ಲಾತೂರ್/ಹೊಸದಿಲ್ಲಿ: ಇಸ್ಲಾಂಗೆ ಮತಾಂ ತರವಾಗಿ ನಕಲಿ ಪಾಸ್‌ಪೋರ್ಟ್ ಮೂಲಕ ಆಫ್ರಿಕಾಕ್ಕೆ ಪರಾರಿಯಾಗಲು ಯತ್ನಿಸಿದ್ದ ವ್ಯಕ್ತಿಯನ್ನು ಮಹಾರಾಷ್ಟ್ರ ಉಗ್ರ ನಿಗ್ರಹ ದಳ(ಎಟಿಎಸ್) ಬಂಧಿಸಿದೆ. ಆತನನ್ನು ಉದ್ಗೀರ್‌ನ ನರಸಿಂಗ್ ಜೈರಾಂ ಭುಯಿಕರ್ ಅಲಿಯಾಸ್ ಮೊಹಮ್ಮದ್ ರೆಹಮಾನ್ ಆದಂ ಎಂದು ಗುರುತಿಸಲಾಗಿದೆ.
ವರದಿಗಳ ಪ್ರಕಾರ ಈತ ಝಹೀರಾ ಬಾದ್‌ಗೆ ಸೇರಿದ ವ್ಯಕ್ತಿ. ಉದ್ಗೀರ್‌ಗೆ ಕೆಲವು ವರ್ಷಗಳ ಹಿಂದೆ ಬಂದಿದ್ದ. ಬೇಕರಿಯಲ್ಲಿ ಆತ ಕೆಲಸ ಮಾಡಿಕೊಂಡಿದ್ದ. ಬಳಿಕ ಇಸ್ಲಾಂಗೆ ಮತಾಂತರಗೊಂಡು ಹೆಸರು ಬದಲಿಸಿದ್ದ.
ಈ ಸಂದರ್ಭದಲ್ಲಿ ಆತ ಆಫ್ರಿಕಾಕ್ಕೆ ತೆರ ಳುವ ಉದ್ದೇಶದಿಂದ ನಕಲಿ ದಾಖಲೆಗಳನ್ನು ನೀಡಿ ಆಧಾರ್, ಪಾನ್‌ಕಾರ್ಡ್ ಮಾಡಿಸಿ ಕೊಂಡಿದ್ದ. ಅವುಗಳನ್ನು ಉಪಯೋಗಿಸಿ ಕೊಂಡು ಪಾಸ್‌ಪೋರ್ಟ್ ಮಾಡಿಸಿಕೊಂ ಡಿದ್ದ. ಜತೆಗೆ ಬ್ಯಾಂಕ್ ಖಾತೆ ಕೂಡ ತೆರೆದಿದ್ದ. ದಾಖಲೆಗಳು ನಕಲಿ ಎಂದು ಪೊಲೀಸ್ ತನಿಖೆಯಿಂದ ದೃಢಪಟ್ಟ ಬಳಿಕ ಪಾಸ್‌ಪೋರ್ಟ್ ರದ್ದು ಮಾಡುವಂತೆ ಶಿಫಾರಸು ಮಾಡಿದ್ದರು. ಇದರ ಹೊರತಾಗಿಯೂ ಏಜೆಂಟ್ ಒಬ್ಬನ ಮೂಲಕ ಆತ ಪಾಸ್‌ಪೋರ್ಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾ ಗಿದ್ದ. ಅನಂತರ ಆಫ್ರಿಕಾಕ್ಕೆ ತೆರಳುವ ಪ್ರಯತ್ನ ದಲ್ಲಿ ದ್ದಾಗ ಎಟಿಎಸ್ ಆತನನ್ನು ಬಂಧಿಸಿದೆ. ಯಾವ ಕಾರಣಕ್ಕಾಗಿ ಆತ ಇಸ್ಲಾಂಗೆ ಮತಾಂ ತರವಾಗಿದ್ದ ಮತ್ತು ಆಫ್ರಿಕಾಕ್ಕೆ ಏಕೆ ತೆರಳುವ ವನಿದ್ದ ಎಂಬ ಮಾಹಿತಿ ಬಗ್ಗೆ ತನಿಖೆ ಮುಂದು ವರಿದಿದೆ. ಭಯೋತ್ಪಾದಕ ಚಟುವ ಟಿಕೆಯ ನಿಟ್ಟಿನಲ್ಲೂ ತನಿಖೆ ನಡೆಸಲಾಗುತ್ತಿದೆ.
ನ್ಯಾಯಾಂಗ ವಶಕ್ಕೆ: ಈ ನಡುವೆ, ಐಸಿಸ್ ಪ್ರೇರಿತ ಉಗ್ರ ಸಂಘಟನೆಗೆ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿದ್ದಾನೆ ಎಂಬ ಶಂಕೆ ಹಿನ್ನೆಲೆಯಲ್ಲಿ ಪೊಲೀಸರಿಂದ ಬಂಧನಕ್ಕೊಳ ಗಾಗಿರುವ ಮೊಹಮ್ಮದ್ ನಯೀಮ್ ಎಂಬಾತನನ್ನು ಫೆ.6ರ ವರೆಗೆ ನ್ಯಾಯಾಂಗ ವಶಕ್ಕೆ ಒಪ್ಪಿಸುವಂತೆ ಸ್ಥಳೀಯ ಕೋರ್ಟ್ ಆದೇಶ ನೀಡಿದೆ.