Advertisement

ವೆಚ್ಚ ಕ್ರಮಬದ್ಧವಿರಲಿ: ಸುದೀಪ್ತ ಗುಹಾ

11:03 AM Apr 03, 2019 | Vishnu Das |

ಮಂಗಳೂರು: ಮುಕ್ತ -ನ್ಯಾಯ ಸಮ್ಮತ ಚುನಾವಣೆಗಾಗಿ ಚುನಾವಣ ವೆಚ್ಚ ಕ್ರಮಬದ್ಧವಾಗಿರಬೇಕು ಎಂದು ಚುನಾವಣ ವೆಚ್ಚ ವೀಕ್ಷಕರಾದ ಸುದೀಪ್ತ ಗುಹಾ ಅಭ್ಯರ್ಥಿಗಳಿಗೆ ಸೂಚಿಸಿದ್ದಾರೆ.

Advertisement

ಅಭ್ಯರ್ಥಿಗಳು ಮತ್ತು ಪಕ್ಷದ ಪ್ರತಿನಿಧಿ ಗಳನ್ನು ಉದ್ದೇಶಿಸಿ ಅವರು ಮಂಗಳವಾರ ಮಾತನಾಡಿದರು. ಪಕ್ಷಗಳ ಖರ್ಚುವೆಚ್ಚಗಳ ಪರಿಶೀಲನೆ ನಡೆಸಿದ ಅವರು, ಚುನಾವಣ ಆಯೋಗ ಹಲವು ಹಂತಗಳಲ್ಲಿ ವಿವಿಧ ಅಧಿಕಾರಿಗಳ ಮೂಲಕ ಖರ್ಚುವೆಚ್ಚದ ಬಗ್ಗೆ ಎಲ್ಲರ ಮೇಲೆ ನಿಗಾ ವಹಿಸುತ್ತಿದೆ ಎಂದರು.

ಎಲೆಕ್ಟ್ರಾನಿಕ್‌ ಮಾಧ್ಯಮಗಳಲ್ಲಿ ಪ್ರಚಾರ ಮಾಡುವ ಪ್ರಚಾರ ಸಾಮಗ್ರಿಗಳಿಗೆ ಕಡ್ಡಾಯ ವಾಗಿ ಮಾಧ್ಯಮ ಪ್ರಮಾಣೀಕರಣ ಮತ್ತು ಪರಿಶೀಲನ ಸಮಿತಿಯ ನೋಡಲ್‌ ಅಧಿಕಾರಿಗಳಿಂದ ಪ್ರಮಾಣಪತ್ರವನ್ನು ಪಡೆದು ಖರ್ಚುವೆಚ್ಚಗಳ ವಿವರಗಳನ್ನು ನೀಡಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next