ನವದೆಹಲಿ: ಕಳೆದ ಎರಡು ತಿಂಗಳಲ್ಲಿ ಪುಂಡಾನೆಯೊಂದು ಕನಿಷ್ಠ 16 ಮಂದಿ ಗ್ರಾಮಸ್ಥರನ್ನು ಕೊಂದು ಹಾಕಿರುವ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ. ಆನೆಗಳ ಹಿಂಡಿನಿಂದ ಹೊರಬಂದ ಈ ಆನೆ ದಾಂಧಲೆ ನಡೆಸಲು ಕಾರಣವಾಗಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಶಿರಸಿ : ಅಂದರ್ ಬಾಹರ್ ಆಡುತ್ತಿದ್ದ ಗುಂಪಿನ ಮೇಲೆ ದಾಳಿ : 7 ಜನರ ಬಂಧನ
ಸುಮಾರು 22 ಆನೆಗಳ ಹಿಂಡಿನಲ್ಲಿದ್ದ 15-16 ವರ್ಷದ ಈ ಗಂಡಾನೆ ಎರಡು ತಿಂಗಳ ಹಿಂದೆ ತನ್ನ ಗುಂಪಿನಿಂದ ಪ್ರತ್ಯೇಕವಾಗಿ ಹೊರಬಂದಿತ್ತು. ಆ ಬಳಿಕ ಜಾರ್ಖಂಡ್ ನ ಬುಡಕಟ್ಟು ಪ್ರದೇಶದ ಸಂತಲ್ ಪರ್ಗನದಲ್ಲಿ ದಾಂಧಲೆ ನಡೆಸಿದ ಪರಿಣಾಮ 15ಕ್ಕೂ ಅಧಿಕ ಗ್ರಾಮಸ್ಥರು ಸಾವನ್ನಪ್ಪಿರುವುದಾಗಿ ವರದಿ ವಿವರಿಸಿದೆ.
ಬಹುತೇಕ ಈ ಆನೆಗೆ ಮದವೇರಿರಬಹುದು. ಅಥವಾ ಇತರ ಗಂಡಾನೆಗಳ ಜತೆಗಿನ ಲೈಂಗಿಕ ದ್ವೇಷದಿಂದ ತಮ್ಮ ಗುಂಪಿನಿಂದ ಈ ಆನೆಯನ್ನು ಹೊರಹಾಕಿರಬಹುದು ಎಂದು ಪ್ರಾದೇಶಿಕ ಅರಣ್ಯಾಧಿಕಾರಿ ಸತೀಶ್ ಚಂದ್ರ ರಾಯ್ ಎಎಫ್ ಪಿಗೆ ತಿಳಿಸಿದ್ದಾರೆ.
ನಾವು ನಿರಂತರವಾಗಿ ಆನೆಯ ನಡವಳಿಕೆಯನ್ನು ಅಧ್ಯಯನ ಮಾಡುತ್ತಿದ್ದು, ಇದಕ್ಕಾಗಿ 20 ಜನರ ಅಧಿಕಾರಿಗಳ ತಂಡ ಕಾರ್ಯನಿರ್ವಹಿಸುತ್ತಿದೆ. ಯಾಕೆಂದರೆ ಜನರು ಮತ್ತು ಪ್ರಾಣಿಗಳನ್ನು ರಕ್ಷಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ ಎಂದು ರಾಯ್ ವಿವರಿಸಿದ್ದಾರೆ.