸಾಮಾಜಿಕ, ಸಾಂಸ್ಕೃತಿ -ಆರ್ಥಿಕ ವಿಚಾರ ಭಂಡಾರವನ್ನು ಈ ತಾಳೆ ಹಸ್ತಪ್ರತಿಗಳ ದಾಖಲೆಯಲ್ಲಿ ಕಾಣಬಹುದು.

ಕಳೆದವಾರವಷ್ಟೇ ಸಾರ್ವಜನಿಕರ ವೀಕ್ಷಣೆಗೆ ತೆರೆದುಕೊಂಡಿರುವ ತಾಳೆ ಹಸ್ತಪ್ರತಿ ವಸ್ತುಸಂಗ್ರಹಾಲಯದಲ್ಲಿ 187 ತಾಳೆ ಹಸ್ತಪ್ರತಿಗಳಿದ್ದು, ರಾಜ್ಯಾದ್ಯಂತ ಸಂಗ್ರಹಿಸಿದ್ದ 1.5 ಕೋಟಿಗೂ ಅಧಿಕ ತಾಳೆಗರಿ ದಾಖಲೆಗಳನ್ನು ಪರಿಶೀಲಿಸಿ ಇವುಗಳನ್ನು ಆಯ್ಕೆ ಮಾಡಿ, ಪ್ರದರ್ಶಿಸಲಾಗುತ್ತಿದೆ. ಸಂಗ್ರಹಿಸಿರುವ ಹಸ್ತ ಪ್ರತಿಗಳ ಪೈಕಿ ಡಚ್ಚರ ವಿರುದ್ಧದ ಭಾರತದ ಜಯ ಹಾಗೂ ಡಚ್‌ ಸಾಮ್ರಾಜ್ಯದ ಅಧಃಪತನದ ದಾಖಲೆಗಳೂ ಸೇರಿವೆ.

Advertisement

Udayavani is now on Telegram. Click here to join our channel and stay updated with the latest news.

Next