Advertisement
ಸೃಜನಶೀಲ ಮನಸ್ಸುಗಳನ್ನು ಗಮನದಲ್ಲಿರಿಸಿಕೊಂಡು ಈ ಸ್ಪೀಕರ್ ಅನ್ನು ಸಿದ್ಧಪಡಿಸಲಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಸ್ಪೀಕರ್ ಅನ್ನು ಸ್ಮಾರ್ಟ್‌ಫೋನ್ ಆ್ಯಪ್ ಮುಖಾಂತರ ನಿಯಂತ್ರಿಸಬಹುದಾಗಿದೆ. 33ರಿಂದ 23,000 ಫ್ರೀಕ್ವೆನ್ಸಿ ರೇಂಜ್ ಒಳಗಿನ ಶಬ್ದವನ್ನು ಈ ಸ್ಪೀಕರ್ ಹೊರಡಿಸುತ್ತದೆ. ಇದರೊಳಗೆ ಒಂದು 8 ಇಂಚಿನ ವೂಫರ್, ಎರಡು ಮಿಡ್ ರೇಂಜ್, 2 ಫುಲ್ ರೇಂಜ್ ಮತ್ತು ಎರಡು ಟ್ವೀಟರ್ ಗಳನ್ನು ನೀಡಲಾಗಿದೆ. ಕಪ್ಪು, ಬಿಳಿ ಬಣ್ಣಗಳಲ್ಲಿ ಈ ಸ್ಪೀಕರ್ ಲಭ್ಯ.
Related Articles
Advertisement
ಇದರ ಹೆಸರು “ಬಿಯೆಲ್ ಮೋಲ್ಟನ್ ಲಾವಾ ಲ್ಯಾಂಪ್’. ಈ ಎಲ್‌ಇಡಿ ಬಲ್ಬನ್ನು ಜಗತ್ಪ್ರಸಿದ್ಧ ಜಪಾನಿ ಡಿಸೈನರ್ ವಿನ್ಯಾಸಗೊಳಿಸಿದ್ದಾರೆ. ಲಾವಾ ರಸ ಕರಗುತ್ತಿರುವಂತೆ ಕಾಣುವುದರಿಂದ ಆ ಹೆಸರನ್ನು ನೀಡಲಾಗಿದೆ ಎಂದು ಸಂಸ್ಥೆ ಹೇಳುತ್ತಿದೆ. ವಿನ್ಯಾಸ, ಆಕರ್ಷಕ ಬೆಳಕಿನ ಸಂಯೋಜನೆ ಇವೆರಡು ಅಂಶವನ್ನು ಹೊರತುಪಡಿಸಿದರೆ ಎಲ್ಲಾ ಎಲ್‌ಇಡಿ ಬಲ್ಬುಗಳಲ್ಲೂ ಇರುವ ಕಡಿಮೆ ವಿದ್ಯುತ್ ಬಳಕೆ, ದೀರ್ಘ ಬಾಳಿಕೆಯನ್ನು ಇದೂ ಹೊಂದಿದೆ.
ಬೆಲೆ: 23,000 ರೂ. ನಲವತ್ತು ಕ್ಯಾಂಡಲ್, 60