Advertisement

ದೇಶ ಪರ್ಯಟನೆಯ ಅನುಭವ ಕಥನ

07:26 AM Jan 30, 2019 | |

ಗಂಡನೊಂದಿಗಿನ ತಮ್ಮ ಮೊದಲ ವಿದೇಶಿ ಪ್ರವಾಸದ ಅನುಭವಗಳನ್ನು ಲೇಖಕಿಯೋರ್ವರು ವಿಶ್ವ ದಾಖಲೆಯ ಪರ್ಯಟನಾ ಎಂಬ ಪ್ರವಾಸ ಕಥನದಲ್ಲಿ ದಾಖಲಿಸಿದ್ದಾರೆ. ತಮ್ಮ ಇಳಿವಯಸ್ಸಿನ ಪ್ರಾಯದಲ್ಲಿ ದೇಶಗಳನ್ನು ಸುತ್ತಿ, ಅದರ ಅನುಭವ ಕಥೆಯನ್ನು ಮನಮುಟ್ಟುವಂತೆ ವಿವರಿಸಿದ್ದಾರೆ ಶಾಲಿನಿ ದೇವಪ್ರಕಾಶ್‌.

Advertisement

ಘಟನೆ 1
ಲೇಖಕರು ಮೊದಲನೇಯದಾಗಿ ಫ್ರಾನ್ಸ್‌ ದೇಶದಲ್ಲಿ ಇಳಿದಾಗ, ಅಲ್ಲಿನ ವಿಮಾನ ನಿಲ್ದಾಣವೇನೋ ಸ್ವಚ್ಛವಾಗಿದೆ. ಆದರೆ ಅಲ್ಲಿ ಸಿಗುವ ಆಹಾರ ಪದಾರ್ಥಗಳ ಬೆಲೆ ಮಾತ್ರ ದುಬಾರಿಯಾಗಿತ್ತು. ದೆಹಲಿಯಿಂದ ಫ್ರಾನ್ಸ್‌ಗೆ ಬರಬೇಕಿದ್ದ ಕೆಲ ಪ್ರಯಾಣಿಕರು ವಿಮಾನ ರದ್ದಾಗಿ ಬೇರೆ ನಿಲ್ದಾಣದಲ್ಲಿ ಇಳಿದುಕೊಂಡಿದ್ದರು. ಭಾಷೆ ಬರದ ಕಾರಣ ಭಯಗೊಂಡಿದ್ದ ಅವರ ಸಹಾಯಕ್ಕೆ ಸ್ಥಳೀಯರು ಧಾವಿಸಿದರು ಎಂದು ಲೇಖಕರು ಅನುಭವಗಳನ್ನು ಮೆಲಕು ಹಾಕಿದ್ದಾರೆ.

ಘಟನೆ 2
ಯುರೋಪ್‌ ಪ್ರವಾಸ ಹೋಗುವ ಸಿದ್ಧತೆಯಲ್ಲಿದ್ದು ವೀಸಾಕ್ಕಾಗಿ ಮುಂಬಯಿಗೆ ಪ್ರಯಾಣಿಸಿದ್ದೆವು ಆ ಸಮಯದಲ್ಲಿ ನನಗೆ ಜ್ವರ ಬಂದಿದ್ದ‌ರಿಂದ ಹೋಗಲು ಹಿಂದೇಟು ಹಾಕಬೇಕಾಯಿತು. ಅನಂತರ ವೈದ್ಯರಲ್ಲಿ ಪರೀಕ್ಷಿಸಿದಾಗ, ನಿಮ್ಮ ಪ್ರಯಾಣಕ್ಕೆ ಯಾವುದೇ ತೊಂದರೆಯಿಲ್ಲ ಎಂದು ಖಾತ್ರಿಪಡಿಸಿದಾಗ ಬಳಿಕ ಯುರೋಪ್‌ ಕಡೆ ಪ್ರಯಾಣ ಬೆಳೆಸಿದೆವು ಎಂದುಪೂರ್ವ ಸಿದ್ಧತೆಯ ಕುರಿತು ತಿಳಿಸಿದ್ದಾರೆ.

ಘಟನೆ 3
ಸ್ವಿಟ್ಜರ್‌ಲ್ಯಾಂಡ್‌ಗೆ ಜುಲೈನಲ್ಲಿ ತೆರಳಿದ್ದ ಕಾರಣ ಅಷ್ಟೊಂದು ಹಿಮಪಾತವಿರಲಿಲ್ಲ. ಬೆಳೆಯ ಕೊಯ್ಲು ಕೂಡ ಮುಗಿದಿತ್ತು. ಅಲ್ಲಲ್ಲಿ ಒಂದೊಂದು ಮನೆಗಳು ಕಾಣಸಿಗುತ್ತಿದ್ದವು. ಮನೆಗಳ ಮುಂದೆ ಸುಂದರ ವಾದ ಹೂ- ತೋಟ, ಹಣ್ಣಿನ ಗಿಡಗಳನ್ನು ಬೆಳಸ ಲಾಗಿತ್ತು. ಸ್ಥಳೀಯ ಕೋಳಿ, ಕುರಿಗಳು ಬಿಳಿ ಬಣ್ಣವಿರು ವುದು ನಮಗೆ ಆಶ್ವರ್ಯವಾಗಿ ಕಂಡಿತು.

ಲೇಖಕಿ ಜಿನೀವಾ ಸರೋವರ ನೋಡಲು ಹೋದ ವೇಳೆ ರಸ್ತೆ ರೈಲಿನಲ್ಲಿ ಒಂದು ಸುತ್ತು ಬರಲು ನಿರ್ಧರಿಸಿದ್ದರು. ಆದರೆ ಏಜೆಂಟ್ 4 ಯೂರೋ ಎಂದಿದ್ದ.ಆದರೆ ರೈಲಲ್ಲಿ 5 ಯೂರೋ ಎಂದಿತ್ತು, ಈ ವ್ಯಾಕ್ಯನವನ್ನು ಲೇಖಕಿ ಹಂಚಿಕೊಂಡಿದ್ದಾರೆ.

Advertisement

ದೇಶ ಸುತ್ತು, ಕೋಶ ಓದು ಎಂಬ ಮಾತಿನಂತೆ ಕೋಶ ಓದುವುದರ ಜತೆಗೆ ದೇಶವನ್ನೂ ಸುತ್ತಿರುವ ಅನುಭವಗಳನ್ನು ಕೃತಿಯಲ್ಲಿ ಹಂಚಿಕೊಂಡಿರುವುದು ವಿಶೇಷ.

ಕಾತ್ಯಾಯಿನಿ

Advertisement

Udayavani is now on Telegram. Click here to join our channel and stay updated with the latest news.

Next