Advertisement

MP ಮಹುವಾ ಮೊಯಿತ್ರಾಗೆ ಉಚ್ಚಾಟನೆ ಶಿಕ್ಷೆ?ಲೋಕಸಭೆ ಎಥಿಕ್ಸ್‌ ಕಮಿಟಿಯ ವರದಿಯಲ್ಲಿ ಉಲ್ಲೇಖ

10:18 PM Nov 08, 2023 | Team Udayavani |

ನವದೆಹಲಿ:ಸಂಸತ್‌ನಲ್ಲಿ ಅದಾನಿ ಗ್ರೂಪ್‌ ವಿರುದ್ಧ ಪ್ರಶ್ನೆ ಕೇಳಿ ವಿವಾದಕ್ಕೆ ಗುರಿಯಾಗಿರುವ ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ಅವರನ್ನು ಸಂಸತ್‌ ಸದಸ್ಯ ಸ್ಥಾನದಿಂದ ಉಚ್ಚಾಟಿಸಲು ಲೋಕಸಭೆಯ ಎಥಿಕ್ಸ್‌ ಕಮಿಟಿ ಶಿಫಾರಸು ಮಾಡಿದೆ ಎಂದು ಹೇಳಲಾಗಿದೆ.

Advertisement

ಈ ಬಗ್ಗೆ ಸಮಿತಿ 500 ಪುಟಗಳ ವರದಿಯನ್ನು ಅದು ಸಿದ್ಧಪಡಿಸಿದ್ದು, ಅದರಲ್ಲಿ ಈ ಅಂಶವನ್ನು ಶಿಫಾರಸು ಮಾಡಿದೆ. ಜತೆಗೆ ಒಟ್ಟಾರೆ ಪ್ರಕರಣದ ವಿರುದ್ಧ ಕಾಲಮಿತಿಯಲ್ಲಿ ತನಿಖೆ ನಡೆಸಿ ವರದಿ ನೀಡಬೇಕು ಎಂದು ಕಮಿಟಿ ಶಿಫಾರಸು ಮಾಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ”ಎನ್‌ಡಿಟಿವಿ’ ವರದಿ ಮಾಡಿದೆ.

ಇದೇ ವೇಳೆ, ಕಮಿಟಿಯ ಸದಸ್ಯರು ಮಹುವಾ ಮೊಯಿತ್ರಾ ವಿರುದ್ಧ ತನಿಖೆ ನಡೆಸಿರುವ ಬಗೆಗಿನ ಕರಡು ವರದಿಯನ್ನು ಅಂಗೀಕರಿಸುವ ನಿಟ್ಟಿನಲ್ಲಿ ಗುರುವಾರ ಸಭೆ ಸಭೆ ಸೇರಿ ತೀರ್ಮಾನ ಕೈಗೊಳ್ಳಲಿದೆ.

ಸಿಬಿಐ ತನಿಖೆ?
ಇನ್ನೊಂದೆಡೆ, ಮಹುವಾ ಮೊಯಿತ್ರಾ ವಿರುದ್ಧ ಸಿಬಿಐ ತನಿಖೆ ನಡೆಸುವಂತೆ ಲೋಕಪಾಲ್‌ ಆದೇಶಿಸಿದೆ ಎಂದು ಬಿಜೆಪಿ ಸಂಸದ ನಿಶಿಕಾಂತ್‌ ದುಬೆ ಹೇಳಿಕೊಂಡಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ನನ್ನ ದೂರನ್ನು ಆಧರಿಸಿ ಇಂದು ಲೋಕಪಾಲ್‌ ಮಹುವಾ ಅವರ ವಿರುದ್ಧ ಸಿಬಿಐ ತನಿಖೆಗೆ ಆದೇಶಿಸಿದೆ’ ಎಂದಿದ್ದಾರೆ. ಇತ್ತ ಪ್ರತಿಕ್ರಿಯಿಸಿರುವ ಮಹುವಾ, ಸಿಬಿಐ ಪ್ರಕರಣ ದಾಖಲಿಸುವುದಾದರೆ ಮೊದಲಿಗೆ ಕಲ್ಲಿದ್ದಲು ಹಗರಣ ಸಂಬಂಧಿಸಿದಂತೆ ಅದಾನಿ ಗ್ರೂಪ್ಸ್‌ ವಿರುದ್ಧ ಎಫ್ಐಆರ್‌ ದಾಖಲಿಸಬೇಕು ಎಂದಿದ್ದಾರೆ.

ಉದ್ಯಮಿ ದರ್ಶನ್‌ ಹೀರಾನಂದಿನಿ ಅವರಿಂದ ಲಂಚ ಪಡೆದು ಲೋಕಸಭೆಯಲ್ಲಿ ಅದಾನಿ ಗ್ರೂಪ್ಸ್‌ ಹಾಗೂ ಮೋದಿ ಅವರನ್ನು ಗುರಿಯಾಗಿಸಿ ಮಹುವಾ ಪ್ರಶ್ನಿಸಿದ್ದು ವಿವಾದಕ್ಕೆ ಕಾರಣವಾಗಿದೆ. ಜತೆಗೆ ತಮ್ಮ ಲೋಕಸಭೆಯ ವೆಬ್‌ಸೈಟ್‌ನ ಲಾಗ್‌ಇನ್‌ ವಿವರಗಳನ್ನು ಹೀರಾನಂದಾನಿಯವರಿಗೆ ನೀಡಿದನ್ನೂ ಮೊಯಿತ್ರಾ ಒಪ್ಪಿಕೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next