Advertisement

ಭಾರವಾಗುತ್ತಿದೆ ಈರುಳ್ಳಿ ಖರೀದಿ: ಗ್ರಾಹಕ ಅಳಲು

05:06 PM Dec 02, 2019 | Team Udayavani |

ಮಾಗಡಿ: ಎಲ್ಲಾ ಮಾದರಿಯ ಅಡುಗೆ ತಯಾರಿಗೆ ಈರುಳ್ಳಿ ಬೇಕೇ ಬೇಕು. ಈರುಳ್ಳಿ ಇಲ್ಲದಿದ್ದರೆ ಯಾವುದೇ ಬಗೆಯ ಆಹಾರವೂ ಪರಿ ಪೂರ್ಣವಾಗದು. ಆದರೆ ಈರುಳ್ಳಿ ಖರೀದಿಸಲು ಗ್ರಾಹಕರು ಮಾರುಕಟ್ಟೆಗೆ ಹೋಗಿ ಈರುಳ್ಳಿ ಬೆಲೆ ಕೇಳಿದರೆ ಸಾಕು ಗ್ರಾಹಕರಲ್ಲಿ ಕಣ್ಣೀರು ಬಾರದೆ ಇರದು. ಈರುಳ್ಳಿ ಬೆಲೆ ಏರಿಕೆಯ ಗ್ರಾಹಕರಲ್ಲಿ ತಳಮಳ ಉಂಟುಮಾಡಿದ್ದು, ಪರಿಪೂರ್ಣ ಆಹಾರಕ್ಕಾಗಿ ಪರಿತಪಿಸುವಂತಾಗಿದೆ.

Advertisement

ಕಳೆದ ವಾರವಷ್ಟೆ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆಕೆ.ಜಿಗೆ 40 ರಿಂದ 50 ರೂ. ಗಳ ಆಸುಪಾಸಿನಲ್ಲಿ ಇತ್ತು. ಈಗ ದಿಢೀರ್‌ ಈರುಳ್ಳಿ ಬೆಲೆ ಕೆ.ಜಿಗೆ 100 ರಿಂದ 150 ರೂಗೆ ದಾಟಿದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಬೆಲೆ ಏರಿಕೆಯಾಗಲಿದೆ ಎಂಬುದು ವರ್ತಕರ ಅಭಿಪ್ರಾಯವಾಗಿದೆ.

ಕಾರ್ತೀಕ ಮಾಸ ಮುಗಿದ ನಂತರ ರೈತರು ಬೆಳೆ ಅವರೆ, ಅಲಸಂದೆ, ತೊಗರಿಕಾಯಿ ಹಾಗೂ ಬಗೆ ಬಗೆಯತರಕಾರಿಗಳು ಮಾರುಕಟ್ಟೆಗೆ ಲಗ್ಗೆಯಿಡುತ್ತಿವೆ. ಇವೆಲ್ಲದಕ್ಕೂ ಈರುಳ್ಳಿ ಮಾತ್ರ ಗಗನಕ್ಕೇರಿದೆ. ಸದ್ಯ ಈರುಳ್ಳಿ ಬೆಲೆ ರೂ.100 ರಿಂದ 150ಕ್ಕೆ ದಾಟಿದೆ. ಉತ್ತಮ ಗುಣಮಟ್ಟದ ಈರುಳ್ಳಿ ಬೆಲೆ 150 ರೂ ಆಗಿದ್ದು, ಸಾಧಾರಣ ಈರುಳ್ಳಿ 120 ರಿಂದ 130 ರೂಗೆ ದೊರಕುತ್ತಿದೆ. ಸಣ್ಣ ಈರುಳ್ಳಿ 100 ರೂ.ಗೆ ವ್ಯಾಪಾರಿ ಗಳು ಮಾರಾಟ ಮಾಡುತ್ತಿದ್ದಾರೆ. ಬರಗಾಲವಿದ್ದರೂ ಸಹ ಇತಿಹಾಸದಲ್ಲೇ ಇಷ್ಟೊಂದು  ಬೆಲೆ ಕಂಡಿರಲಿಲ್ಲ. ಎಂಬ ಮಾತು ವರ್ತಕರಲ್ಲೇ ಕೇಳಿಬಂದಿದೆ.

ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಕೇಳಿ ಗ್ರಾಹಕರಲ್ಲಿನಿಜಕ್ಕೂ ಕಣ್ಣೀರು ತರಿಸಿದೆ. ಕಳೆದ ತಿಂಗಳಿಗೆ ಹೊಲಿಸಿದರೆ ಮೂರು ಪಟ್ಟು ಬೆಲೆ ಏರಿಕೆಯಾಗಿದೆ. ದಿಢೀರ್‌ ಬೆಲೆ ಏರಿಕೆಯಿಂದ ಗ್ರಾಹಕರು ಗ್ರಾಂ ಲೆಕ್ಕದಲ್ಲಿ ಈರುಳ್ಳಿ ಖರೀಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ಬೆಳ್ಳುಳ್ಳಿಯೂ ಸಹ ದುಬಾರಿಯಾಗಿದೆ. ಕೆ.ಜಿ.ಬೆಳ್ಳುಳ್ಳಿ 200 ರೂ ದಾಟಿದೆ. ಇದರ ಖರೀದಿಗೂ ಜನ ಬೆಸ್ತುಬಿದ್ದಾರೆ. ಈರುಳ್ಳಿ ಬೆಳ್ಳುಳ್ಳಿಗಾಗಿ ಗ್ರಾಹಕರ ಜೇಬು ಮಾತ್ರ ಸುಡುತ್ತಿದೆ.

ಬೇಡಿಕೆಗೆ ಅನುಗುಣವಾಗಿ ಈರುಳ್ಳಿ ಲಭ್ಯವಿಲ್ಲ: ಬೇಡಿಕೆಯಷ್ಟು ಈರುಳ್ಳಿ ಮಾರುಕಟ್ಟೆ ಬರುತ್ತಿಲ್ಲ. ದಿನೇದಿನೇ ಈರುಳ್ಳಿ ಚೀಲವೂ ಕಡಿಮೆಯಾಗುತ್ತಿದ್ದು, ಗ್ರಾಹಕರಿಗೆ ಅಗತ್ಯ ಈರುಳ್ಳಿ ಒದಗಿಸಲು ಸಾಧ್ಯ ವಾಗುತ್ತಿಲ್ಲ ಎಂಬ ಆತಂಕವೂ ವ್ಯಕ್ತವಾಗಿದೆ.

Advertisement

ಕೊಳೆತ ಈರುಳ್ಳಿ ಮಾರಾಟ: ಚಿಲ್ಲರೆ ಮಾರುಕಟ್ಟೆಯಲ್ಲಿ ಅತ್ಯಂತ ಕಳಪೆ ದರ್ಜೆಯ ಈರುಳ್ಳಿ ಕೆ.ಜಿಗೆ 80 ಗೆ ಮಾರಾಟ ಮಾಡುತ್ತಿದ್ದಾರೆ. ಗ್ರಾಹಕರುಕೆ.ಜಿ. ಈರುಳ್ಳಿ ಖರೀದಿಸಿ ಮನೆ ತಂದಿರೆ, ಕನಿಷ್ಠ ನಾಲ್ಕೈದು ಈರುಳ್ಳಿ ಕೊಳೆತಿರುತ್ತದೆ ಎಂಬುದು ಗ್ರಾಹಕರ ದೂರಾಗಿದೆ.

 

-ತಿರುಮಲೆ ಶ್ರೀನಿವಾಸ್‌

Advertisement

Udayavani is now on Telegram. Click here to join our channel and stay updated with the latest news.

Next